ಜನವರಿ 2ರಿಂದ ಅಧಿಕಾರ

ಇನ್ಫೋಸಿಸ್‌ ನೂತನ ಸಿಇಒ ಆಗಿ ಸಲಿಲ್‌ ನೇಮಕ

ಇನ್ಫೋಸಿಸ್‌ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಸಲಿಲ್‌ ಎಸ್‌ ಪರೇಖ್‌ ಅವರನ್ನು ಸಂಸ್ಥೆಯ ನಿರ್ದೇಶಕ ಮಂಡಳಿ ಶನಿವಾರ ನೇಮಕ ಮಾಡಿದೆ.

ಇನ್ಫೋಸಿಸ್‌ ನೂತನ ಸಿಇಒ ಆಗಿ ಸಲಿಲ್‌ ನೇಮಕ

ಬೆಂಗಳೂರು: ಇನ್ಫೋಸಿಸ್‌ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಸಲಿಲ್‌ ಎಸ್‌ ಪರೇಖ್‌ ಅವರನ್ನು ಸಂಸ್ಥೆಯ ನಿರ್ದೇಶಕ ಮಂಡಳಿ ಶನಿವಾರ ನೇಮಕ ಮಾಡಿದೆ.

ಐಟಿ ಸೇವಾ ಕ್ಷೇತ್ರದಲ್ಲಿ 30 ವರ್ಷಗಳ ಅನುಭವ ಹೊಂದಿರುವ ಸಲಿಲ್‌ ಸಂಸ್ಥೆಯ ಸಿಇಒ ಮತ್ತು ಎಂಡಿ ಆಗಿ 2018ರ ಜನವರಿ 2ರಿಂದ ಅಧಿಕಾರ ವಹಿಸಲಿದ್ದಾರೆ. 'ಐಟಿ ಕ್ಷೇತ್ರದ ಬದಲಾವಣೆಯ ಕಾಲದಲ್ಲಿ ಇನ್ಫೋಸಿಸ್‌ ಮುನ್ನಡೆಸಲು ಸಲಿಲ್‌ ಉತ್ತಮ ಆಯ್ಕೆ' ಎಂದು ಸಂಸ್ಥೆಯ ನಿರ್ದೇಶಕ ಮಂಡಳಿ ಅಧ್ಯಕ್ಷ ನಂದನ್‌ ನಿಲೇಕಣಿ ಅಭಿಪ್ರಾಯ ಪಟ್ಟಿದ್ದಾರೆ.

ಸಲಿಲ್‌ ಅವರು ಕಾರ್ನೆಲ್‌ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್‌ ಸೈನ್ಸ್‌ ಮತ್ತು ಮೆಕಾನಿಕಲ್‌ ಇಂಜಿನಿಯರಿಂಗ್‌ ಸ್ನಾತಕೋತ್ತರ ಪದವಿ, ಬಾಂಬೆ ಐಐಟಿಯಲ್ಲಿ ಏರೋನಾಟಿಕಲ್‌ ಇಂಜಿನಿಯರಿಂಗ್‌ ಬಿ.ಟೆಕ್‌ ಪದವಿ ಹೊಂದಿದ್ದಾರೆ. ಅವರು ಫ್ರೆಂಚ್‌ ಐಟಿ ಸೇವಾ ಸಂಸ್ಥೆ ಕ್ಯಾಪ್‌ಜೆಮಿನಿಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದರು.

ಆಡಳಿತ ಮಂಡಳಿ ಜತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಆಗಸ್ಟ್‌ನಲ್ಲಿ ವಿಶಾಲ್‌ ಸಿಕ್ಕಾ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಯು.ಬಿ. ಪ್ರವೀಣ್‌ ರಾವ್‌ ಅವರನ್ನು ಹಂಗಾಮಿ ಸಿಇಒ, ಎಂಡಿ ಆಗಿ ನೇಮಕ ಮಾಡಲಾಗಿತ್ತು. ಪ್ರವೀಣ್‌ ರಾವ್‌ ಸಿಒಒ ಹಾಗೂ ಸಂಸ್ಥೆಯ ಪೂರ್ಣಾವಧಿ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ತೊಗರಿ: ಕಾಯ್ದಿರುವ ಎರಡು ಲಕ್ಷ ರೈತರು

ಕಲಬುರ್ಗಿ
ತೊಗರಿ: ಕಾಯ್ದಿರುವ ಎರಡು ಲಕ್ಷ ರೈತರು

23 Feb, 2018
ಕುಬೇರರ ಸಂಪತ್ತು ಜಿಡಿಪಿಯ ಶೇ 15ರಷ್ಟು

ನವದೆಹಲಿ
ಕುಬೇರರ ಸಂಪತ್ತು ಜಿಡಿಪಿಯ ಶೇ 15ರಷ್ಟು

23 Feb, 2018

ಬೆಂಗಳೂರು
3 ನವೋದ್ಯಮಗಳಲ್ಲಿ ಅಮೃತ ವಿ.ವಿ ಹೂಡಿಕೆ

ಈ ವರ್ಷ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಗೆದ್ದ ಯೆಲ್ಲೊ ಮೆಸೆಂಜರ್, ಲಿಂಕ್ಸ್‌ ಸ್ಮಾರ್ಟ್‌ ಡಿಎನ್‌ಎ ಮತ್ತು ಬುಕ್‌ಮೈ ಡೈಮಂಡ್‌ ನವೋದ್ಯಮಗಳಲ್ಲಿ ಅಮೃತ ವಿಶ್ವವಿದ್ಯಾಪೀಠಂ ₹ 1.3...

23 Feb, 2018
ಪ್ಯಾನಾಸೋನಿಕ್‌ ‘ಪಿ100’ ಬಿಡುಗಡೆ

ಬೆಂಗಳೂರು
ಪ್ಯಾನಾಸೋನಿಕ್‌ ‘ಪಿ100’ ಬಿಡುಗಡೆ

23 Feb, 2018
ಕೆನರಾ ಬ್ಯಾಂಕ್‌:

ಬೆಂಗಳೂರು
ಕೆನರಾ ಬ್ಯಾಂಕ್‌:

22 Feb, 2018