ಮೈಸೂರು

ಅಲಸಂದೆ, ಅವರೆ ಒಕ್ಕಣೆಗೂ ತೊಂದರೆ

ಬೆಳಿಗ್ಗೆ 8 ಗಂಟೆಯ ಸುಮಾರಿಗೆ ವರುಣನ ಸಿಂಚನ ಬಿರುಸುಗೊಂಡಿತು. ವಾಯು ವಿಹಾರಕ್ಕೆ ತೆರಳಿದವರು ಮಳೆಗೆ ಸಿಲುಕಿದರು. ವಾಹನ ಸವಾರರು ಸುರಿಯುತ್ತಿದ್ದ ಮಳೆಯಲ್ಲಿಯೇ ಸಂಚರಿಸಿದರು.

ಮೈಸೂರಿನಲ್ಲಿ ಶನಿವಾರ ಸುರಿದ ಮಳೆಯಲ್ಲಿಯೇ ವಾಹನ ಸವಾರರು ಸಾಗಿದರು

ಮೈಸೂರು: ‘ಒಕಿ’ ಚಂಡಮಾರುತದ ಪ್ರಭಾವದಿಂದ ಸಾಂಸ್ಕೃತಿಕ ನಗರಿಯಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರಿಯಿತು. ಶನಿವಾರ ನಸುಕಿನಲ್ಲಿ ಆರಂಭವಾದ ಮಳೆಯು ಬೆಳಗಿನವರೆಗೂ ಸೋನೆಯಂತೆ ಸುರಿಯಿತು.

ಬೆಳಿಗ್ಗೆ 8 ಗಂಟೆಯ ಸುಮಾರಿಗೆ ವರುಣನ ಸಿಂಚನ ಬಿರುಸುಗೊಂಡಿತು. ವಾಯು ವಿಹಾರಕ್ಕೆ ತೆರಳಿದವರು ಮಳೆಗೆ ಸಿಲುಕಿದರು. ವಾಹನ ಸವಾರರು ಸುರಿಯುತ್ತಿದ್ದ ಮಳೆಯಲ್ಲಿಯೇ ಸಂಚರಿಸಿದರು. ವರುಣನಿಂದ ರಕ್ಷಣೆ ಪಡೆಯಲು ಪಾದಚಾರಿಗಳು ಛತ್ರಿಯ ಮೊರೆ ಹೋಗಿದ್ದರು.

ಮಧ್ಯಾಹ್ನದ ಬಳಿಕ ವರುಣ ಧರೆಯತ್ತ ಮುಖ ಮಾಡದಿದ್ದರೂ ಮೋಡ ಮುಸುಕಿದ ವಾತಾವರಣವಿತ್ತು. ಜೋರಾಗಿ ಬೀಸುವ ಗಾಳಿಯಿಂದ ಚಳಿಯೂ ಹೆಚ್ಚಾಗಿತ್ತು. ಭಾನುವಾರವೂ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಸುರಿಯುತ್ತಿರುವ ತುಂತುರು ಮಳೆ ರೈತರಲ್ಲಿ ಆತಂಕ ಮೂಡಿಸಿದೆ. ರಾಗಿ, ಭತ್ತ ಕೊಯ್ಲು ಸಾಧ್ಯವಾಗದೆ ಆತಂಕಕ್ಕೆ ಒಳಾಗಿದ್ದಾರೆ. ಅಲಸಂದೆ, ಅವರೆ ಸೇರಿ ಇತರೆ ಬೆಳೆಗಳ ಒಕ್ಕಣೆಯಲ್ಲಿದ್ದ ರೈತರು ಪರದಾಡುವಂತಾಗಿದೆ. ರಾವಂದೂರು ಹೋಬಳಿಯಲ್ಲಿ 13 ಮಿ.ಮೀ, ಬೆಟ್ಟದಪುರದಲ್ಲಿ 9 ಮಿ.ಮೀ, ಹಾರನಹಳ್ಳಿಯಲ್ಲಿ 8 ಮಿ.ಮೀ, ಕಸಬಾ ಹೋಬಳಿಯಲ್ಲಿ 8 ಮಿ.ಮೀ ಮಳೆಯಾಗಿದೆ.

ಕೇರಳದಲ್ಲಿ ಮಳೆಯಾಗುತ್ತಿರುವ ಪರಿಣಾಮ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ಒಳಹರಿವು 200 ಕ್ಯೂಸೆಕ್‌ನಿಂದ 489 ಕ್ಯೂಸೆಕ್‌ಗೇರಿದೆ. ತಾಲ್ಲೂಕಿನಲ್ಲಿ ಶನಿವಾರವೂ ತುಂತುರು ಮಳೆ ಮುಂದುವರಿಯಿತು.

Comments
ಈ ವಿಭಾಗದಿಂದ ಇನ್ನಷ್ಟು
ಸರ್ಕಾರಗಳ ವೈಫಲ್ಯ ಪ್ರಶ್ನಿಸಿ: ಸಲಹೆ

ಮೈಸೂರು
ಸರ್ಕಾರಗಳ ವೈಫಲ್ಯ ಪ್ರಶ್ನಿಸಿ: ಸಲಹೆ

23 Apr, 2018

ಮೈಸೂರು
ಕುಮಾರಸ್ವಾಮಿ ರೋಡ್‌ ಶೋ, ಪಾದಯಾತ್ರೆ

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎರಡನೇ ಸುತ್ತಿನ ಪ್ರಚಾರ ನಡೆಸಿದರು. ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಪರ ಮತಯಾಚಿಸಿದರು. ...

23 Apr, 2018
ಬಿರುಗಾಳಿ, ಮಳೆ; ನೆಲಕಚ್ಚಿದ 700 ಬಾಳೆಗಿಡ

ನಂಜನಗೂಡು
ಬಿರುಗಾಳಿ, ಮಳೆ; ನೆಲಕಚ್ಚಿದ 700 ಬಾಳೆಗಿಡ

23 Apr, 2018
ಜೆಡಿಎಸ್‌, ಬಿಜೆಪಿ ವಿರುದ್ಧ ಹರಿಹಾಯ್ದ ಸಿ.ಎಂ

ಎಚ್.ಡಿ.ಕೋಟೆ
ಜೆಡಿಎಸ್‌, ಬಿಜೆಪಿ ವಿರುದ್ಧ ಹರಿಹಾಯ್ದ ಸಿ.ಎಂ

23 Apr, 2018
ಜೆಡಿಎಸ್‌, ಬಿಜೆಪಿ ವಿರುದ್ಧ ಹರಿಹಾಯ್ದ ಸಿ.ಎಂ

ಎಚ್.ಡಿ.ಕೋಟೆ
ಜೆಡಿಎಸ್‌, ಬಿಜೆಪಿ ವಿರುದ್ಧ ಹರಿಹಾಯ್ದ ಸಿ.ಎಂ

23 Apr, 2018