ಕುಮಟಾ

ಕುಮಟಾಕ್ಕೆ ಮುಖ್ಯಮಂತ್ರಿ: ಸಿಂಗಾರಗೊಂಡ ರಸ್ತೆ

ಭಟ್ಕಳ ಕಾರ್ಯಕ್ರಮ ಮುಗಿಸಿ ಮುಖ್ಯಮಂತ್ರಿ ಅವರು ಹೆಲಿಕ್ಯಾಪ್ಟರ್ ಮೂಲಕ ಕುಮಟಾಕ್ಕೆ ಬರಲಿದ್ದಾರೆ.

ಕುಮಟಾಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಪಟ್ಟಣದ ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ

ಕುಮಟಾ: ಬರುವ ಬುಧವಾರ ಕುಮಟಾಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿರುವುದರಿಂದ ಮುಖ್ಯಮಂತ್ರಿಗಳ ವಾಹನ ಸಾಗುವ ಪಟ್ಟಣದ ಕೆಲ ಪ್ರಮುಖ ರಸ್ತೆಗಳ ದುರಸ್ತಿ ಕಾರ್ಯ ಶನಿವಾರ ಆರಂಭಗೊಂಡಿದೆ.

ಕುಮಟಾ ಪಟ್ಟಣಕ್ಕೆ ಒಳಚರಂಡಿ ಯೋಜನೆಗಾಗಿ ಸರಿಯಾಗಿದ್ದ ರಸ್ತೆಯನ್ನು ಅಗೆದು ಹಾಕಿ ಕಾಮಗಾರಿ ನಡೆಸಲಾಗಿತ್ತು. ಪ್ರವಾಸಿ ಮಂದಿರ ರಸ್ತೆಯ ಮಧ್ಯೆ ಅಲ್ಲಲ್ಲಿ ಒಳ ಚರಂಡಿ ಚೇಂಬರ್ ನಿರ್ಮಾಣಕ್ಕಾಗಿ ಗುಂಡಿ ತೋಡಿ ನಂತರ ಸರಿ ಮಾಡಿದ್ದರೂ ರಸ್ತೆಯ ಉಬ್ಬು–ತಗ್ಗುಗಳು ಹಾಗೇ ಇದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸಿ ಮಂದಿರಕ್ಕೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯಿಂದ ಸಾಗುವ ಪ್ರವಾಸಿ ಮಂದಿರ ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ.

ಭಟ್ಕಳ ಕಾರ್ಯಕ್ರಮ ಮುಗಿಸಿ ಮುಖ್ಯಮಂತ್ರಿ ಅವರು ಹೆಲಿಕ್ಯಾಪ್ಟರ್ ಮೂಲಕ ಕುಮಟಾಕ್ಕೆ ಬರಲಿದ್ದಾರೆ. ಡಾ. ಎ.ವಿ. ಬಾಳಿಗಾ ಮಹಾವಿದ್ಯಾಲಯ ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ಇರುವುದಿಂದ ಅಲ್ಲಿಂದ ಕಾರ್ಯಕ್ರಮ ನಡೆಯುವ ಮಹಾತ್ಮಾಗಾಂಧಿ ಕ್ರೀಡಾಂಗಣವರೆಗಿನ ಕಾಲೇಜು ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯನ್ನು ಅಲ್ಲಲ್ಲಿ ದುರಸ್ತಿ ಮಾಡಲಾಗುತ್ತಿದೆ.

Comments
ಈ ವಿಭಾಗದಿಂದ ಇನ್ನಷ್ಟು
ದೃಶ್ಯಕಾವ್ಯ ಬರೆಯುತ್ತಿದೆ ಸಾತೊಡ್ಡಿ ಜಲಪಾತ

ಯಲ್ಲಾಪುರ
ದೃಶ್ಯಕಾವ್ಯ ಬರೆಯುತ್ತಿದೆ ಸಾತೊಡ್ಡಿ ಜಲಪಾತ

18 Jun, 2018

ಮುಂಡಗೋಡ
ಹೆಚ್ಚುವರಿ ಶಿಕ್ಷಕರು ಬೇರೆ ಶಾಲೆಗೆ

ಮುಂಡಗೋಡ ತಾಲ್ಲೂಕಿನಲ್ಲಿ 111 ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆಯಿದ್ದು, ಕೆಲವು ಶಾಲೆಗಳಲ್ಲಿರುವ ಹೆಚ್ಚುವರಿ ಶಿಕ್ಷಕರನ್ನು ಅಗತ್ಯವಿರುವ ಕಡೆ ನಿಯೋಜನೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ....

18 Jun, 2018

ಕಾರವಾರ
ಮೀನುಗಾರರಿಗೆ ನಷ್ಟ ತಂದೊಡ್ಡಿದ ಕಸ!

ಕಾರವಾರ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಸಮುದ್ರದಿಂದ ತ್ಯಾಜ್ಯದ ರಾಶಿಗಳು ಬಂದು ಬೀಳುತ್ತಿರುವುದು ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಜತೆಗೆ, ಮೀನುಗಾರರಿಗೆ ನಷ್ಟ ತಂದೊಡ್ಡಿದೆ.

18 Jun, 2018
ಮಹಿಳಾ  ಸತ್ಯಾಗ್ರಹ ಸ್ಮಾರಕ ಅನಾಥ

ಸಿದ್ದಾಪುರ
ಮಹಿಳಾ ಸತ್ಯಾಗ್ರಹ ಸ್ಮಾರಕ ಅನಾಥ

18 Jun, 2018
ಶಿಥಿಲಾವಸ್ಥೆಯಲ್ಲಿರುವ ಹೊಸಬಾಳು ಸೇತುವೆ

ಸಿದ್ದಾಪುರ
ಶಿಥಿಲಾವಸ್ಥೆಯಲ್ಲಿರುವ ಹೊಸಬಾಳು ಸೇತುವೆ

18 Jun, 2018