ಉಳ್ಳಾಲ

ಉಳ್ಳಾಲ: 80 ಕುಟುಂಬಗಳನ್ನು ಸ್ಥಳಾಂತರ

‘ತಮಿಳುನಾಡು, ಕೇರಳ ಸೇರಿದಂತೆ ದೇಶದ  ಕರಾವಳಿ ಭಾಗದಲ್ಲಿ ಹಾನಿ ಮಾಡಿದ ಓಖಿ ಚಂಡಾಮಾರುತದ ದುಷ್ಪರಿಣಾಮ ಉಳ್ಳಾಲ ವ್ಯಾಪ್ತಿಯಲ್ಲಿಯೂ ಹಲವು ಮನೆಗಳಿಗೆ ಹಾಗೂ ಸೊತ್ತುಗಳಿಗೆ ಹಾನಿಯಾಗಿದೆ.

ಒಖಿ ಚಂಡಾಮಾರುತದ ದುಷ್ಪರಿಣಾಮ ಉಳ್ಳಾಲ ವ್ಯಾಪ್ತಿಯ ಸಮುದ್ರ ತೀರದಲ್ಲಿ ಹಲವು ಮನೆಗಳಿಗೆ ಹಾಗೂ ಸೊತ್ತುಗಳಿಗೆ ಹಾನಿಯಾಗಿದ್ದು, ಸಚಿವ ಯು.ಟಿ. ಖಾದರ್‌ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾನುವಾರ ವೀಕ್ಷಿಸಿದರು.

ಉಳ್ಳಾಲ: ಒಖಿ ಚಂಡಮಾರುತದ ಪ್ರಭಾವಕ್ಕೆ ಇಲ್ಲಿನ ಸಮುದ್ರದ ಉಬ್ಬರದಿಂದ ಸೋಮೇಶ್ವರ, ಉಳ್ಳಾಲ, ಉಚ್ಚಿಲ, ಮೊಗವೀರಪಟ್ನ, ಖಿಲಿರಿಯಾನಗರ ಮುಂತಾದ ಪ್ರದೇಶಗಳಲ್ಲಿ ಶನಿವಾರ ರಾತ್ರಿ 9 ರಿಂದ ಭಾನುವಾರ ನಸುಕಿನ 3 ಗಂಟೆಯವರೆಗೆ ಅಲೆಗಳ ಅಬ್ಬರ ಹೆಚ್ಚಾಗಿತ್ತು. ಗಡಿ ಪ್ರದೇಶ ತಲಪಾಡಿಯಿಂದ ಉಳ್ಳಾಲದವರೆಗೆ ಸಮುದ್ರ ತೀರದಲ್ಲಿ ನೆಲೆಸಿದ್ದ ಸುಮಾರು 80 ಕುಟುಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

‘ಸೋಮೇಶ್ವರ ಭಾಗದಲ್ಲಿ ಸಾಮಾನ್ಯವಾಗಿ ಮಳೆಗಾಲದಲ್ಲಿ ಮಾತ್ರ  ಕಡಲ್ಕೊರೆತ, ಸಮುದ್ರದ ಪ್ರಕೋಪ ಇರುತ್ತದೆ. ಕಡಲ್ಕೊರೆತ ತಡೆಯಲು ಶೀಘ್ರವೇ ಕಲ್ಲುಗಳನ್ನು ಮತ್ತೆ ಜೋಡಿಸುವ, ತಾತ್ಕಾಲಿಕ ತಡೆ ಕಾಮಗಾರಿಯನ್ನು ನಡೆಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸಮುದ್ರದ ವಿಕೋಪ ಭಾನುವಾರ ರಾತ್ರಿ 12 ರವರೆಗೆ ಇರುವುದರಿಂದ ಸಮುದ್ರ ತೀರದವರು ಸ್ಥಳಾಂತರವಾಗಬೇಕಿದೆ’ ಎಂದು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.

ಸಚಿವ ಖಾದರ್‌ ಭೇಟಿ

ಅಪಾಯದಂಚಿನಲ್ಲಿರುವ ಮನೆಗಳ ಸಂರಕ್ಷಣೆಗೆ ತಾತ್ಕಾಲಿಕ ಕಾಮಗಾರಿ ಶೀಘ್ರವೇ ನಡೆಸಲಾಗುವುದು ಎಂದು ಸಚಿವ ಖಾದರ್ ಹೇಳಿದ್ದಾರೆ. ಅವರು ಓಖಿ ಚಂಡಾಮಾರುತದ ಪರಿಣಾಮ ಉಳ್ಳಾಲ, ಸೋಮೇಶ್ವರ ವ್ಯಾಪ್ತಿಯಲ್ಲಿ ಹಾನಿಗೀಡಾದ ಪ್ರದೆಶಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದರು.

‘ತಮಿಳುನಾಡು, ಕೇರಳ ಸೇರಿದಂತೆ ದೇಶದ  ಕರಾವಳಿ ಭಾಗದಲ್ಲಿ ಹಾನಿ ಮಾಡಿದ ಓಖಿ ಚಂಡಾಮಾರುತದ ದುಷ್ಪರಿಣಾಮ ಉಳ್ಳಾಲ ವ್ಯಾಪ್ತಿಯಲ್ಲಿಯೂ ಹಲವು ಮನೆಗಳಿಗೆ ಹಾಗೂ ಸೊತ್ತುಗಳಿಗೆ ಹಾನಿಯಾಗಿದೆ. ದೇವರ ದಯೆಯಿಂದ ಕಡಿಮೆ ಪ್ರಮಾಣದಲ್ಲಿ ಆಗಿದೆ. 

ಹವಾಮಾನ ಇಲಾಖೆಯ ವರದಿಯಂತೆ ಚಂಡಾಮಾರುತದ ಪ್ರಭಾವ ಇನ್ನಷ್ಟು ಕಡಿಮೆಯಾಗಲಿದೆ ಅನ್ನುವ ಮಾಹಿತಿ ದೊರೆತಿದೆ. ಉಳ್ಳಾಲ ಭಾಗದಲ್ಲಿ ಆತಂಕಿತರಾದ ಜನತೆಗೆ ಜಿಲ್ಲಾಡಳಿತ ನಿನ್ನೆ ರಾತ್ರಿಯಿಂದ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಅಲ್ಲದೆ ಸ್ಥಳಾಂತರಕ್ಕೆ ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ’ ಎಂದರು.

ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್, ಸಹಾಯಕ ಆಯುಕ್ತ ಕುಮಾರನ್, ತಹಶೀಲ್ದಾರ್ ಗುರುಪ್ರಸಾದ್, ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ ಆಳ್ವ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಗರಸಭೆ ಸದಸ್ಯರು  ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಎಡಮಂಗಲ ದೇವಳ: ಪ್ರತಿಷ್ಠಾ ಮಹೋತ್ಸವ

ಸುಬ್ರಹ್ಮಣ್ಯ
ಎಡಮಂಗಲ ದೇವಳ: ಪ್ರತಿಷ್ಠಾ ಮಹೋತ್ಸವ

24 Mar, 2018

ಮಂಗಳೂರು
ವೆನ್ಲಾಕ್‌ ಐಸಿಯು ಸಾಮರ್ಥ್ಯ ಹೆಚ್ಚಿಸಿ

ವೆನ್ಲಾಕ್‌ ಆಸ್ಪತ್ರೆಯ ಐಸಿಯು ತುರ್ತು ಚಿಕಿತ್ಸಾ ಘಟಕದಲ್ಲಿ ಬೇಡಿಕೆಗೆ ತಕ್ಕಂತೆ ಹಾಸಿಗೆ ಲಭ್ಯವಿಲ್ಲದೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಐಸಿಯು ಹಾಸಿಗೆ ಸಾಮರ್ಥ್ಯ ಹೆಚ್ಚಿಸುವಂತೆ ನಗರದಲ್ಲಿ...

24 Mar, 2018

ಮಂಗಳೂರು
ಪೂಜಾರಿಗೆ ಪ್ರಾಪ್ತಿಯಾದ ರಾಹುಲ್‌ ವರ

ಕಳೆದ ಹಲವಾರು ವರ್ಷಗಳಿಂದ ಪಕ್ಷದಿಂದಲೇ ದೂರವಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರಿಗೆ ಇದೀಗ ಎಐಸಿಸಿ ಅಧಿನಾಯಕ ರಾಹುಲ್‌ ಗಾಂಧಿ ಅಭಯ ದೊರೆತಿದೆ....

24 Mar, 2018

ಮಂಗಳೂರು
‘ಲಿಂಗಾಯತ ಧರ್ಮ: ನಿರ್ಣಯ ರದ್ದುಗೊಳಿಸಿ’

ರಾಜ್ಯದ ಸರ್ಕಾರದ ಚುನಾವಣೆಯನ್ನು ಎದುರಿಗಿಟ್ಟುಕೊಂಡು ಲಿಂಗಾಯತ ಸಮಾಜಕ್ಕೆ ಮೀಸಲಾತಿ ನೀಡುವ ನಿರ್ಣಯವು ಕಾಂಗ್ರೆಸ್‌ನ ಒಡೆದು ಆಳುವ ನೀತಿಯಾಗಿದೆ. ಲಿಂಗಾಯತ ಸಮಾಜಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ...

23 Mar, 2018
‘ಹಸಿವು ಮುಕ್ತ ಕರ್ನಾಟಕವೇ ನಮ್ಮ ಗುರಿ’

ಉಳ್ಳಾಲ
‘ಹಸಿವು ಮುಕ್ತ ಕರ್ನಾಟಕವೇ ನಮ್ಮ ಗುರಿ’

23 Mar, 2018