2018ರ ಆವೃತ್ತಿ

ಐಪಿಎಲ್‌: ಚೆನ್ನೈ ಸೂಪರ್‌ಕಿಂಗ್ಸ್‌ ಪರ ಆಡಲು ದೋನಿಗೆ ಅನುಮತಿ

ಐಪಿಎಲ್‌ ಆಡಳಿತ ಮಂಡಳಿ ಹಾಗೂ ಬಿಸಿಸಿಐನ ನಿರ್ವಾಹಕ ಸಮಿತಿ(ಸಿಒಎ) ಬುಧವಾರ ನಡೆದ ಸಭೆಯಲ್ಲಿ ‘ಆಟಗಾರರ ಆಯ್ಕೆ, ಸಂಭಾವನೆ, ಅನುಸರಿಸಬೇಕಾದ ನಿಯಮಗಳ ಕುರಿತು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

ಎಂ.ಎಸ್‌. ದೋನಿ

ಮುಂಬೈ: ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರಿಗೆ 2018ರ ಐಪಿಎಲ್‌ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌(ಸಿಎಸ್‌ಕೆ) ಪರ ಆಡಲು ಆಡಳಿತ ಮಂಡಳಿ ಅನುಮತಿ ನೀಡಿದೆ.

ಐಪಿಎಲ್‌ ಆಡಳಿತ ಮಂಡಳಿ ಹಾಗೂ ಬಿಸಿಸಿಐನ ನಿರ್ವಾಹಕ ಸಮಿತಿ(ಸಿಒಎ) ಬುಧವಾರ ನಡೆದ ಸಭೆಯಲ್ಲಿ ‘ಆಟಗಾರರ ಆಯ್ಕೆ, ಸಂಭಾವನೆ, ಅನುಸರಿಸಬೇಕಾದ ನಿಯಮಗಳ ಕುರಿತು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

ಮುಂದಿನ ಇಂಡಿಯನ್‌ ಕ್ರಿಕೆಟ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಆವೃತ್ತಿಯ ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ (ಹರಾಜಿಗೂ ಮುನ್ನ) ಪ್ರತಿ ತಂಡಕ್ಕೆ 5 ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್‌ ಚೌಂಧರಿ ತಿಳಿಸಿದ್ದಾರೆ.

2013ರಲ್ಲಿ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಹಗರಣಕ್ಕೆ ಸಂಬಂಧಿಸಿ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ತಾನ ರಾಯಲ್‌ ತಂಡಗಳನ್ನು 2 ವರ್ಷ ನಿಷೇಧಿಸಲಾಗಿತ್ತು.

ಈ ಎರಡು ತಂಡಗಳ ನಿಷೇಧದ ಪರಿಣಾಮ 2016 – 17ನೇ ಆವೃತ್ತಿಗಳಲ್ಲಿ ರೈಸಿಂಗ್‌ ಪುಣೆ ಸೂಪರ್‌ಜೆಂಟ್‌ ಹಾಗೂ ಗುಜರಾತ್‌ ಲಯನ್ಸ್‌ ಹೊಸ ತಂಡಗಳು ಆಡಿದ್ದವು.

Comments
ಈ ವಿಭಾಗದಿಂದ ಇನ್ನಷ್ಟು
ರೋಹಿತ್ ಶರ್ಮಾ ಭರ್ಜರಿ ದ್ವಿಶತಕ: ಶ್ರೀಲಂಕಾಗೆ 393 ರನ್‌ಗಳ ಗೆಲುವಿನ ಗುರಿ

ಮೊಹಾಲಿ
ರೋಹಿತ್ ಶರ್ಮಾ ಭರ್ಜರಿ ದ್ವಿಶತಕ: ಶ್ರೀಲಂಕಾಗೆ 393 ರನ್‌ಗಳ ಗೆಲುವಿನ ಗುರಿ

13 Dec, 2017
ಎರಡನೇ ಏಕದಿನ ಪಂದ್ಯ: ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಶ್ರೀಲಂಕಾ; ತಾಳ್ಮೆಯ ಆಟ ಪ್ರದರ್ಶಿಸುತ್ತಿರುವ ಭಾರತೀಯ ಬ್ಯಾಟ್ಸ್‌ಮನ್‌ಗಳು

ಮೊಹಾಲಿ
ಎರಡನೇ ಏಕದಿನ ಪಂದ್ಯ: ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಶ್ರೀಲಂಕಾ; ತಾಳ್ಮೆಯ ಆಟ ಪ್ರದರ್ಶಿಸುತ್ತಿರುವ ಭಾರತೀಯ ಬ್ಯಾಟ್ಸ್‌ಮನ್‌ಗಳು

13 Dec, 2017
ಭಾರತಕ್ಕೆ ಗೆಲುವು ಅನಿವಾರ್ಯ

ಇಂದು ಎರಡನೇ ಏಕದಿನ ಪಂದ್ಯ
ಭಾರತಕ್ಕೆ ಗೆಲುವು ಅನಿವಾರ್ಯ

13 Dec, 2017
ಸಿಂಧು, ಶ್ರೀಕಾಂತ್‌ಗೆ ಪ್ರಶಸ್ತಿಯ ಕನಸು

ಇಂದಿನಿಂದ ದುಬೈ ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌
ಸಿಂಧು, ಶ್ರೀಕಾಂತ್‌ಗೆ ಪ್ರಶಸ್ತಿಯ ಕನಸು

13 Dec, 2017
‘ಶ್ರೀಲಂಕಾದ ಕ್ರೀಡಾ ಅಭಿವೃದ್ಧಿ ಕ್ರಿಕೆಟ್‌ಗೆ ಮಾತ್ರ ಸೀಮಿತ’

ಲಂಕಾ ಸರ್ಕಾರದ ವಿರುದ್ಧ ಆರೋಪ
‘ಶ್ರೀಲಂಕಾದ ಕ್ರೀಡಾ ಅಭಿವೃದ್ಧಿ ಕ್ರಿಕೆಟ್‌ಗೆ ಮಾತ್ರ ಸೀಮಿತ’

13 Dec, 2017