ನವದೆಹಲಿ

ರೈಲ್ವೆ ಸುರಕ್ಷತೆ: ಅನುಷ್ಠಾನವಾಗದ ಶೇ 30 ಸುಧಾರಣಾ ಕ್ರಮಗಳು

ರೈಲಿನಲ್ಲಿ ಸುರಕ್ಷತೆಗೆ ಸಂಬಂಧಿಸಿ ಅಧಿಕಾರಿಗಳು ಸೂಚಿಸಿದ ಸುಧಾರಣಾ ಕ್ರಮಗಳ ಪೈಕಿ ಶೇ 30ರಷ್ಟು ಅಂಶಗಳ ಬಗ್ಗೆ ಎಂಟು ತಿಂಗಳಾದರೂ ಗಮನ ಹರಿಸಿಯೇ ಇಲ್ಲ ಎಂದು ಅಧಿಕೃತ ಮಾಹಿತಿ ತಿಳಿಸಿದೆ.

ನವದೆಹಲಿ: ರೈಲಿನಲ್ಲಿ ಸುರಕ್ಷತೆಗೆ ಸಂಬಂಧಿಸಿ ಅಧಿಕಾರಿಗಳು ಸೂಚಿಸಿದ ಸುಧಾರಣಾ ಕ್ರಮಗಳ ಪೈಕಿ ಶೇ 30ರಷ್ಟು ಅಂಶಗಳ ಬಗ್ಗೆ ಎಂಟು ತಿಂಗಳಾದರೂ ಗಮನ ಹರಿಸಿಯೇ ಇಲ್ಲ ಎಂದು ಅಧಿಕೃತ ಮಾಹಿತಿ ತಿಳಿಸಿದೆ.

‘ಪ್ರಯಾಣಿಕರು ಮತ್ತು ಸರಕುಗಳ ಸುರಕ್ಷಿತ ಸಾಗಣೆಯೇ ನಮ್ಮ ಪ್ರಾಥಮಿಕ ಆದ್ಯತೆ. ಇದನ್ನು ಸಾಧಿಸುವ ದೃಷ್ಟಿಯಿಂದ, ಅಸುರಕ್ಷಿತ ರೂಢಿಗಳನ್ನು ಕೈಬಿಡಬೇಕು’ ಎಂದು ಪ್ರಧಾನ ವ್ಯವಸ್ಥಾಪಕರು ಹಾಗೂ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ರೈಲ್ವೆ ಮಂಡಳಿಯ ಅಧ್ಯಕ್ಷ ಅಶ್ವನಿ ಲೋಹಾನಿ ಪತ್ರ ಬರೆದಿದ್ದಾರೆ.

‘ಸುರಕ್ಷತೆಯ ಸಂಸ್ಕೃತಿಯನ್ನು ಬೆಳೆಸಿ’ ಎಂದು ಅವರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

‘ನಿಯಮಗಳು ಹಾಗೂ ಮಾರ್ಗದರ್ಶಿ ಸೂತ್ರಗಳ ಅನುಷ್ಠಾನದ ಕುರಿತು ಸುರಕ್ಷಾ ವಿಭಾಗವು ಮೇಲ್ವಿಚಾರಣೆ ನಡೆಸುವ ವೇಳೆ ಸುಧಾರಣಾ ಕ್ರಮಗಳನ್ನು ಪೂರೈಸದಿರುವುದು ತಿಳಿದುಬಂದಿದೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.

2017ರ ಮಾರ್ಚ್‌ನಿಂದ ಅಕ್ಟೋಬರ್‌ವರೆಗೆ ಸುರಕ್ಷತೆ ಕೊರತೆಯ 5,070 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ನವೆಂಬರ್ 27ರವರೆಗೆ ಶೇ 70ರಷ್ಟು ಪ್ರಕರಣಗಳನ್ನು ಮಾತ್ರ ಬಗೆಹರಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸುರಕ್ಷೆಗೆ ಧಕ್ಕೆಯಾಗುವಂಥ ಶೇ 5ರಷ್ಟು ಪ್ರಕರಣಗಳು ಮೂರು ತಿಂಗಳುಗಳಿಂದ ಬಾಕಿ ಉಳಿದಿವೆ.

Comments
ಈ ವಿಭಾಗದಿಂದ ಇನ್ನಷ್ಟು
ರಾಜ್ಯದ 12 ಜಿಲ್ಲೆಗಳಲ್ಲಿ ಶಾಲೆಬಿಟ್ಟ ಬಾಲಕಿಯರಿಗೆ ವಿಶೇಷ ಯೋಜನೆ

ಸಬಲೀಕರಣ ಉದ್ದೇಶ
ರಾಜ್ಯದ 12 ಜಿಲ್ಲೆಗಳಲ್ಲಿ ಶಾಲೆಬಿಟ್ಟ ಬಾಲಕಿಯರಿಗೆ ವಿಶೇಷ ಯೋಜನೆ

20 Jan, 2018
20 ಎಎಪಿ ಶಾಸಕರು ಅನರ್ಹ?

ದೆಹಲಿಗೆ ಮಿನಿ ಚುನಾವಣೆ ಸನ್ನಿಹಿತ
20 ಎಎಪಿ ಶಾಸಕರು ಅನರ್ಹ?

20 Jan, 2018
ನಾಗರಿಕ ಪ್ರದೇಶದ ಮೇಲೆ ಪಾಕ್‌ ದಾಳಿ ಮೂವರ ಸಾವು

ಜಮ್ಮು
ನಾಗರಿಕ ಪ್ರದೇಶದ ಮೇಲೆ ಪಾಕ್‌ ದಾಳಿ ಮೂವರ ಸಾವು

20 Jan, 2018
‘ಪದ್ಮಾವತ್‌’ ಪ್ರಮಾಣಪತ್ರ ರದ್ದು‌ ಅರ್ಜಿ ವಜಾ

'ಮುಸ್ಲಿಮರು ನೋಡಬಾರದು
‘ಪದ್ಮಾವತ್‌’ ಪ್ರಮಾಣಪತ್ರ ರದ್ದು‌ ಅರ್ಜಿ ವಜಾ

20 Jan, 2018

ಪ್ರಕರಣ ದಾಖಲು
ತ್ರಿವಳಿ ತಲಾಖ್‌ ನೀಡಿ ಪತ್ನಿಯನ್ನು ಕಟ್ಟಡದಿಂದ ನೂಕಿದ ಗಂಡ

ವರದಕ್ಷಿಣಿ ತರಲಿಲ್ಲ ಎಂಬ ಕಾರಣಕ್ಕೆ ಪತ್ನಿಗೆ ಒಂದೇ ಬಾರಿಗೆ ತ್ರಿವಳಿ ತಲಾಖ್‌ ನೀಡಿದ ಪತಿಯೊಬ್ಬ ಆಕೆಯನ್ನು ಕಟ್ಟಡದ ಟೆರೇಸ್‌ನಿಂದ ತಳ್ಳಿದ್ದಾನೆ.

20 Jan, 2018