ಶ್ರೀನಿವಾಸ ಕಾಲೇಜಿನಲ್ಲಿ ರಾಷ್ಟ್ರೀಯ ಫಾರ್ಮಸಿ ಸಪ್ತಾಹ

‘ಕೈಗೆಟುವ ದರದಲ್ಲಿ ಗುಣಮಟ್ಟದ ಔಷಧಿ ನೀಡಿ’

ಪ್ರತಿಯೊಬ್ಬ ಔಷಧ ತಂತ್ರಜ್ಞರು, ಔಷಧೀಯ ವ್ಯತಿರಿಕ್ತ ಪರಿಣಾಮಗಳು ಹಾಗೂ ಅದರ ಸಂಪೂರ್ಣ ಮಾಹಿತಿಗಳನ್ನು ಸಂದರ್ಭಗಳಿಗೆ ಅನುಸಾರವಾಗಿ ರೋಗಿಗಳಿಗೆ ಮನವರಿಕೆ ಮಾಡಿಕೊಡುವುದು ಅತ್ಯವಶ್ಯಕ

ಮಂಗಳೂರು: ಔಷಧ ತಂತ್ರಜ್ಞರ ಮುಖ್ಯ ಧ್ಯೇಯವೆಂದರೆ ಸಮಾಜದ ಸಮಗ್ರ ಆರೋಗ್ಯ ಸುಧಾರಣೆಗೆ ಉತ್ತಮ ಗುಣಮಟ್ಟದ, ಸುರಕ್ಷಿತ ಹಾಗೂ ಫಲೋತ್ಪಾದಕ ಔಷಧಿಗಳನ್ನು ಕೈಗೆಟಕುವ ದರದಲ್ಲಿ ನೀಡುವುದು ಎಂದು ಔಷಧ ನಿಯಂತ್ರಣಾಧಿಕಾರಿ ಶಂಕರ್ ನಾಯಕ್ ಹೇಳಿದರು.

ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್ ಜಿಲ್ಲಾ ಘಟಕದ ಸಹಯೋಗದೊಂದಿಗೆ ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಫಾರ್ಮಸಿ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಔಷಧ ವ್ಯಾಪಾರಿಗಳ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ. ಪಾಂಡುರಂಗ ರಾವ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಔಷಧ ತಂತ್ರಜ್ಞರು, ಔಷಧೀಯ ವ್ಯತಿರಿಕ್ತ ಪರಿಣಾಮಗಳು ಹಾಗೂ ಅದರ ಸಂಪೂರ್ಣ ಮಾಹಿತಿಗಳನ್ನು ಸಂದರ್ಭಗಳಿಗೆ ಅನುಸಾರವಾಗಿ ರೋಗಿಗಳಿಗೆ ಮನವರಿಕೆ ಮಾಡಿಕೊಡುವುದು ಅತ್ಯವಶ್ಯಕ ಎಂದು ಹೇಳಿದರು.

ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್‌ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಕಾಲೇಜಿನ ಪ್ರಾಂಶು ಪಾಲ ಡಾ.ಎ.ಆರ್.ಶಬರಾಯ ಮಾತನಾಡಿ, ಯಶಸ್ಸೆಂಬ ಸಾಗರ ದಾಟಿ, ಜಯಿಸುವ ದೃಢ ಛಲವನ್ನು ವಿದ್ಯಾರ್ಥಿಗಳು ಹೊಂದಬೇಕು. ಸಮಾಜದಲ್ಲಿ ದೃಢ ಆತ್ಮವಿಶ್ವಾಸದಿಂದ ಸವಾಲು ಎದುರಿಸಿ, ವಿದ್ಯಾರ್ಥಿಗಳು ಔಷಧೀಯ ತಂತ್ರಜ್ಞಾನದ ಧ್ಯೇಯವನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿ ಶ್ರೇಯಸ್ ಕೆ.ಎನ್. ಅವರನ್ನು ಸನ್ಮಾನಿಸಲಾಯಿತು. ಅತಿಥಿಗಳಾದ ಕರ್ನಾಟಕ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಸಂದೀಪ್ ಬೇಕಲ್, ಉಪನ್ಯಾಸ ನೀಡಿದರು. ಕಾಲೇಜಿನ ತ್ರೈಮಾಸಿಕ ಸಂಪದವನ್ನು ಬಿಡುಗಡೆ ಮಾಡಲಾಯಿತು.

ಕಾಲೇಜಿನ ಪ್ರಾಧ್ಯಾಪಕ ಡಾ.ಇ.ವಿ.ಎಸ್. ಸುಬ್ರಹ್ಮಣ್ಯಂ ಸ್ವಾಗತಿಸಿದರು. ಆಗ್ನೆಸ್ ಜೈನ್ ರೋಸ್ ಮತ್ತು ಮಿನ್ನು ಸಾರ ನಿರೂಪಿಸಿದರು. ವೀರೇಶ್ ಕೆ.ಚೆಂಡೂರ್ ವಂದಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಕಾಸರಗೋಡು
ಕಾಸರಗೋಡಿನಲ್ಲಿ ಭಾಷಾ ಉತ್ಸವ: ಶಿಫಾರಸು

'ಎಲ್ಲಾ ಭಾಷೆಗಳ ಪರಿ ಪೋಷಣೆಗೆ ಅಗತ್ಯವಾದ ಸಾಹಿತ್ಯ -ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆ ಯಬೇಕು. ಇಲ್ಲಿಗೆ ಪ್ರತ್ಯೇಕವಾದ ಯುವಜನ ನೀತಿಯನ್ನು ರಚಿಸಬೇಕಾಗಿದೆ'.

18 Jan, 2018
ಕುಡಿಯುವ ನೀರು ಪೂರೈಕೆಗೆ ₹33 ಕೋಟಿ

ಮಂಗಳೂರು
ಕುಡಿಯುವ ನೀರು ಪೂರೈಕೆಗೆ ₹33 ಕೋಟಿ

18 Jan, 2018
ನಕ್ಸಲ್: 5 ವರ್ಷಗಳಿಂದ ನಿರಂತರ ಭೇಟಿ

ಉಪ್ಪಿನಂಗಡಿ
ನಕ್ಸಲ್: 5 ವರ್ಷಗಳಿಂದ ನಿರಂತರ ಭೇಟಿ

18 Jan, 2018
ಕಸಿ ಕಾಳುಮೆಣಸು ಸಂಪನ್ನ ಕೃಷಿ

ದಕ್ಷಿಣ ಕನ್ನಡ
ಕಸಿ ಕಾಳುಮೆಣಸು ಸಂಪನ್ನ ಕೃಷಿ

17 Jan, 2018
‘ನಾವು ನಕ್ಸಲರು; ಏನೂ ಮಾಡುವುದಿಲ್ಲ’

ಉಪ್ಪಿನಂಗಡಿ
‘ನಾವು ನಕ್ಸಲರು; ಏನೂ ಮಾಡುವುದಿಲ್ಲ’

17 Jan, 2018