ಚಾಮರಾಜನಗರ

ಮಹಿಳಾ ಜನಪ್ರತಿನಿಧಿಗಳಿಗೆ ಕಾರ್ಯಕ್ರಮ

ಮಹಿಳಾ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಪ್ರಾಮಾಣಿಕವಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು. ಗ್ರಾಮ ಪಂಚಾಯಿತಿಯ ಸಾಮಾನ್ಯಸಭೆ, ವಾರ್ಡ್‌ ಸಭೆ, ಗ್ರಾಮ ಸಭೆಗಳಲ್ಲಿ ಭಾಗವಹಿಸುವ ಮೂಲಕ ಜನಪರ ಕೆಲಸ ಮಾಡಬೇಕು ಎಂದರು.

ಚಾಮರಾಜನಗರ: ನಗರದ ತಾಲ್ಲೂಕಿನ ಓಡಿಪಿ ವಿಭಾಗೀಯ ಕೇಂದ್ರದಲ್ಲಿ ಇತ್ತೀಚೆಗೆ ದಿ ಹಂಗರ್‌ ಯೋಜನೆಯಡಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಜನಪ್ರತಿನಿಧಿಗಳಿಗೆ ಒಂದು ದಿನದ ಸೌಲಭ್ಯ ಆಧಾರಿತ ಕಾರ್ಯಕ್ರಮ ನಡೆಯಿತು.

ತಾಲ್ಲೂಕು ಪಂಚಾಯಿತಿಯ ನರೇಗಾ ಸಂಯೋಜಕ ಸುಂದರ್ ಮಾತನಾಡಿ, ಪಂಚಾಯಿತಿಗಳಲ್ಲಿ ಮಹಿಳಾ ಪ್ರತಿನಿಧಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಓಡಿಪಿ ಸಂಸ್ಥೆಯ ಯೋಜನೆಯು ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ತಾಲ್ಲೂಕಿನ ಕಾರ್ಯಕರ್ತೆ ಸುಶೀಲಾ ಮಾತನಾಡಿ, ಮಹಿಳಾ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಪ್ರಾಮಾಣಿಕವಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು. ಗ್ರಾಮ ಪಂಚಾಯಿತಿಯ ಸಾಮಾನ್ಯಸಭೆ, ವಾರ್ಡ್‌ ಸಭೆ, ಗ್ರಾಮ ಸಭೆಗಳಲ್ಲಿ ಭಾಗವಹಿಸುವ ಮೂಲಕ ಜನಪರ ಕೆಲಸ ಮಾಡಬೇಕು ಎಂದರು.

ಸುಗ್ರಾಮ ತಾಲ್ಲೂಕು ಅಧ್ಯಕ್ಷೆ ಪದ್ಮಾ, ಖಜಾಂಚಿ ಜ್ಯೋತಿ, ನಿರ್ದೇಶಕಿ ಪುಟ್ಟನಂಜಮ್ಮ, ಸಮುದಾಯದ ಸುಶೀಲಾ, ಜಯಲಕ್ಷ್ಮಿ ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಇಂದು, ನಾಳೆ ಪರಿವರ್ತನಾ ಯಾತ್ರೆ

ಚಾಮರಾಜನಗರ
ಇಂದು, ನಾಳೆ ಪರಿವರ್ತನಾ ಯಾತ್ರೆ

20 Jan, 2018

ಯಳಂದೂರು
ಚಿತ್ರಗಳ ಮೂಲಕ ಮಕ್ಕಳಿಗೆ ಸಂಚಾರ ಪಾಠ

‘ಬಿಆರ್‌ಸಿ ಕೇಂದ್ರದಲ್ಲಿ ಶಿಕ್ಷಕರಿಗೆ ಬೊಂಬೆ ಪ್ರದರ್ಶನದ ತರಬೇತಿ ನೀಡಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ವಿಷಯವಾರು ಚಿತ್ರ ಮತ್ತು ಬೊಂಬೆ ಪ್ರದರ್ಶನದ ಬಗ್ಗೆ ತಿಳಿಸಲಾಗುತ್ತದೆ.

20 Jan, 2018
ಕೆರೆ ಅಭಿವೃದ್ಧಿ: ಜನರಿಗೇ ಹೊಣೆ

ಚಾಮರಾಜನಗರ
ಕೆರೆ ಅಭಿವೃದ್ಧಿ: ಜನರಿಗೇ ಹೊಣೆ

19 Jan, 2018

ಚಾಮರಾಜನಗರ
ನೂತನ ಪಿಂಚಣಿ ಯೋಜನೆ ರದ್ದತಿಗೆ ಆಗ್ರಹ

ಎನ್‌ಪಿಎಸ್‌ ಯೋಜನೆಗೆ ಒಳಪಡುವ ನೌಕರರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಕ್ರಮವಹಿಸಬೇಕು. ನೌಕರರ ಹಿತ ಕಾಪಾಡಬೇಕು

19 Jan, 2018
ನಾಲೆಗೆ ನೀರು ಹರಿಸಲು ಆಗ್ರಹ

ಸಂತೇಮರಹಳ್ಳಿ
ನಾಲೆಗೆ ನೀರು ಹರಿಸಲು ಆಗ್ರಹ

18 Jan, 2018