ಮಕ್ಕಳ ಪದ್ಯ
ಹಲಸು ಮತ್ತು ಕರಡಿ
10 Dec, 2017
ಕರಡಿ ಗವಿಯ ಬಿಟ್ಟು ಬೆಟ್ಟದಿಂದ ಕೆಳಗೆ ಇಳಿಯಿತು


ಚಿತ್ರ: ಶಶಿಧರ ಹಳೇಮನಿ
ಹಲಸು ಮತ್ತು ಕರಡಿ
ಸಂಜೆ ಹೊತ್ತು ಆಯಿತು
ಕರಡಿ ಗವಿಯ ಬಿಟ್ಟು
ಬೆಟ್ಟದಿಂದ ಕೆಳಗೆ ಇಳಿಯಿತು
ಊರ ತೋಟದತ್ತ ಸಾಗಿತು
ತೋಟವೆಲ್ಲ ಸುತ್ತಿತು
ಹಲಸಿನ ಮರದಿ ಹಣ್ಣ ಕಂಡಿತು
ಮರವ ಹತ್ತಿ ಹಲಸಿನಣ್ಣು ಕೆಡವಿತು
ಇಳಿಯಲು ಬಾರದೆ ದೊಫ್ ಎಂದು ಬಿದ್ದಿತು
ಹಲಸಿನಣ್ಣು ಬಗೆದು ಬಗೆದು
ತೊಳೆಯ ತೆಗೆದು ತೆಗೆದು
ಗುಳುಂ ಎಂದು ಹೊಟ್ಟೆ ತುಂಬಾ ತಿಂದಿತು
ಬಿದ್ದ ನೋವ ಮರೆಯಿತು
ಬವ್.., ವವ್.., ಶಬ್ದ ಕೇಳಿತು
ಗಡರ್ ಗಡರ್ ಎಂದಿತು
ಜನರ ಕೂಗು ಕಿವಿಗೆ ಬಿದ್ದು
ಹೆದರಿ ಗವಿಯ ದಾರಿ ಹಿಡಿಯಿತು
Comments