ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರುತಿಹಾಸನ್ ಲವ್ ಸ್ಟೋರಿ!

Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕಮಲಹಾಸನ್ ಪುತ್ರಿ, ನಟಿ ಶ್ರುತಿ ಹಾಸನ್ ಬಾಲಿವುಡ್‌ ಚಿತ್ರಗಳಲ್ಲಿ ಅಭಿನಯಿಸಿದರೂ ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಆದರೆ ಸುದ್ದಿಯಾಗಲು ಸಿನಿಮಾಗಳೇ ಕಾರಣವಾಗಬೇಕು ಎಂದೇನಿಲ್ಲವಲ್ಲ? ಶ್ರುತಿ ಈಗ ಸುದ್ದಿಯಲ್ಲಿರುವುದೂ ಹಾಗೇ. ‘ನಾನು ಯಾರನ್ನೂ ಲವ್‌ ಮಾಡ್ತಿಲ್ಲಪ್ಪಾ ಎಲ್ಲಾ ಸುಳ್ಳು ಸುದ್ದಿ’ ಎಂದು ಇಷ್ಟು ದಿನ ಜಾರಿಕೊಳ್ಳುತ್ತಿದ್ದ ಈ ಬಳುಕುವ ಬಳ್ಳಿ ತಮ್ಮ ಪ್ರಿಯಕರ, ಲಂಡನ್‌ ಮೂಲದ ಮೈಕೆಲ್‌ ಕೋರ್ಸೆಲ್‌ ಜತೆ ಮೊನ್ನೆ ಮುಂಬೈನ ಬೀದಿಗಳಲ್ಲಿ ಸುತ್ತಾಡಿರುವುದು ಜಗಜ್ಜಾಹೀರಾಗಿದೆ.

ಈಚೆಗೆ ಆಪ್ತರ ಮದುವೆಗೆಂದು ಮುಂಬೈಗೆ ಬಂದಿದ್ದ ಮೈಕೆಲ್, ನಡುರಾತ್ರಿ ಮುಂಬೈನ ಗಲ್ಲಿಗಳಲ್ಲಿ ಗೆಳತಿ ಶ್ರುತಿ ಜತೆ ಸರಳ ಉಡುಪಿನಲ್ಲೇ ಸುತ್ತಾಡಿದ್ದಾರೆ. ಆಪ್ತರ ಮದುವೆಯಲ್ಲಿ ಮೈಕೆಲ್ ಅಪ್ಪಟ ದಕ್ಷಿಣ ಭಾರತೀಯನಂತೆ ಬಿಳಿ ಲುಂಗಿ ಉಟ್ಟಿದ್ದರೆ, ಶ್ರುತಿ ಗುಲಾಬಿ ಬಣ್ಣದ ರೇಷ್ಮೆ ಸೀರೆ ಉಟ್ಟು ವಿಶೇಷ ಕಳೆಯಿಂದ ಕಂಗೊಳಿಸಿದ್ದರು. ಅಷ್ಟೇ ಅಲ್ಲ ಮದುವೆಯಲ್ಲಿ ಅಪ್ಪ ಕಮಲ್ ಹಾಸನ್, ಅಮ್ಮ ಸಾರಿಕಾ ಜತೆ ಇವರಿಬ್ಬರ ಜತೆಗೆ ಸೆಲ್ಫಿ ಕೂಡಾ ಕ್ಲಿಕ್ಲಿಸಿಕೊಂಡಿದ್ದರು. ‌

ಅಂದಹಾಗೆ ಇವರಿಬ್ಬರ ಪರಿಚಯ ಹೇಗಾಯಿತೋ ಗೊತ್ತಿಲ್ಲ. ಆದರೆ, ಜುಲೈನಲ್ಲಿ ಮುಂಬೈಗೆ ಭೇಟಿ ನೀಡಿದ್ದ ಮೈಕೆಲ್ ಆಗಲೂ ಶ್ರುತಿ ಜತೆ ಹೆಚ್ಚು ಸಮಯ ಕಳೆದಿದ್ದರು. ಬ್ಯುಸಿ ಶೆಡ್ಯೂಲ್ ನಡುವೆಯೂ ಮೈಕೆಲ್ ಬಿಡುವು ಮಾಡಿಕೊಂಡು ಶ್ರುತಿ ಜತೆ ಕೈಕೈ ಹಿಡಿದುಕೊಂಡು ಸುತ್ತಾಡಿದ್ದರು. ಇಷ್ಟಾದರೂ ಈ ಜೋಡಿಹಕ್ಕಿಗಳು ತಮ್ಮ ಪ್ರೇಮ್ ಕಹಾನಿ ಕುರಿತು ಎಲ್ಲೂ ಬಾಯಿಬಿಟ್ಟಿಲ್ಲ. ಹಾಗಂತ ಗಾಸಿಪ್‌ಗಳು ನಿಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT