ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಳದಿ ನಾಯಕರ ಕನ್ನಡ ಶಾಸನ ಪತ್ತೆ

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ವೇಳೆ ಕೆಳದಿ ನಾಯಕರ ಕಾಲದ ಕನ್ನಡ ಶಿಲಾ ಶಾಸನ ಪತ್ತೆಯಾಗಿದೆ.

ದೇವಸ್ಥಾನದ ನವರಂಗದ ಎದುರು ಹುದುಗಿದ್ದ ಕಂಬವನ್ನು ಹೊರತೆಗೆದಾಗ ಅದರಲ್ಲಿ ಕೆಳದಿ ನಾಯಕರೊಬ್ಬರು ಕುಳಿತು ಕೈಮುಗಿಯುತ್ತಿರುವ ಚಿತ್ರ ಹಾಗೂ ‘ಕೆಳದಿ ನಾಯ್ಕರು’ ಎಂದು ಕನ್ನಡದಲ್ಲಿ ಕೆತ್ತಿರುವುದು ಕಂಡುಬಂದಿದೆ.

‘17ನೇ ಶತಮಾನದಲ್ಲಿದ್ದ ಶಿವಪ್ಪ ನಾಯ್ಕ‌ ಕುರಿತ ಶಾಸನವಾಗಿರುವ ಸಾಧ್ಯತೆ ಇದ್ದು, ಅಚ್ಚಕನ್ನಡದಲ್ಲಿ ಕೆಳದಿ ನಾಯ್ಕರು ಎಂದು ಬರದಿರುವುದು ವಿಶೇಷವಾಗಿದೆ. 1667ರಲ್ಲಿ ಹದಿನಾಡಿನ ಮುದ್ದುರಾಜ ದತ್ತಿ ಬಿಟ್ಟಿರುವ ಕುರಿತು ತಾಮ್ರ ಶಾಸನ ಹಾಗೂ ದಿವಾನ್‌ ಪೂರ್ಣಯ್ಯ ಅವರು ಎರಡು ಗ್ರಾಮಗಳನ್ನು ದತ್ತಿ ಬಿಟ್ಟಿದ್ದರ ಬಗ್ಗೆ ಮಾತ್ರ ಈವರೆಗೂ ಇಲ್ಲಿ ಶಾಸನಗಳು ಲಭ್ಯವಾಗಿದ್ದವು’ ಎಂದು ಇತಿಹಾಸ ಪ್ರಾಧ್ಯಾಪಕ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT