ಚೇಳೂರು

ಗ್ರಾಮಸ್ಥರ ಗೋಳು ಕೇಳುವವರಿಲ್ಲ

ಬಸ್‌ ನಿಲ್ದಾಣದಲ್ಲಿ ರಾಶಿ ಗಟ್ಟಲೇ ತ್ಯಾಜ್ಯ ಸುರಿಯುತ್ತಿದ್ದು ನಿಲ್ದಾಣ ದುರ್ನಾತ ಬೀರುತ್ತಿದೆ. ಮೂಲ ಸೌಲಭ್ಯಗಳ ಕೊರತೆ ಹೆಚ್ಚಿದೆ

ಪಾತಪಾಳ್ಯ ಹೋಬಳಿಯ ಸೋಮನಾಥಪುರ ಗ್ರಾಮದ ಮುಖ್ಯ ರಸ್ತೆಯಲ್ಲೇ ಚರಂಡಿ ತುಂಬಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದು.

ಚೇಳೂರು: ಪಾತಪಾಳ್ಯ ಹೋಬಳಿಯ ಸೋಮನಾಥಪುರ ಗ್ರಾಮದ ಮುಖ್ಯ ರಸ್ತೆಯ ಚರಂಡಿದ್ದು ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ. ಪಾದಚಾರಿಗಳಿಗೆ, ವಾಹನ ಸವಾರರಿಗೆ ತೊಂದರೆಯಾಗಿದೆ. ಇಲ್ಲಿಯೇ ಹಾಲಿನ ಡೇರಿ ಇದ್ದು ಬೆಳಿಗ್ಗೆ, ಸಂಜೆ ಡೇರಿಗೆ ಬರುವವರು ತ್ಯಾಜ್ಯದ ನೀರಿನ ಮೇಲೆಯೇ ನಡೆಯಬೇಕಾಗಿದೆ.

ಗ್ರಾಮದ ಚರಂಡಿಗಳಲ್ಲಿ ಹೂಳು ತುಂಬಿದೆ. ಕೊಳಚೆ ನೀರು ಸರಾಗವಾಗಿ ಹರಿಯದೆ ರಸ್ತೆಗೆ ಬರುತ್ತಿದೆ. ಸೊಳ್ಳೆಗಳ ಕಾಟ ಮೀತಿ ಮೀರಿದೆ. ಮೂಗು ಮುಚ್ಚಿ ಓಡಾಡುವ ಸ್ಥಿತಿ ಇದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಗ್ರಾಮಸ್ಥರು ಇದ್ದಾರೆ. ಇಷ್ಟಾದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ ಎಂದು ಗ್ರಾಮದ ವಿಶ್ವನಾಥ್ ಆರೋಪಿಸಿದರು.

ಬಸ್‌ ನಿಲ್ದಾಣದಲ್ಲಿ ರಾಶಿ ಗಟ್ಟಲೇ ತ್ಯಾಜ್ಯ ಸುರಿಯುತ್ತಿದ್ದು ನಿಲ್ದಾಣ ದುರ್ನಾತ ಬೀರುತ್ತಿದೆ. ಮೂಲ ಸೌಲಭ್ಯಗಳ ಕೊರತೆ ಹೆಚ್ಚಿದೆ ಎಂದು ದೂರಿದರು. ರಸ್ತೆ ಬದಿಯಲ್ಲೇ ವರ್ತಕರು ತ್ಯಾಜ್ಯ ಸುರಿಯುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ್‌ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಮಾರುಕಟ್ಟೆಯಲ್ಲೇ ಇಂದಿರಾ ಕ್ಯಾಂಟೀನ್‌ಗೆ ಜಾಗ

ಚಿಕ್ಕಬಳ್ಳಾಪುರ
ಮಾರುಕಟ್ಟೆಯಲ್ಲೇ ಇಂದಿರಾ ಕ್ಯಾಂಟೀನ್‌ಗೆ ಜಾಗ

23 Jan, 2018
ಕೈಗಾರಿಕಾ ವಲಯ ಸ್ಥಾಪನೆಗೆ ವಿಶೇಷ ಒತ್ತು

ಶಿಡ್ಲಘಟ್ಟ
ಕೈಗಾರಿಕಾ ವಲಯ ಸ್ಥಾಪನೆಗೆ ವಿಶೇಷ ಒತ್ತು

23 Jan, 2018

ಬಾಗೇಪಲ್ಲಿ
ಅರ್ಹರಿಗೆ ಸೌಲಭ್ಯ ಒದಗಿಸಲು ಆಗ್ರಹಿಸಿ ರೈತರ ಪ್ರತಿಭಟನೆ

ಈರುಳ್ಳಿ ದಾಸ್ತಾನು ಮಾಡಲು ರೈತರಿಗೆ ಶೆಡ್‌ ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೂ ಅಧಿಕಾರಿಗಳು ರೈತರಿಗೆ ವಿತರಿಸಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ

23 Jan, 2018
ಅಸಮಾಧಾನ ಹುಟ್ಟುಹಾಕಿದ ಮುಖ್ಯಮಂತ್ರಿ ಮಾತು

ಚಿಕ್ಕಬಳ್ಳಾಪುರ
ಅಸಮಾಧಾನ ಹುಟ್ಟುಹಾಕಿದ ಮುಖ್ಯಮಂತ್ರಿ ಮಾತು

22 Jan, 2018
ಸರಳ ಮದುವೆ ಹೆಚ್ಚು ನಡೆಯಲಿ

ಚಿಕ್ಕಬಳ್ಳಾಪುರ
ಸರಳ ಮದುವೆ ಹೆಚ್ಚು ನಡೆಯಲಿ

22 Jan, 2018