ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಎಚ್‌1ಬಿ ವೀಸಾ ಹೊಂದಿರುವವರ ಪತ್ನಿ/ಪತಿಯ ಉದ್ಯೋಗಕ್ಕೆ ಕತ್ತರಿ?

Last Updated 16 ಡಿಸೆಂಬರ್ 2017, 13:57 IST
ಅಕ್ಷರ ಗಾತ್ರ

ವಾಷಿಂಗ್ಟನ್: ಎಚ್‌1ಬಿ ವೀಸಾ ಹೊಂದಿರುವವರ ಪತ್ನಿ/ಪತಿಗೆ ಅಮೆರಿಕದಲ್ಲಿ ಉದ್ಯೋಗದ ಅವಕಾಶ ಕಲ್ಪಿಸುವ ಕಾನೂನು ರದ್ದುಗೊಳಿಸಲು ಡೊನಾಲ್ಡ್ ಟ್ರಂಪ್ ಸರ್ಕಾರ ಚಿಂತನೆ ನಡೆಸಿದೆ. ಈ ನಿರ್ಧಾರದಿಂದ ಸಾವಿರಾರು ಭಾರತೀಯರ ನೌಕರರು ಹಾಗೂ ಅವರ ಕುಟುಂಬಗಳಿಗೆ ಹೊಡೆತ ಬೀಳುವ ಸಾಧ್ಯತೆಯಿದೆ.

ಹಿಂದಿನ ಒಬಾಮ ಸರ್ಕಾರದ ರೂಪಿಸಿದ್ದ ನಿಯಮಾವಳಿಯಲ್ಲಿ ಬದಲಾವಣೆ ತರುವ ಆಲೋಚನೆ ಇದೆ ಎಂದು ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

ಗ್ರೀನ್‌ ಕಾರ್ಡ್‌ ನಿರೀಕ್ಷೆಯಲ್ಲಿರುವ ಅಥವಾ ಎಚ್‌1ಬಿ ವೀಸಾ ಹೊಂದಿರುವವರ ಹೆಂಡತಿ/ಗಂಡ ಎಚ್–4 ಡಿಪೆಂಡೆಂಟ್ ವೀಸಾ ಪಡೆಯಲು ಅರ್ಹರು ಎಂಬ ನಿಯಮ 2015ರಿಂದ ಜಾರಿಯಲ್ಲಿದೆ. ಬರಾಕ್ ಒಬಾಮ ಜಾರಿಗೊಳಿಸಿದ್ದ ಈ ಆದೇಶದಿಂದ 2016ರಲ್ಲಿ 41 ಸಾವಿರಕ್ಕೂ ಹೆಚ್ಚು ಮಂದಿ ಎಚ್–4 ವೀಸಾ ಪಡೆದಿದ್ದರು. ಈ ವರ್ಷದ ಜೂನ್‌ವರೆಗೆ ಇಂತಹ 36 ಸಾವಿರ ವೀಸಾ ನೀಡಲಾಗಿದೆ.

ಅಮೆರಿಕನ್ನರ ಉದ್ಯೋಗಕ್ಕೆ ಅಡ್ಡಿಯಾಗಿರುವ ನಿಯಮವನ್ನು ತೆಗೆದುಹಾಕುವಂತೆ ಆಗ್ರಹಿಸಿ 2015ರಲ್ಲೇ ‘ಸೇವ್ ಜಾಬ್ ಯುಎಸ್ಎ’ ಎಂಬ ಸಂಘಟನೆ ದಾವೆ ಹೂಡಿದ್ದು, ಕಾನೂನು ಹೋರಾಟ ನಡೆಸುತ್ತಿದೆ.

ನುರಿತ ತಂತ್ರಜ್ಞರನ್ನು ಆಕರ್ಷಿಸಲು ಅಮೆರಿಕ ಸರ್ಕಾರ ಎಚ್‌1ಬಿ ವೀಸಾ ನೀಡುತ್ತದೆ. ಈ ವೀಸಾ ಪಡೆಯುವವರ ಪೈಕಿ ಶೇ 70ರಷ್ಟು ಭಾರತೀಯ ಉದ್ಯೋಗಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT