ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ ಖಾತೆಗೆ 10 ಲಕ್ಷ ಫಾಲೋವರ್ಸ್‌

ಬೆಂಗಳೂರು ಪೊಲೀಸರ @BlrCityPolice ಸಾಮಾಜಿಕ ಜಾಲತಾಣಕ್ಕೆ ಮೆಚ್ಚುಗೆ
Last Updated 16 ಡಿಸೆಂಬರ್ 2017, 19:34 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್‌ ಸಂಬಂಧಿ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸರು ತೆರೆದಿರುವ ಸಾಮಾಜಿಕ ಜಾಲತಾಣ  ಟ್ವಿಟರ್‌ ಖಾತೆಗೆ 10 ಲಕ್ಷ ಫಾಲೋವರ್ಸ್‌ಗಳು ಸೇರ್ಪಡೆಯಾಗಿದ್ದಾರೆ.

ನಗರ ನಿವಾಸಿಗಳಲ್ಲಿ ಹೆಚ್ಚಿರುವ ಸಾಮಾಜಿಕ ಜಾಲತಾಣಗಳ ಬಳಕೆ ಗಮನಿಸಿದ್ದ ಪೊಲೀಸರು, 2014ರ ಆಗಸ್ಟ್‌ 14ರಂದು ‘BengaluruCityPolice
(@BlrCityPolice)’ ಹೆಸರಿನಲ್ಲಿ ಟ್ವಿಟರ್‌ ಖಾತೆ ತೆರೆದಿದ್ದರು. ಈ ಖಾತೆಯ ಫಾಲೋವರ್ಸ್‌ಗಳ ಸಂಖ್ಯೆಯು ಶನಿವಾರ 10 ಲಕ್ಷದ ಗಡಿ ದಾಟಿದೆ. ಆ ಮೂಲಕ ದೇಶದಲ್ಲೇ ಅತೀ ಹೆಚ್ಚು ಮೆಚ್ಚುಗೆ ಪಡೆದ ಪೊಲೀಸರ ಟ್ವಿಟರ್‌ ಖಾತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

‘ನಾವು ಈಗ ಹತ್ತುಲಕ್ಷ ಸದಸ್ಯರನ್ನು ಹೊಂದಿರುವ ಅವಿಭಕ್ತ ಕುಟುಂಬ. ಇಂತಹದೊಂದು ಮೈಲಿಗಲ್ಲು ತಲುಪಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಕಮಿಷನರ್‌ ಟಿ.ಸುನೀಲ್‌ ಕುಮಾರ್‌ ಹೇಳಿದರು.

‘ಪೊಲೀಸ್‌ ಇಲಾಖೆ ಹಾಗೂ ಸಾರ್ವಜನಿಕರ ನಡುವಿನ ಸಂಪರ್ಕಕ್ಕೆ ಟ್ವಿಟರ್ ಖಾತೆ ಹೆಚ್ಚು ಅನುಕೂಲವಾಗಿದೆ. ಇಲಾಖೆಯ ಹಲವು ಮಾಹಿತಿಯನ್ನು ಈ ಖಾತೆ ಮೂಲಕ ಪ್ರಕಟಿಸುತ್ತಿದ್ದೇವೆ. ಇನ್ನು ಮುಂದೆಯೂ ಆ ಕೆಲಸವನ್ನು ಮತ್ತಷ್ಟು ಚುರುಕಿನಿಂದ ಮಾಡಲಿದ್ದೇವೆ. ನಾವು ಏನೇ ಮಾಡಿದರೂ 10 ಲಕ್ಷ ಮಂದಿ ನಮ್ಮನ್ನು ನೋಡುತ್ತಿರುತ್ತಾರೆ ಎಂಬ ಅರಿವು ನಮಗೆ ಇರುತ್ತದೆ’ ಎಂದರು.

ನಗರ ಸಂಚಾರ ಪೊಲೀಸರು ಪ್ರತ್ಯೇಕವಾಗಿ ತೆರೆದಿರುವ ‘BTP(@blrcitytraffic)’ ಟ್ವಿಟರ್‌ ಖಾತೆಗೆ 4.36 ಲಕ್ಷ ಫಾಲೋವರ್ಸ್‌ ಇದ್ದಾರೆ. ಅದರ ಸಂಖ್ಯೆಯಲ್ಲೂ ಕ್ರಮೇಣ ಏರಿಕೆ ಕಂಡುಬರುತ್ತಿದೆ. ಇನ್ನು ‘BENGALURU CITY POLICE(@blrcitypolice)' ಫೇಸ್‌ಬುಕ್‌ ಖಾತೆಯನ್ನು 6.15 ಲಕ್ಷ ಜನ ಲೈಕ್‌ ಮಾಡಿದ್ದಾರೆ.

ದಿನದ 24 ಗಂಟೆ ಸೇವೆ: ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆಂದೇ ಕಮಾಂಡ್ ಕೇಂದ್ರದ ಡಿಸಿಪಿ ಅಧೀನದಲ್ಲಿ ಪ್ರತ್ಯೇಕ ವಿಭಾಗವೊಂದು ಕೆಲಸ ಮಾಡುತ್ತಿದೆ.

20ಕ್ಕೂ ಹೆಚ್ಚು ಸಿಬ್ಬಂದಿ ಮೂರು ಪಾಳಿಗಳಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಮಾಹಿತಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಬರುವ ದೂರುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT