ಕಾರವಾರ

ಐದು ತಾಲ್ಲೂಕಿಗೂ ಬಂತು ಬುಲೆಟ್‌

ತುಂಬಾ ಕಿರಿದಾದ ರಸ್ತೆಗಳು, ದೊಡ್ಡ ವಾಹನಗಳು ಸಾಗಲು ಸ್ಥಳಾವಕಾಶವೇ ಇಲ್ಲದ ಕಡೆಗಳಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದರೆ ಬೆಂಕಿಯನ್ನು ನಂದಿಸಲು ಈ ಬೈಕ್‌ ಸಹಕಾರಿಯಾಗಿದೆ.

ಕಾರವಾರ ಅಗ್ನಿಶಾಮಕ ಠಾಣೆಯ ‘ಅಗ್ನಿ ಮೋಟಾರ್ ಬೈಕ್‌’ನಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ

ಕಾರವಾರ: ಜಿಲ್ಲಾ ಅಗ್ನಿ ಶಾಮಕ ಠಾಣೆಯಲ್ಲಿದ್ದ ‘ಅಗ್ನಿ ಮೋಟಾರ್‌ ಬೈಕ್‌’ ಸೇವೆ ಇದೀಗ ತಾಲ್ಲೂಕುಗಳಿಗೂ ವಿಸ್ತರಣೆಗೊಂಡಿದೆ. ಜಿಲ್ಲೆಯ ಭಟ್ಕಳ, ಹೊನ್ನಾವರ, ಅಂಕೋಲಾ, ಕುಮಟಾ ಹಾಗೂ ಶಿರಸಿ ಠಾಣೆಗಳಿಗೆ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಕೆಲ ತಿಂಗಳ ಹಿಂದೆ ಅಗ್ನಿಶಮನ ಸಲಕರಣೆಗಳುಳ್ಳ ಹೊಸ ಬುಲೆಟ್‌ ಬೈಕ್‌ಗಳನ್ನು ನೀಡಲಾಗಿದೆ.

ತುಂಬಾ ಕಿರಿದಾದ ರಸ್ತೆಗಳು, ದೊಡ್ಡ ವಾಹನಗಳು ಸಾಗಲು ಸ್ಥಳಾವಕಾಶವೇ ಇಲ್ಲದ ಕಡೆಗಳಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದರೆ ಬೆಂಕಿಯನ್ನು ನಂದಿಸಲು ಈ ಬೈಕ್‌ ಸಹಕಾರಿಯಾಗಿದೆ. ಕಿಷ್ಕೆಂಧೆಯಂಥ ಸ್ಥಳಗಳಲ್ಲಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸಣ್ಣಪುಟ್ಟ ಅಗ್ನಿ ಅವಘಡಗಳು ಉಂಟಾದಾಗ ಈ ಅಗ್ನಿ ಬುಲೆಟ್‌ ಬೈಕ್‌ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ.

ಬೈಕ್‌ನ ವಿಶೇಷತೆ: 360 ಅಶ್ವಶಕ್ತಿ ಎಂಜಿನ್‌ಯುಳ್ಳ ಬುಲೆಟ್‌ನಲ್ಲಿ 10 ಲೀಟರ್‌ ಸಂಗ್ರ­ಹಣಾ ಸಾಮರ್ಥ್ಯದ ಎರಡು ಅಗ್ನಿ­ಶಮನ ಉಪಕರಣಗಳನ್ನು ಅಳವಡಿಸಲಾಗಿದೆ. ಜತೆಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಸೈರನ್‌, ಧ್ವನಿವರ್ಧಕ, ಕೆಂಪು ದೀಪಗಳಿವೆ. 27 ಕೆ.ಜಿ. ತೂಕ ಇರುವ ಉಪಕರಣದಲ್ಲಿ 9.30 ಲೀಟರ್‌ ನೀರು ಹಾಗೂ 0.70 ಲೀಟರ್‌ ನೊರೆ ಇರುತ್ತದೆ. ಉಪಕರಣ­ದಲ್ಲಿ ಹೈಡ್ರಾಲಿಕ್‌ ತಂತ್ರಜ್ಞಾನವಿದ್ದು, ಇದು ಸಿಲಿಂಡರ್‌ ಒಳಗಿನ ದ್ರಾವಣ­ವನ್ನು ಹೊರಕ್ಕೆ ಚಿಮ್ಮಿಸಲು ಸಹಾಯ ಮಾಡುತ್ತದೆ. ಇಬ್ಬರು ಸಿಬ್ಬಂದಿ ಕುಳಿತುಕೊಳ್ಳಬಹುದು.

ತೈಲ ಉತ್ಪನ್ನಗಳಿಗೆ ಬೆಂಕಿ ಹತ್ತಿದರೆ ಅದನ್ನು ನಂದಿಸಲು ಉಪಯೋಗವಾಗುವಂತೆ ಇದರಲ್ಲಿ ನೀರು ಸಂಗ್ರಹಣಾ ಸೌಲಭ್ಯವಿದೆ. ಉಳಿದ ಠಾಣೆಗಳಿಗೂ ವಿಸ್ತರಣೆ: ‘ಶಾರ್ಟ್‌ ಸರ್ಕಿಟ್, ಚಿಕ್ಕಪುಟ್ಟ ಅಗ್ನಿ ಅನಾಹುತಗಳಿಗೆ ಇದನ್ನು ಬಳಸಲಾಗುತ್ತಿದೆ. ಸದ್ಯದಲ್ಲಿಯೇ ಉಳಿದ ಠಾಣೆಗಳಿಗೂ ವಿಸ್ತರಿಸುವ ಯೋಜನೆ ಸರ್ಕಾರದ ಮುಂದಿದೆ’ ಎನ್ನುತ್ತಾರೆ ಅಗ್ನಿ ಶಾಮಕ ಠಾಣಾಧಿಕಾರಿ ಆರ್.ರಮೇಶ್.

‘ಅವಘಡ ನಡೆದ ಸ್ಥಳಕ್ಕೆ ಈ ಬೈಕ್‌ನಲ್ಲಿ ತೆರಳಿ, ಬಳಿಕ ಬ್ಯಾಗ್‌ ಹಾಕಿಕೊಳ್ಳುವಂತೆ ಅಗ್ನಿನಂದಕ ಸಿಲಿಂಡರ್‌ಗಳನ್ನು ನೇತುಹಾಕಿಕೊಂಡು ಸಿಬ್ಬಂದಿ ಕಾರ್ಯಾಚರಣೆಗೆ ಇಳಿಯಬಹುದಾಗಿದೆ. ಒಂದು ಲೀಟರ್‌ಗೆ 40 ಕಿ.ಮೀ. ಮೈಲೇಜ್ ನೀಡುತ್ತಿದ್ದು, ಸಮಯ ಉಳಿತಾಯ, ಶೀಘ್ರ ಕೆಲಸ ನಿರ್ವಹಣೆ ಹಾಗೂ  ಬಳಕೆದಾರ ಸ್ನೇಹಿಯಾಗಿದೆ’ ಎನ್ನುತ್ತಾರೆ ಅವರು.

* * 

ಚಿಕ್ಕಪುಟ್ಟ ಅಗ್ನಿ ಆಕಸ್ಮಿಕ ಗಳನ್ನು ನಂದಿಸಲು ಇಲಾಖೆ ಒದಗಿಸಿರುವ ಅಗ್ನಿಶಮನ ಸಲಕರಣೆಗಳುಳ್ಳ ಈ ಬುಲೆಟ್‌ ಬೈಕ್‌ ತುಂಬಾ ಸಹಕಾರಿಯಾಗಿದೆ.
ಆರ್.ರಮೇಶ್ ಕಾರವಾರ ಅಗ್ನಿ ಶಾಮಕ ಠಾಣಾಧಿಕಾರಿ

 

Comments
ಈ ವಿಭಾಗದಿಂದ ಇನ್ನಷ್ಟು

ಕಾರವಾರ
‘ಪಕ್ಷದ ಸಾಧನೆಯೇ ಚುನಾವಣೆ ಪ್ರಚಾರ ವಸ್ತು’

ಬಿಜೆಪಿ ಮತ್ತು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವುದನ್ನು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ತಮ್ಮ ಪಕ್ಷಗಳ ಸಾಧನೆಯೇ ಗೆಲುವಿನ ಮಾನದಂಡ ಎನ್ನುತ್ತಿದ್ದಾರೆ ಆಯಾ...

22 Mar, 2018

ದಾಂಡೇಲಿ
ಪುತ್ಥಳಿ ನಿರ್ಮಾಣಕ್ಕೆ ಆಗ್ರಹ

ನಗರದ ಸೋಮಾನಿ ವೃತ್ತದ ಬಳಿ ಶಿವಾಜಿ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ನೀಡಬೇಕೆಂದು ನಗರದಲ್ಲಿ ಮರಾಠ ಮುಖಂಡರು ಧರಣಿ ನಡೆಸಿದರು.

22 Mar, 2018
ಜನರ ನಡುವೆ ಜಲಾಂದೋಲನ

ಶಿರಸಿ
ಜನರ ನಡುವೆ ಜಲಾಂದೋಲನ

22 Mar, 2018
ಉತ್ತರಕನ್ನಡ: ಬಾಲ್ಯ ವಿವಾಹ ನಿರ್ಮೂಲನೆಯತ್ತ ದಾಪುಗಾಲು

ಮೂರು ವರ್ಷಗಳಲ್ಲಿ ಗಣನೀಯ ಇಳಿಕೆ
ಉತ್ತರಕನ್ನಡ: ಬಾಲ್ಯ ವಿವಾಹ ನಿರ್ಮೂಲನೆಯತ್ತ ದಾಪುಗಾಲು

21 Mar, 2018

ಯಲ್ಲಾಪುರ
ಗೂಗಲ್ ನಕ್ಷೆಯಲ್ಲಿ ಹೆಸರು ಬದಲಾವಣೆ: ದೂರು

ಕಾಳಮ್ಮನಗರ ಹೆಸರನ್ನು ತೆಗೆದು ‘ಟಿಪ್ಪುನಗರ’ ಎಂದು ಗೂಗಲ್ ಮ್ಯಾಪ್‌ನಲ್ಲಿ ನಮೂದಿಸಿದ್ದಾರೆ ಎಂದು ಸ್ಥಳೀಯ ಮುಖಂಡರು ಯಲ್ಲಾಪುರ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ.

21 Mar, 2018