ಕುಶಾಲನಗರ

‘ಭಾರತಕ್ಕೆ ನಾವು ಚಿರಋಣಿ’

‘ನಿರಾಶ್ರಿತ ಟಿಬೆಟಿಯನ್ನರಿಗೆ ಆಶ್ರಯ ನೀಡಿರುವ ಭಾರತಕ್ಕೆ ನಾವು ಚಿರಋಣಿಯಾಗಿದ್ದೇವೆ’

ಕುಶಾಲನಗರ ಸಮೀಪದ ಬೈಲುಕುಪ್ಪೆ ಟಿಬೆಟಿಯನ್ ನಿರಾಶ್ರಿತರ ಶಿಬಿರಕ್ಕೆ ಮಂಗಳವಾರ ಆಗಮಿಸಿದ ಬೌದ್ಧಧರ್ಮ ಗುರು ದಲೈಲಾಮ ಅವರಿಗೆ ಸ್ವಾಗತ ಕೋರಲಾಯಿತು

ಕುಶಾಲನಗರ: ‘ನಿರಾಶ್ರಿತ ಟಿಬೆಟಿಯನ್ನರಿಗೆ ಆಶ್ರಯ ನೀಡಿರುವ ಭಾರತಕ್ಕೆ ನಾವು ಚಿರಋಣಿಯಾಗಿದ್ದೇವೆ’ ಎಂದು ಬೌದ್ಧಧರ್ಮ ಗುರು ದಲೈಲಾಮ ಹೇಳಿದರು. ಸಮೀಪದ ಬೈಲುಕುಪ್ಪೆ ಟಿಬೆಟಿಯನ್ನರ ನಿರಾಶ್ರಿತರ ಶಿಬಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘58 ವರ್ಷಗಳ ಹಿಂದೆ ಟಿಬೆಟ್ ತೊರೆದು ಭಾರತಕ್ಕೆ ಆಗಮಿಸಿದ ಸಾವಿರಾರು ನಿರಾಶ್ರಿತ ನಾಗರಿಕರಿಗೆ ಆಶ್ರಯ ನೀಡಿದ ಭಾರತ ಸರ್ಕಾರಕ್ಕೆ ನಾವು ಅಭಾರಿಯಾಗಿದ್ದೇವೆ. ಭಾರತದಲ್ಲಿ ಎಲ್ಲ ರೀತಿಯ ಸಹಕಾರ ಸಿಕ್ಕಿದೆ. ಟಿಬೆಟಿಯನ್ನರಿಗೆ ಜಾಗ ನೀಡಿ ಎಲ್ಲ ಸೌಲಭ್ಯಗಳನ್ನೂ ಒದಗಿಸುವ ಮೂಲಕ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟು ಮಾನವೀಯತೆ ತೋರಿದೆ’ ಎಂದು ತಿಳಿಸಿದರು.

ಅದ್ಧೂರಿ ಸ್ವಾಗತ: ಅದಕ್ಕೂ ಮೊದಲು ದಲೈಲಾಮ ಅವರಿಗೆ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತ ಕೋರಲಾಯಿತು. ಬೌದ್ಧ ಸನ್ಯಾಸಿಗಳು, ಶಾಲಾ ಮಕ್ಕಳು, ವಿದೇಶಿ ಪ್ರವಾಸಿಗರು, ಬೌದ್ಧ ಅನುಯಾಯಿಗಳು ವೇಷಭೂಷಣ ತೊಟ್ಟು ಸಾಲಾಗಿ ನಿಂತು ಬರಮಾಡಿಕೊಂಡರು.

ಸೆರಾಲಚಿ ಮೊನಾಸ್ಟರಿಯ ಬೌದ್ಧಮಂದಿರಕ್ಕೆ ಲಾಮ ಬರುತ್ತಿದ್ದಂತೆ ಬೌದ್ಧಬಿಕ್ಕುಗಳು ಟಿಬೆಟಿಯನ್ ಸಾಂಪ್ರದಾಯಿಕ ವಾದ್ಯ ಮೊಳಗಿಸಿದರು. ಮಂದಿರ ಪ್ರವೇಶಿಸಿದ ದಲೈಲಾಮ, ಹಿರಿಯ ಟಿಟೆಟಿಯನ್ ನಾಗರಿಕರ ಬಳಿಗೆ ತೆರಳಿ ಗೌರವ ಸ್ವೀಕರಿಸಿದರು. ಬಳಿ ಬೌದ್ಧಬಿಕ್ಕುಗಳೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹಳೆಯ ಟಿಬೆಟಿಯನ್ ವಸಾಹತು ಅಧಿಕಾರಿ ಜಿಲೆಕ್ ಜಂಗ್ನಿ, ಹೊಸ ಟಿಬೆಟಿಯನ್ ವಸಾಹತು ಅಧಿಕಾರಿ ಲಾಕ್ಪಾ ಟೆಸ್ರಿಂಗ್ ಹಾಜರಿದ್ದರು.

ಬಂದೋಬಸ್ತ್: ದಲೈಲಾಮ ಆಗಮನದ ಹಿನ್ನೆಲೆಯಲ್ಲಿ ಬೈಲುಕುಪ್ಪೆ ನಿರಾಶ್ರಿತರ ಶಿಬಿರಕ್ಕೆ ಬಿಗಿ ಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಚೇತ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಸನ್ಮಾನ: ಕುಶಾಲನಗರ ರೋಟರಿ ಸಂಸ್ಥೆ ಪದಾಧಿಕಾರಿಗಳು ದಲೈಲಾಮ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಸದಸ್ಯರಾದ ಎ.ಎ. ಚಂಗಪ್ಪ, ವಕೀಲ ಜವರೇಗೌಡ, ಎಚ್.ವಿ. ಶಿವಪ್ಪ, ಜೆ.ಪಿ. ಅರಸ್, ನವೀನ್, ರಾಜಗಜೇಂದ್ರ ಸ್ವಾಮೀಜಿ ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ವಿರೋಧದ ನಡುವೆಯೂ ಸಾಕಾನೆ ರವಾನೆ

ಕುಶಾಲನಗರ
ವಿರೋಧದ ನಡುವೆಯೂ ಸಾಕಾನೆ ರವಾನೆ

23 Jan, 2018

ಮಡಿಕೇರಿ
ಅಸಮಾನತೆ ವಿರುದ್ಧ ಹೋರಾಡಿದ್ದ ಚೌಡಯ್ಯ

‘ದೇವರು ಒಬ್ಬನೇ, ನಾಮ ಹಲವು, ವೃತ್ತಿಯೇ ದೇವರು ಎಂದು ಹೇಳಿದ್ದರು. ಆ ದಿಸೆಯಲ್ಲಿ ಅಂಬಿಗರ ಚೌಡಯ್ಯ ಅವರ ವಚನಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು’

23 Jan, 2018
ಮಾತೃ ಪೂರ್ಣ ಯೋಜನೆ ಸ್ಥಗಿತಕ್ಕೆ ನಿರ್ಣಯ

ಮಡಿಕೇರಿ
ಮಾತೃ ಪೂರ್ಣ ಯೋಜನೆ ಸ್ಥಗಿತಕ್ಕೆ ನಿರ್ಣಯ

22 Jan, 2018
ಕಾಲ ಗರ್ಭದಲ್ಲಿ ಸೇರಿಹೋದ ವೀರ ಅಚ್ಚುನಾಯಕ

ಗೋಣಿಕೊಪ್ಪಲು
ಕಾಲ ಗರ್ಭದಲ್ಲಿ ಸೇರಿಹೋದ ವೀರ ಅಚ್ಚುನಾಯಕ

21 Jan, 2018

ಗೋಣಿಕೊಪ್ಪಲು
ಒಗ್ಗಟ್ಟಿನ ಹೋರಾಟಕ್ಕೆ ಬೆಳೆಗಾರರ ನಿರ್ಣಯ

‘ವಿಯೆಟ್ನಾಂ ಕರಿಮೆಣಸಿನ ಗುಣಮಟ್ಟ ತೀವ್ರ ಕಳಪೆಯಾಗಿರು ವುದರಿಂದ ಇದರ ಆಮದನ್ನು ಎಲ್ಲ ರಾಷ್ಟ್ರಗಳು ನಿಷೇಧಿಸಿವೆ. ಆದರೆ ದೇಶದ ವ್ಯಾಪಾರಿಗಳು ಮಾತ್ರ ತಮ್ಮ ಲಾಭಕ್ಕಾಗಿ ದೇಶದ...

21 Jan, 2018