ನಿಡಗುಂದಿ

ಅಂತೂ ಬಂತು ನಿಡಗುಂದಿಗೆ ತಾಲ್ಲೂಕು ಭಾಗ್ಯ!

ಕಳೆದ 2 ದಶಕಗಳ ಹೋರಾಟದ ಫಲವಾಗಿ ನಿಡಗುಂದಿ ಪಟ್ಟಣಕ್ಕೆ ತಾಲ್ಲೂಕು ಭಾಗ್ಯ ಒದಗಿ ಬಂದಿದ್ದು, 2018 ರ ಜನವರಿ ಅಂತ್ಯಕ್ಕೆ ತಾಲ್ಲೂಕು ಕೇಂದ್ರ ಆರಂಭಗೊಳ್ಳುವ ಸಾಧ್ಯತೆ ದಿಟ್ಟವಾಗಿದೆ.

ನಿಯೋಜಿತ ನಿಡಗುಂದಿ ತಾಲ್ಲೂಕಿಗೆ ಸೇರುವ ಗ್ರಾಮಗಳ ವಿವರದ ನಕ್ಷೆ

ನಿಡಗುಂದಿ: ಕಳೆದ 2 ದಶಕಗಳ ಹೋರಾಟದ ಫಲವಾಗಿ ನಿಡಗುಂದಿ ಪಟ್ಟಣಕ್ಕೆ ತಾಲ್ಲೂಕು ಭಾಗ್ಯ ಒದಗಿ ಬಂದಿದ್ದು, 2018 ರ ಜನವರಿ ಅಂತ್ಯಕ್ಕೆ ತಾಲ್ಲೂಕು ಕೇಂದ್ರ ಆರಂಭಗೊಳ್ಳುವ ಸಾಧ್ಯತೆ ದಿಟ್ಟವಾಗಿದೆ.

ಇದೇ 19 ರಂದು ನಿಡಗುಂದಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಿ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಅದಕ್ಕೆ 30 ದಿನಗಳ ಕಾಲ ಆಕ್ಷೇಪಣೆಗೆ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳ ವಿಲೇವಾರಿಯ ನಂತರ ಅಂತಿಮ ಅಧಿಸೂಚನೆ ಸರ್ಕಾರ ಹೊರಡಿಸಲಿದೆ.

ಗದ್ದಿಗೌಡರ, ಹುಂಡೇಕಾರ ಸೇರಿದಂತೆ ಹಲವು ತಾಲ್ಲೂಕು ಪುನರ್ವಿಂಗಡಣಾ ಸಮಿತಿಯಲ್ಲಿ ನಿಡಗುಂದಿ ತಾಲ್ಲೂಕು ರಚನೆಗೆ ಸೂಚಿಸಲಾಗಿತ್ತು. 2013 ರಲ್ಲಿ ಆಗಿನ ಮುಖ್ಯಮಂತ್ರಿ ಘೋಷಿಸಿದ್ದ ತಾಲ್ಲೂಕುಗಳ ಪಟ್ಟಿಯಲ್ಲೂ ನಿಡಗುಂದಿ ಸೇರಿತ್ತು. ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಘೋಷಿಸಿದ್ದ ತಾಲ್ಲೂಕುಗಳ ಪಟ್ಟಿಯಲ್ಲಿಯೂ ನಿಡಗುಂದಿ ಸೇರಿತ್ತು.

ಆದರೆ ಇತ್ತೀಚಿಗೆ ರಾಜ್ಯ ಸರ್ಕಾರ ತಾಲ್ಲೂಕು ರಚನೆಗೆ ಹಾಕಿದ್ದ ನಿಬಂಧನೆಯಿಂದ ‘ನಿಡಗುಂದಿ’ ತಾಲ್ಲೂಕು ಪಟ್ಟಿಯಿಂದ ವಂಚಿತಗೊಳ್ಳುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ ಜಿಲ್ಲಾಡಳಿತ ನಿಡಗುಂದಿ ತಾಲ್ಲೂಕಿಗೆ ಹೂವಿನಹಿಪ್ಪರಗಿ ಹೋಬಳಿಯ ಕೆಲ ಗ್ರಾಮಗಳನ್ನು ಸೇರಿಸಿ 1 ಲಕ್ಷ 1 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿ ಮರು ಪ್ರಸ್ತಾವ ಸಲ್ಲಿಸಿತ್ತು. ಅದಕ್ಕೆ ಸರ್ಕಾರ ಅನುಮೋದನೆ ನೀಡಿ ಸದ್ಯ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ.

ಜನವರಿ ಅಂತ್ಯಕ್ಕೆ ಆರಂಭ: ಪ್ರಸ್ತುತ ಜಿಲ್ಲೆಯಲ್ಲಿ ಘೋಷಣೆಯಾದ ಎಲ್ಲ ಏಳು ತಾಲ್ಲೂಕುಗಳ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಕೊನೆಯ ಹಂತದಲ್ಲಿ ನಿಡಗುಂದಿ ಹಾಗೂ ಕೊಲ್ಹಾರ ಎರಡು ತಾಲ್ಲುಕುಗಳಾಗಿವೆ. ಆದರೆ ಅದಕ್ಕೆ 30 ದಿನಗಳ ಕಾಲ ಆಕ್ಷೇಪಣೆಯ ಕಾಲಮಿತಿಯಿದೆ. 30 ದಿನಗಳ ನಂತರ ಅಂದರೆ 2018 ರ ಜನವರಿ ಅಂತ್ಯಕ್ಕೆ ನಿಡಗುಂದಿ ತಾಲ್ಲೂಕು ಕಾರ್ಯಾರಂಭ ಮಾಡಲಿದೆ.

ಜಿಲ್ಲೆಯ ಘೋಷಿತ 7 ತಾಲ್ಲೂಕುಗಳಿಗೆ 30 ದಿನಗಳ ಕಾಲ ಆಕ್ಷೇಪಣೆಗೆ ಕಾಲಾವಕಾಶ ನೀಡಿದ್ದರಿಂದ ಜನವರಿ 1 ರಿಂದ ಯಾವುದೇ ಪಟ್ಟಣಗಳು ತಾಲ್ಲೂಕು ಕೇಂದ್ರವಾಗಿ ಕಾರ್ಯಾರಂಭ ಮಾಡುವ ಸಾಧ್ಯತೆ ಕಡಿಮೆ. ಆದರೆ ಜನವರಿ 26 ರೊಳಗೆ ಎಲ್ಲ ಪಟ್ಟಣಗಳು ತಾಲ್ಲೂಕು ಕೇಂದ್ರವಾಗಲಿವೆ ಎಂದು ವಿಜಯಪುರ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಬೂದೆಪ್ಪ ಆಲಮಟ್ಟಿಯಲ್ಲಿ ಬುಧವಾರ ಪತ್ರಕರ್ತರಿಗೆ ತಿಳಿಸಿದರು.

ನಿಡಗುಂದಿ ತಾಲ್ಲೂಕಿಗೆ ಸೇರ್ಪಡೆಯಾಗುವ ಗ್ರಾಮಗಳು:
ನಿಡಗುಂದಿ ಹೋಬಳಿ: ನಿಡಗುಂದಿ, ಆಲಮಟ್ಟಿ, ಅರಳದಿನ್ನಿ, ಗಣಿ, ಮಾರಡಗಿ, ಮಜರೆಕೊಪ್ಪ, ಆಕಳವಾಡಿ, ಬಿಸಲಕೊಪ್ಪ, ಬೀರಲದಿನ್ನಿ, ಮುಕಾರ್ತಿಹಾಳ, ಉಣ್ಣಿಭಾವಿ, ಅಂಗಡಗೇರಿ, ಬುದ್ನಿ, ಗೊಳಸಂಗಿ, ಸುಳಖೋಡ, ಬಾಗಾನಗರ, ವಂದಾಲ, ಗೋನಾಳ, ಅಬ್ಬಿಹಾಳ, ಕಿರಿಶ್ಯಾಳ, ಹುಣಶ್ಯಾಳ ಪಿಸಿ. ಚಿಮ್ಮಲಗಿ, ಗುಡದಿನ್ನಿ, ಶೀಕಳವಾಡಿ, ಬೇನಾಳ, ದೇವಲಾಪುರ, ಮರಿಮಟ್ಟಿ, ಹೆಬ್ಬಾಳ, ಜೀರಲಭಾವಿ, ಇಟಗಿ, ಆರೇಶಂಕರ, ಮುದ್ದಾಪುರ.

ಹೂವಿನಹಿಪ್ಪರಗಿ ಹೋಬಳಿ: ರಾಜನಾಳ, ಬಿದ್ನಾಳ, ಹಾಲಿಹಾಳ, ಬ್ಯಾಲಾಳ, ಕೊಡಗಾನೂರ.

ಮುದ್ದೇಬಿಹಾಳ ಹೋಬಳಿ: ಯಲಗೂರು, ಯಲ್ಲಮ್ಮನಬೂದಿಹಾಳ, ವಡವಡಗಿ, ಬಳಬಟ್ಟಿ, ಕಾಶೀನಕುಂಟಿ, ಮಸೂತಿ.

Comments
ಈ ವಿಭಾಗದಿಂದ ಇನ್ನಷ್ಟು
ದೇವರಹಿಪ್ಪರಗಿ: ಬೆಜೆಪಿ ಯುವ ಮೋರ್ಚಾದಿಂದ ಬೈಕ್ ರ‍್ಯಾಲಿ

ದೇವರಹಿಪ್ಪರಗಿ
ದೇವರಹಿಪ್ಪರಗಿ: ಬೆಜೆಪಿ ಯುವ ಮೋರ್ಚಾದಿಂದ ಬೈಕ್ ರ‍್ಯಾಲಿ

20 Apr, 2018

ವಿಜಯಪುರ
ಕರ್ತವ್ಯಲೋಪ ಕಂಡು ಬಂದರೆ ಅಮಾನತ್ತು ಶಿಕ್ಷೆ

ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ವಿವಿಧ ಕೊಳವೆ ಬಾವಿಗಳ ಸುಸ್ಥಿತಿ ನಿರ್ವಹಣೆಯ ಜವಾಬ್ದಾರಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಿಡಿಒ ಗಳದ್ದಾಗಿದ್ದು, ಜವಾಬ್ದಾರಿಯಿಂದ...

20 Apr, 2018

ವಿಜಯಪುರ
ಚುನಾವಣೆ; 10 ನಾಮಪತ್ರ ಸಲ್ಲಿಕೆ

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಎರಡನೇ ದಿನವಾದ ಗುರುವಾರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ, ಏಳು ವಿಧಾನಸಭಾ ಕ್ಷೇತ್ರಗಳಿಗೆ 10 ನಾಮಪತ್ರ ಸಲ್ಲಿಕೆಯಾಗಿವೆ. ...

20 Apr, 2018
ಏಳು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ‘ಗಾಳಿ’!

ವಿಜಯಪುರ
ಏಳು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ‘ಗಾಳಿ’!

19 Apr, 2018
ನಿಡಗುಂದಿ: ಸಾಮೂಹಿಕ ವಿವಾಹ: ಧರ್ಮ ಸಭೆ

ನಿಡಗುಂದಿ
ನಿಡಗುಂದಿ: ಸಾಮೂಹಿಕ ವಿವಾಹ: ಧರ್ಮ ಸಭೆ

19 Apr, 2018