ಧಾರವಾಡ

ಮಹಿಳಾ ಕಾಂಗ್ರೆಸ್‌ನಿಂದ ಮಲ್ಲಮ್ಮನಿಗೆ ಆತ್ಮೀಯ ಸ್ವಾಗತ

ಕಾಂಗ್ರೆಸ್‌ ಪಕ್ಷ ಸೇರಿದ ನಂತರ ತಾಲ್ಲೂಕಿನ ಗೋವನಕೊಪ್ಪಕ್ಕೆ ಬಂದ ಯೋಗೀಶಗೌಡ ಗೌಡರ ಪತ್ನಿ ಮಲ್ಲಮ್ಮ ಗೌಡರ ಅವರನ್ನು ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಸದಸ್ಯರು ಬುಧವಾರ ತಡರಾತ್ರಿ ಆತ್ಮೀಯವಾಗಿ ಬರಮಾಡಿಕೊಂಡರು

ಧಾರವಾಡ: ಕಾಂಗ್ರೆಸ್‌ ಪಕ್ಷ ಸೇರಿದ ನಂತರ ತಾಲ್ಲೂಕಿನ ಗೋವನಕೊಪ್ಪಕ್ಕೆ ಬಂದ ಯೋಗೀಶಗೌಡ ಗೌಡರ ಪತ್ನಿ ಮಲ್ಲಮ್ಮ ಗೌಡರ ಅವರನ್ನು ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಸದಸ್ಯರು ಬುಧವಾರ ತಡರಾತ್ರಿ ಆತ್ಮೀಯವಾಗಿ ಬರಮಾಡಿಕೊಂಡರು.

ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಂತವ್ವ ಗುಜ್ಜಳ ನೇತೃತ್ವದ ಕಾರ್ಯಕರ್ತೆಯರು ಮಲ್ಲಮ್ಮನಿಗೆ ಪಕ್ಷದ ಸಂಪ್ರದಾಯದಂತೆ ಶಾಲು ಹೊದಿಸಿ ಸನ್ಮಾನಿಸಿದರು. ಕಾಂಗ್ರೆಸ್‌ ಪಕ್ಷ, ಸಚಿವ ವಿನಯ ಕುಲಕರ್ಣಿ ಹಾಗೂ ಮಲ್ಲಮ್ಮಗೌಡರ ಅವರಿಗೆ ಜಯಕಾರ ಹಾಕಿದರು. ನಂತರ ಸಿಹಿ ತಿನಿಸಿ ಸಂಭ್ರಮಿಸಿದರು.

ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ರೇಣುಕಾ ಕಳ್ಳಿಮನಿ, ಪಧಾಧಿಕಾರಿಗಳಾದ ನಿರ್ಮಲಬಾಯಿ ಹೊಂಗಲ, ಕವಿತಾ ಕಟ್ಟಿ, ಉಮಾದೇವಿ ಬಿದರಿಮಠ, ಪೂಜಾ ಹಳ್ಯಾಳ, ಗೌರಿ ನಾಡಗೌಡ, ಶೋಭಾ ಅಣ್ಣಿಗೇರಿ, ಸುಮಾ ಬಿನಗಲರ, ಸುನಿತಾ ವೀರಕರ, ಕಲಾವತಿ ಗಿರಿಯಣ್ಣವರ ಹಾಗೂ ಆನಂದ ಸಿಂಗನಾಥ, ಆಶೀಫ್ ಸೇಖಸನದಿ, ಮಂಜು ಕಾಮಕರ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಚೆಕ್‌ಡ್ಯಾಂ ನಿರ್ಮಾಣ: ಮಾತಿನ ಚಕಮಕಿ

ಧಾರವಾಡ
ಚೆಕ್‌ಡ್ಯಾಂ ನಿರ್ಮಾಣ: ಮಾತಿನ ಚಕಮಕಿ

19 Jan, 2018

ಧಾರವಾಡ
ಕುಟೀರ ತೆರವು ವಿರೋಧಿಸಿ ಪ್ರತಿಭಟನೆ

ತೆರವುಗೊಳಿಸುವ ವೇಳೆ ಕುಟೀರಗಳಲ್ಲಿದ್ದ ಸಾಮಗ್ರಿಗಳನ್ನೂ ಪಾಲಿಕೆ ಸಿಬ್ಬಂದಿಯೇ ತೆಗೆದುಕೊಂಡು ಹೋಗುವ ಮೂಲಕ ನೋವುಂಟು ಮಾಡಿದ್ದಾರೆ.

19 Jan, 2018
ಕುತೂಹಲ ಕೇಂದ್ರವಾದ ಇಂದಿರಾ ಕ್ಯಾಂಟೀನ್‌ ಕಾಮಗಾರಿ

ಧಾರವಾಡ
ಕುತೂಹಲ ಕೇಂದ್ರವಾದ ಇಂದಿರಾ ಕ್ಯಾಂಟೀನ್‌ ಕಾಮಗಾರಿ

18 Jan, 2018
ಮಗಳ ಗುರುತು ಖಾತ್ರಿಪಡಿಸಿದ ಮಚ್ಚೆ!

ಹುಬ್ಬಳ್ಳಿ
ಮಗಳ ಗುರುತು ಖಾತ್ರಿಪಡಿಸಿದ ಮಚ್ಚೆ!

18 Jan, 2018
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಕಲಘಟಗಿ
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

18 Jan, 2018