ಭಾಷಣದ ಗೆಲುವು

ಗುಜರಾತ್‌ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶದಿಂದ ಬಿಜೆಪಿ ಬೀಗಬೇಕಿಲ್ಲ. ಇದು ಮುಂದಿನ ಲೋಕಸಾಭಾ ಚುನಾವಣಾ ಫಲಿತಾಂಶಕ್ಕೆ ದಿಕ್ಸೂಚಿಯೂ ಅಲ್ಲ.

ಗುಜರಾತ್‌ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶದಿಂದ ಬಿಜೆಪಿ ಬೀಗಬೇಕಿಲ್ಲ. ಇದು ಮುಂದಿನ ಲೋಕಸಾಭಾ ಚುನಾವಣಾ ಫಲಿತಾಂಶಕ್ಕೆ ದಿಕ್ಸೂಚಿಯೂ ಅಲ್ಲ. ಹೇಗೆಂದರೆ ಈಗಲೂ ಬಿಜೆಪಿ ಗಳಿಸಿದ ಮತಗಳ ಪ್ರಮಾಣ ಶೇ 49.1 ಮಾತ್ರ! ಇಷ್ಟನ್ನಾದರೂ ಗಳಿಸಲು ಸ್ವತಃ ಮೋದಿಯವರೇ ಹರಸಾಹಸ ಮಾಡಬೇಕಾಯ್ತು. ಪ್ರಧಾನಮಂತ್ರಿಯೇ ಹೀಗೆ ವಿಧಾನಸಭಾ ಚುನಾವಣೆಗೆ ಬೆವರು ಹರಿಸುವುದು ಆಯಾ ರಾಜ್ಯದ ನಾಯಕರ ಗೆಲುವಲ್ಲ ಎಂಬುದನ್ನು ಒತ್ತಿ ಹೇಳುತ್ತಿದೆ.

ಗುಜರಾತ್‌ನಲ್ಲಿ ಮೋದಿಯವರೇ ಗೆದ್ದಂತಾಗಿದೆ. ಅದೂ ಅವರ ಮೋಡಿ ಮಾಡುವ ಭಾಷಣ ಶೈಲಿಯಿಂದ ಸಾಧ್ಯವಾಯಿತು ಎಂಬುದನ್ನು ಗಮನಿಸಬೇಕು. ಜೊತೆಗೆ ರಾಹುಲ್‌ ಗಾಂಧಿಯ ರಾಜಕೀಯ ಅನನುಭವವೂ ಸಹಕರಿಸಿದೆ! ಇದು ಏನೇ ಇರಲಿ, ‘ಮತದಾರ ಪ್ರಜ್ಞಾವಂತ’ ಎಂಬುದನ್ನು ಫಲಿತಾಂಶ ಹೇಳುತ್ತಿದೆಯಾದ್ದರಿಂದ ಮೋದಿಯವರ ಭಾಷಣದ ಮೋಡಿ ಇನ್ನೆಷ್ಟು ದಿನ ನಡೆಯುತ್ತದೆಯೋ ಹೇಳಲಾಗದು. ಹೀಗಾಗಿ ಇದು ಭಾಷಣದ ಗೆಲುವು!

 

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಇವರೇನಾ ಸಾಂಗ್ಲಿಯಾನ!

    ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಅನುಭವವಿರುವ ಇವರ ಮನಸ್ಥಿತಿ ಇಷ್ಟು ಕೀಳಾಯಿತೇ? ಸಣ್ಣ ಪುಟ್ಟದ್ದಕ್ಕೆಲ್ಲಾ ಹೋರಾಟ ಮಾಡುವ ಮಹಿಳೆಯರು ಈಗ ಸುಮ್ಮನಿರುವುದಾದರೂ ಏಕೆ? ನಿರ್ಭಯಾಳ...

20 Mar, 2018

ವಾಚಕರವಾಣಿ
‘ಬಲ’ಕ್ಕೆ ತಿರುಗಿದರೇ?

ಲೆನಿನ್‍ ಅವರನ್ನು ಮೆಚ್ಚಿದ್ದ ಭಗತ್‍ ಸಿಂಗ್, ಗುಹಾ ಅವರು ತಿಳಿದಂತೆ ಅಪ್ರಬುದ್ಧರೂ ಅಲ್ಲ, ಅಮಾಯಕರೂ ಅಲ್ಲ. ಲೆನಿನ್‌ ಅವರ ಮಹಾನತೆಯನ್ನು ಅರ್ಥ ಮಾಡಿ ಕೊಂಡಿದ್ದ ಕ್ರಾಂತಿಕಾರಿ...

20 Mar, 2018

ವಾಚಕರವಾಣಿ
ಹಿಂದೂ– ವೈದಿಕ ಧರ್ಮವಲ್ಲ

ಸಮಿತಿಯು ಹಿಂದೂ ಧರ್ಮವೆಂದರೆ ವೈದಿಕ ಧರ್ಮವೆಂದು ಭಾವಿಸಿ, ಅನೇಕ ವಿಷಯಗಳಲ್ಲಿ ವೈದಿಕಕ್ಕೂ, ಲಿಂಗಾಯತಕ್ಕೂ ಇರುವ ವ್ಯತ್ಯಾಸಗಳನ್ನು ಎತ್ತಿ ತೋರಿಸುತ್ತಾ, ತನ್ನ ಶಿಫಾರಸಿಗೆ ಸಮರ್ಥನೆ ನೀಡಿದಂತಿದೆ....

20 Mar, 2018

ವಾಚಕರವಾಣಿ
‘ನಿವೃತ್ತಿವೇತನ ಭಾಗ್ಯ’ ಕೊಡಿ

ನಾಡಿನ ಜನರಿಗೆ ಹಲವು ಭಾಗ್ಯಗಳನ್ನು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಾರಿಗೆ ಸಂಸ್ಥೆಯ ಸಿಬ್ಬಂದಿಗೂ ‘ನಿವೃತ್ತಿನೇತನ ಭಾಗ್ಯ’ವನ್ನು ನೀಡಿ ನಮ್ಮ ಕುಟುಂಬಗಳಲ್ಲಿ ಬೆಳಕು ಕಾಣುವಂತೆ...

17 Mar, 2018

ವಾಚಕರವಾಣಿ
ಹಾಸ್ಯಾಸ್ಪದ ಹೇಳಿಕೆ!

‘ಬಿಜೆಪಿಯವರಿಗೆ ಸಂವಿಧಾನ ಗೊತ್ತಿಲ್ಲ. ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಟೀಕಿಸಿದ್ದಾರೆ. ಆಡಳಿತ ಪಕ್ಷದವರಂತೆ ಬಿಜೆಪಿಯವರೂ ಪ್ರಜಾಸತ್ತಾತ್ಮಕವಾಗಿ ಜನರಿಂದಲೇ ಆರಿಸಿ ಬಂದವರು.

17 Mar, 2018