ಅಜ್ಜಂಪುರ

ಬಹಿರಂಗ ಚರ್ಚೆಗೆ ಶಾಸಕ ಶ್ರೀನಿವಾಸ್ ಅಹ್ವಾನ

‘ಮಾಜಿ ಶಾಸಕರು ತಮ್ಮ ಅವಧಿಯಲ್ಲಿ ರಸ್ತೆ ಮತ್ತು ನೀರಾವರಿ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಅನುದಾನವೂ ಬಿಡುಗಡೆ ಆಗಿತ್ತು. ಅದನ್ನೇ ಶಾಸಕ ಶ್ರೀನಿವಾಸ್ ತಮ್ಮ ಸಾಧನೆ ಎಂದು ಬಿಂಬಿಸುತ್ತಿದ್ದಾರೆ’

ಅಜ್ಜಂಪುರ: ತಾಲ್ಲೂಕಿನ ರಸ್ತೆ ಮತ್ತು ನೀರಾವರಿಗೆ ಕಾಮಗಾರಿಗೆ ₹900 ಕೋಟಿಗೂ ಅಧಿಕ ಅನುದಾನ ತಂದಿದ್ದು, ಈ ಬಗ್ಗೆ ಬಹಿರಂಗ ಚರ್ಚಿಸಲು ಸೋಮವಾರ ಸಂಜೆ 4ಕ್ಕೆ ತರೀಕೆರೆಯ ಪ್ರವಾಸಿ ಮಂದಿರಕ್ಕೆ ಬರುವಂತೆ ಶಾಸಕ ಜಿ.ಎಚ್.ಶ್ರೀನಿವಾಸ್ ಬಿಜೆಪಿ ಹಾಗೂ ಜೆಡಿಎಸ್‌ಗೆ ಮುಕ್ತ ಅಹ್ವಾನ ನೀಡಿದ್ದಾರೆ.

‘ಮಾಜಿ ಶಾಸಕರು ತಮ್ಮ ಅವಧಿಯಲ್ಲಿ ರಸ್ತೆ ಮತ್ತು ನೀರಾವರಿ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಅನುದಾನವೂ ಬಿಡುಗಡೆ ಆಗಿತ್ತು. ಅದನ್ನೇ ಶಾಸಕ ಶ್ರೀನಿವಾಸ್ ತಮ್ಮ ಸಾಧನೆ ಎಂದು ಬಿಂಬಿಸುತ್ತಿದ್ದಾರೆ’ ಎಂದು ಕೆಲವರು ಆರೋಪಿಸಿದ್ದಾರೆ. ಆದರೆ ನಾನು ಅಧಿಕಾರಕ್ಕೆ ಬಂದ ಮೇಲೆ ಯಾವ ನೀರಾವರಿ ಕಾಮಗಾರಿಗೆ ಕ್ಯಾಬಿನೇಟ್ ಅನುಮೋದನೆ ನೀಡಿದೆ, ಯಾವಾಗ ನೀಡಿದೆ, ಯಾವಾಗ ಬೋರ್ಡ್ ಕಂಟ್ರೋಲ್ ಅಂಕಿತ ನೀಡಿದೆ, ಯಾವಾಗ ಟೆಂಡರ್ ಆಗಿದೆ ಎಂಬುದನ್ನು ಆಧಾರ ಸಹಿತವಾಗಿ ನಿರೂಪಿಸುವುದಾಗಿ’ ತಿಳಿಸಿದರು.

‘ಈಗಾಗಲೇ ಎರಡು ಬಾರಿ ಬಹಿರಂಗ ಚರ್ಚೆಗೆ ದಿನಾಂಕ ನಿಗದಿಪಡಿಸಿದ್ದರೂ ಯಾರೊಬ್ಬರೂ ಚರ್ಚೆಗೆ ಬಂದಿಲ್ಲ. ಕೇವಲ ಆಧಾರರಹಿತವಾಗಿ ಹಾಗು ಸುಳ್ಳು ಆರೋಪಗಳನ್ನು ಮಾಡದೇ ತಮ್ಮೊಂದಿಗೆ ನೇರವಾಗಿ ಚರ್ಚೆಗೆ ಬರುವಂತೆ’ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲ

ಚಿಕ್ಕಮಗಳೂರು
ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲ

23 Jan, 2018

ತರೀಕೆರೆ
ಅಮ್ಮನ ಹಬ್ಬ ಕುರಿಗಳ ವ್ಯಾಪಾರ ಬಲು ಜೋರು

ಪಟ್ಟಣದ ಬಯಲು ರಂಗಮಂದಿರದಲ್ಲಿ ಮೂರ್ನಾಲ್ಕು ದಿನಗಳಿಂದ ಅಮ್ಮನ ಹಬ್ಬದ ಅಂಗವಾಗಿ ನಡೆಯುತ್ತಿರುವ ಕುರಿಗಳ ಮಾರಾಟ ಬಲು ಜೋರಾಗಿತ್ತು.

23 Jan, 2018

ಕೊಪ್ಪ
ಕಾಯಕಲ್ಪಕ್ಕೆ ಕಾದಿದೆ ಅಂಗನವಾಡಿ ಕೇಂದ್ರ

‘ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆತಂಕದಲ್ಲಿ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಿದ್ದೇವೆ.

22 Jan, 2018
ಪ್ರಜಾಸತ್ತಾತ್ಮಕ ಶಕ್ತಿಗಳು ಒಗ್ಗೂಡಿ ಆಂದೋಲನ

ಚಿಕ್ಕಮಗಳೂರು
ಪ್ರಜಾಸತ್ತಾತ್ಮಕ ಶಕ್ತಿಗಳು ಒಗ್ಗೂಡಿ ಆಂದೋಲನ

21 Jan, 2018
ನೀರಿಗೆ ಅನುದಾನಕ್ಕೆ ಸಿ.ಎಂಗೆ ಪತ್ರ: ದೇವೇಗೌಡ

ಚಿಕ್ಕಮಗಳೂರು
ನೀರಿಗೆ ಅನುದಾನಕ್ಕೆ ಸಿ.ಎಂಗೆ ಪತ್ರ: ದೇವೇಗೌಡ

20 Jan, 2018