ತಿಳಿವಳಿಕೆಯ ಜಾಡು!

ಹಿರಿಯ ವಕೀಲ ಪ್ರಶಾಂತ ಭೂಷಣ್‌ ಅವರ ‘ದಿನದ ಟ್ವೀಟ್‌’ (ಪ್ರ.ವಾ., ಡಿ. 15) ಹಾಸ್ಯಾಸ್ಪದವಾಗಿದೆ! ‘ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅದು ಪ್ರಜಾತಂತ್ರದ ಸೋಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಹಿರಿಯ ವಕೀಲ ಪ್ರಶಾಂತ ಭೂಷಣ್‌ ಅವರ ‘ದಿನದ ಟ್ವೀಟ್‌’ (ಪ್ರ.ವಾ., ಡಿ. 15) ಹಾಸ್ಯಾಸ್ಪದವಾಗಿದೆ! ‘ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅದು ಪ್ರಜಾತಂತ್ರದ ಸೋಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಪಕ್ಷವೊಂದನ್ನು ಗೆಲ್ಲಿಸುವವರು ಅಥವಾ ಸೋಲಿಸುವವರು ಮತದಾರರು. ಚುನಾವಣೆಯಲ್ಲಿ ಬಿಜೆಪಿ ಸೋತರೆ ಅಲ್ಲಿ ಪ್ರಜಾತಂತ್ರದ ಗೆಲುವನ್ನು ಪ್ರಶಾಂತ ಭೂಷಣ್‌ ಕಾಣುತ್ತಾರೆ! ಪ್ರಜಾತಂತ್ರ ನಿಂತಿರುವುದೇ ಮತದಾರರ ಮರ್ಜಿಯ ಮೇಲೆ. ಹೀಗಿರುವಾಗ ಮತದಾರರ ತೀರ್ಮಾನವನ್ನು ಪ್ರಾಂಜಲವಾಗಿ ಸ್ವೀಕರಿಸುವುದು ತಿಳಿವಳಿಕೆ ಇರುವವರ ನಿಲುವಾಗಬೇಕು.

ಗುಜಾತ್‌ನಲ್ಲಿ ಈಗ ಬಿಜೆಪಿಗೆ ಗೆಲುವಾಗಿದ್ದು, ಅವರ ಪ್ರಕಾರ ಅಲ್ಲಿ ಪ್ರಜಾಪ್ರಭುತ್ವಕ್ಕೆ ಸೋಲಾಗಿದೆಯೇ? ಆಗಲಿ ಬಿಡಿ, ಅಲ್ಲಿನ ಮತದಾರರಿಗೆ ಪ್ರಜಾತಂತ್ರ ಬೇಡ ಎಂದಾಯಿತು! ‘ಬಿಜೆಪಿಯನ್ನು ವಿರೋಧಿಸುವ ಪಕ್ಷಗಳು ಮಾತ್ರ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವಂಥವು’ ಎನ್ನುವುದು ಅವರ ಗ್ರಹಿಕೆ, ನಂಬಿಕೆ. ಇದಕ್ಕೆ ಏನೆನ್ನೋಣ?

ಪ್ರಶಾಂತ ಭೂಷಣ್‌ ಒಬ್ಬ ಅತೃಪ್ತ, ನಿರುತ್ಸಾಹಿ ವ್ಯಕ್ತಿ ಎನ್ನುವುದನ್ನು ಅವರ ಟ್ವೀಟ್‌ಗಳು ಸಾಬೀತು ಮಾಡುತ್ತವೆ. ತಮ್ಮ ತಿಳಿವಳಿಕೆ ಹರಿಯುತ್ತಿರುವ ಜಾಡನ್ನು ಬದಲಾಯಿಸಬೇಕೇ ಎನ್ನುವುದನ್ನು ಅವರೇ ಕಂಡುಕೊಳ್ಳಬೇಕು. ಅದಕ್ಕೆ ಅವರ ತಿಳಿವಳಿಕೆಯೇ ನೆರವಾಗಬೇಕು.

 

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಮುಕ್ತ ಲೈಂಗಿಕತೆ ಅಗತ್ಯ

‘ಕಾಮಸೂತ್ರ’ಗಳನ್ನು ನೀಡಿದವರು ನಮ್ಮ ದೇಶದ ವಾತ್ಸ್ಯಾಯನ ಮಹರ್ಷಿ. ಅವರು ಪ್ರತಿಪಾದಿಸಿದಂತೆ ಸ್ವಸ್ಥ ಸಮಾಜಕ್ಕೆ ಮುಕ್ತ ಲೈಂಗಿಕತೆ ಅತ್ಯಗತ್ಯ.

23 Apr, 2018

ವಾಚಕರವಾಣಿ
ಗಾಂಧೀಜಿ ಮುತ್ಸದ್ದಿಯೇ!

ಟಿ.ಕೆ. ತ್ಯಾಗರಾಜ್ ಅವರ ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಆರ್.ಕೆ. ದಿವಾಕರ ಬರೆದಿರುವ ಪತ್ರದ ಕುರಿತು (ವಾ.ವಾ., ಏ. 18) ಈ ಅಭಿಪ್ರಾಯ.

23 Apr, 2018

ವಾಚಕರವಾಣಿ
ವಚನ ಉಲ್ಲೇಖದಲ್ಲಿ ಲೋಪ

ಭಾಷಣ ಮಾಡುವಾಗ ಸಹಜವಾಗಿಯೇ ಸಂಭವಿಸಬಹುದಾದ ಮತ್ತು ಉದಾರವಾಗಿ ನಿರ್ಲಕ್ಷಿಸಬಹುದಾದ ಒಂದು ಸಣ್ಣ ಲೋಪವಿರಬಹುದು. ಆದರೆ ಆ ವಚನಕ್ಕೆ ‘ಸೂಳೆ’ ಎಂಬ ಇಲ್ಲದ ಪದ ಸೇರಿದಾಗ...

23 Apr, 2018

ವಾಚಕರವಾಣಿ
ಉತ್ತಮ ಬೆಳವಣಿಗೆ

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ವಂಚಿತರಾದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಒಕ್ಕೂಟ ರಚಿಸಿಕೊಂಡು ತಮ್ಮಲ್ಲೇ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು...

23 Apr, 2018

ವಾಚಕರವಾಣಿ
ಗೆಲುವು – ಗೊಂದಲ!

ಬರಲಿಹ ಬೃಹತ್ ಚುನಾವಣೆಯಲಿ, ಯಾವ ತಾವರೆ ಗೆಲುವುದು;

22 Apr, 2018