ನಂಜನಗೂಡು

ಮೂಲಭೂತವಾದಿಗಳಿಗೆ ಬುದ್ಧಿ ಕಲಿಸಿ: ಸಚಿವ

‘ಅಧಿಕಾರದ ಆಸೆಗಾಗಿ ಸಮಾಜದ ಸೌಹಾರ್ದ ಹಾಳು ಮಾಡುವ ಮೂಲಭೂತವಾದಿಗಳು ಹಾಗೂ ಕೋಮುವಾದಿಗಳನ್ನು ಗಡಿಪಾರು ಮಾಡಬೇಕು’

ನಂಜನಗೂಡು: ‘ಅಧಿಕಾರದ ಆಸೆಗಾಗಿ ಸಮಾಜದ ಸೌಹಾರ್ದ ಹಾಳು ಮಾಡುವ ಮೂಲಭೂತವಾದಿಗಳು ಹಾಗೂ ಕೋಮುವಾದಿಗಳನ್ನು ಗಡಿಪಾರು ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪರೋಕ್ಷವಾಗಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ದ ಹರಿಹಾಯ್ದರು.

ನಗರದ ಜೆಎಸ್ಎಸ್ ಮಂಗಳಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಜವಾಬ್ದಾರಿ ಸ್ಥಾನದಲ್ಲಿರುವ ನಾಯಕರು ಬಾಯಿಗೆ ಬಂದಂತೆ ಮಾತನಾಡಿ ಸಾರ್ವಜನಿಕ ಜೀವನದ ಮೌಲ್ಯ ಕುಸಿಯುವಂತೆ ಮಾಡುತ್ತಿದ್ದಾರೆ. ಇಂತಹವರು ಕ್ರಮೇಣ ಜನರ ವಿಶ್ವಾಸ ಕಳೆದುಕೊಳ್ಳುತ್ತಾರೆ. ಸಂವಿಧಾನ ಬದಲಿಸುವ, ಕೈ ಕತ್ತಿರಿಸಿ, ತಲೆ ತೆಗೆಯಿರಿ ಎಂದು ಹೇಳಿಕೆ ನೀಡುವ ಇವರು ಜನರ ನಡುವಿನ ಪ್ರೀತಿ, ಸೌಹಾರ್ದ ಹಾಳು ಮಾಡುತ್ತಿದ್ದಾರೆ. ಇಂತಹ ಶಕ್ತಿಗಳ ವಿರುದ್ಧ ಬಸವಣ್ಣ ಚಳವಳಿ ಆರಂಭಿಸಿದ್ದರು. ಜನರು ಚುನಾವಣೆ ಯಲ್ಲಿ ಬುದ್ಧಿ ಕಲಿಸಿದರೆ ಪ್ರಜಾಪ್ರಭುತ್ವ ಯಶಸ್ವಿಗೊಳ್ಳುತ್ತದೆ’ ಎಂದು ಹೇಳಿದರು.

‘ಎಂಬಿಬಿಎಸ್ ಓದುತ್ತಿದ್ದಾಗ ಶುಲ್ಕ ತುಂಬಲು ಆರ್ಥಿಕ ಅಡಚಣೆ ಉಂಟಾ ದಾಗ ರಾಜೇಂದ್ರ ಸ್ವಾಮೀಜಿ ಕಾಲೇಜಿಗೆ ಪತ್ರ ಬರೆದು, ಮಹದೇವಪ್ಪನಿಗೆ ಅನುಕೂಲವಾಗುವಂತೆ ಶುಲ್ಕ ಕಟ್ಟಿಸಿ ಕೊಂಡು ವಿದ್ಯಾಭ್ಯಾಸಕ್ಕೆ ಸಹಕರಿಸುವಂತೆ ಶಿಫಾರಸು ಮಾಡಿದ್ದರು. 1980ರಲ್ಲಿ ದೇವರಾಜ ಅರಸ್ ಕಾರ್ಯಕ್ರಮಗಳಿಂದ ಪ್ರೇರಿತನಾಗಿ ಕ್ರಾಂತಿರಂಗದ ಮೂಲಕ ರಾಜಕೀಯ ಪ್ರವೇಶಿಸಿದೆ. ನಂತರ ಎಲ್ಲರ ಸಹಕಾರ, ಬೆಂಬಲದಿಂದ ಈ ಹಂತಕ್ಕೆ ತಲುಪಿದ್ದೇನೆ’ ಎಂದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಡಾ.ಎಚ್.ಸಿ.ಮಹದೇವಪ್ಪ ಅವರ ಪ್ರಯತ್ನದಿಂದ ಬಸವಭವನ ನಿರ್ಮಾಣಕ್ಕೆ ನಿವೇಶನ ದೊರೆಯಿತು. ಕಟ್ಟಡ ನಿರ್ಮಾಣಕ್ಕೆ ₹ 2 ಕೋಟಿ ಅನುದಾನವೂ ದೊರೆತಿದೆ. ರಾಜಕೀಯದಲ್ಲಿ ಮುಂದೆ ಇವರಿಗೆ ಉತ್ತಮ ಭವಿಷ್ಯವಿದೆ ಎಂದರು.

ದೇವನೂರು ಮಠದ ಮಹಾಂತ ಸ್ವಾಮೀಜಿ, ಮಲ್ಲನಮೂಲೆ ಮಠದ ಚೆನ್ನಬಸವ ಸ್ವಾಮೀಜಿ, ಸಚಿವೆ ಮೋಹನ ಕುಮಾರಿ, ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಚೆನ್ನಪ್ಪ, ಶಾಸಕ ಕಳಲೆ ಎನ್.ಕೇಶವಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲೀಲಾವತಿ ಸಿದ್ದವೀರಪ್ಪ, ಲತಾ ಸಿದ್ದಶೆಟ್ಟಿ, ನಗರಸಭಾ ಅಧ್ಯಕ್ಷೆ ಪುಷ್ಪಲತಾ, ಡಾ.ಯತೀಂದ್ರ ಸಿದ್ದರಾಮಯ್ಯ, ಮುಖಂಡರಾದ ಸಿಂಧುವಳ್ಳಿ ಕೆಂಪಣ್ಣ, ಮಾದಪ್ಪ, ಗುರುಪಾದಸ್ವಾಮಿ, ಕುರಿಹುಂಡಿ ಮಹೇಶ್, ಕುರಹಟ್ಟಿ ಮಹೇಶ್, ನಗರಸಭಾ ಸದಸ್ಯರಾದ ಅನುಸೂಯ, ಮೀನಾ, ಮಹದೇವಸ್ವಾಮಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ವಿಜಯೇಂದ್ರ ಅಲ್ಲ; ಸಾಮಾನ್ಯ ಕಾರ್ಯಕರ್ತನ ಸ್ಪರ್ಧೆ

ನಂಜನಗೂಡು
ವಿಜಯೇಂದ್ರ ಅಲ್ಲ; ಸಾಮಾನ್ಯ ಕಾರ್ಯಕರ್ತನ ಸ್ಪರ್ಧೆ

24 Apr, 2018
ದಲಿತ, ಮುಸ್ಲಿಮರಿಗೆ ಉಪಮುಖ್ಯಮಂತ್ರಿ ಸ್ಥಾನ

ಮೈಸೂರು
ದಲಿತ, ಮುಸ್ಲಿಮರಿಗೆ ಉಪಮುಖ್ಯಮಂತ್ರಿ ಸ್ಥಾನ

24 Apr, 2018

ತಿ.ನರಸೀಪುರ
ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ಜನಶಕ್ತಿ ಪ್ರದರ್ಶನ

ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸೋಮವಾರ ಕಾಂಗ್ರೆಸ್, ಬಿಜೆಪಿ, ಎಸ್‌ಜೆಪಿ ಅಭ್ಯರ್ಥಿಗಳು ಸೇರಿ ಒಟ್ಟು 7 ಮಂದಿ ನಾಮಪತ್ರ ಸಲ್ಲಿಸಿದರು.

24 Apr, 2018

ನಂಜನಗೂಡು
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರಚಾರ

ವರುಣಾ ಕ್ಷೇತ್ರ ವ್ಯಾಪ್ತಿಯ ತಾಲ್ಲೂಕಿನ ಹದಿನಾರು ಗ್ರಾಮದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಡಾ.ಎಚ್.ಮಹದೇವಪ್ಪ ಪ್ರಚಾರ ನಡೆಸಿದರು.

24 Apr, 2018

ಮೈಸೂರು
ಚುನಾವಣಾ ಕಣಕ್ಕೆ ನಾಮಪತ್ರಗಳ ಸುರಿಮಳೆ

ಚುನಾವಣಾ ಕಣಕ್ಕೆ ಧುಮುಕಲು ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದ ಬಹತೇಕ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದರು.

24 Apr, 2018