ಮಾಲೂರು

900 ಅಡಿ ಆಳದ ಬಾವಿಯಲ್ಲಿ ಕಂಡಿದ್ದು ಕಿರೀಟವೇ?

ಇತ್ತೀಚೆಗೆ ಸುರಿದ ಮಳೆಯಿಂದ ಅಂತರ್ಜಲ ವೃದ್ಧಿಯಾಗಿದೆ. ಕೊಳವೆ ಬಾವಿಗೂ ನೀರು ಬಂದಿರಬಹುದು ಎನ್ನುವ ನಂಬಿಕೆಯಲ್ಲಿ ಸ್ಕ್ಯಾನಿಂಗ್ ತಂತ್ರಜ್ಞಾನದ ಮೂಲಕ ವೆಂಕಟರವಣಪ್ಪ ನೀರಿನ ಮಟ್ಟ ಪರೀಕ್ಷಿಸಲು ಮುಂದಾಗಿದ್ದರು

ಗೋಚರವಾಗಿರುವ ವಸ್ತು

ಮಾಲೂರು: ತಾಲ್ಲೂಕಿನ ತೊರಹಳ್ಳಿಯ ರೈತ ವೆಂಕಟರಮಣಪ್ಪ ಅವರ ಜಮೀನಿನಲ್ಲಿ ಇರುವ ಬತ್ತಿರುವ 900 ಅಡಿ ಆಳದ ಕೊಳವೆ ಬಾವಿಯಲ್ಲಿ ಮಂಗಳವಾರ ಕಿರೀಟದ ಮಾದರಿಯ ಲೋಹದ ವಸ್ತು ಗೋಚರವಾಗಿದೆ. ಗ್ರಾಮಸ್ಥರ‌ಲ್ಲಿ ಇದು ಕುತೂಹಲಕ್ಕೆ ಕಾರಣವಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಸುರಿದ ಮಳೆಯಿಂದ ಅಂತರ್ಜಲ ವೃದ್ಧಿಯಾಗಿದೆ. ಕೊಳವೆ ಬಾವಿಗೂ ನೀರು ಬಂದಿರಬಹುದು ಎನ್ನುವ ನಂಬಿಕೆಯಲ್ಲಿ ಸ್ಕ್ಯಾನಿಂಗ್ ತಂತ್ರಜ್ಞಾನದ ಮೂಲಕ ವೆಂಕಟರವಣಪ್ಪ ನೀರಿನ ಮಟ್ಟ ಪರೀಕ್ಷಿಸಲು ಮುಂದಾಗಿದ್ದರು. ಸ್ಕ್ಯಾನಿಂಗ್‌ನಲ್ಲಿ ಈ ಲೋಹ ಗೋಚರಿಸಿದೆ.

ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇವೆ. ಸ್ಕ್ಯಾನಿಂಗ್ ಚಿತ್ರಣ ವೀಕ್ಷಿಸಲಾಗುವುದು. ಒಂದು ವೇಳೆ ಇದು ಚಿನ್ನದ ಕಿರೀಟ ಎನ್ನುವುದು ದೃಢವಾದರೆ ಪುರಾತತ್ವ ಇಲಾಖೆಗೆ ಮಾಹಿತಿ ನೀಡುತ್ತೇವೆ ಎಂದು ತಹಶೀಲ್ದಾರ್ ಗಿರೀಶ್ ‘ಪ್ರಜಾವಾಣಿ’ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಕುಂದಾಪುರ
ಕಡಲ ಕಿನಾರೆ ರಂಗೇರಿಸಿದ ಉತ್ಸವ

ಕಡಲ ಪರಂಪರೆಯನ್ನು ನೆನಪಿಸಬೇಕು ಎನ್ನುವ ಮೇಲ್ನೋಟದ ಉದ್ದೇಶವಾಗಿದ್ದರೂ, ಚುನಾವಣೆಯ ಪರ್ವ ಕಾಲದಲ್ಲಿ ಏಕಾಏಕಿ ಕಾಣಿಸಿಕೊಂಡ ಈ ವೈಭದ ಹಬ್ಬದ ಹಿಂದಿರುವ ರಾಜಕೀಯ ಉದ್ದೇಶಗಳು ಗುಟ್ಟಾಗಿ...

23 Jan, 2018
ಗೋವಂಶ ನಾಶದಿಂದ ದೇಶ ನಾಶ

ಮಾಲೂರು
ಗೋವಂಶ ನಾಶದಿಂದ ದೇಶ ನಾಶ

22 Jan, 2018
ಮಾರ್ಚ್‌ ಅಂತ್ಯದೊಳಗೆ ಅನುದಾನ ಬಳಕೆ

ಕಲಬುರ್ಗಿ
ಮಾರ್ಚ್‌ ಅಂತ್ಯದೊಳಗೆ ಅನುದಾನ ಬಳಕೆ

18 Jan, 2018

ಬೆಳಗಾವಿ
ನಾವೇನು ದನಗಳಾ?: ಅನಂತಕುಮಾರ ಹೆಗಡೆ

‘ಸರ್ಕಾರದಿಂದ ಸೈಟ್‌ ಪಡೆದುಕೊಳ್ಳಲು ಕೆಲವರು ಸಾಹಿತಿ ಎನ್ನುವ ಪಟ್ಟ ಕಟ್ಟಿಕೊಂಡಿದ್ದಾರೆ. ಬರೆದಿದ್ದೇ ಸಾಹಿತ್ಯ, ಗೀಚಿದ್ದೇ ಕವಿತೆ ಎನ್ನುವಂತಾಗಿದೆ. ಅದಕ್ಕೆ ಯಾವ ಅರ್ಥವೂ ಇರುವುದಿಲ್ಲ.

17 Jan, 2018
ಸಿದ್ಧಗಂಗಾ ಮಠ ರಸ್ತೆಗೆ ಬೇಕಿದೆ ಮೇಲ್ಸೇತುವೆ ಭಾಗ್ಯ

ತುಮಕೂರು
ಸಿದ್ಧಗಂಗಾ ಮಠ ರಸ್ತೆಗೆ ಬೇಕಿದೆ ಮೇಲ್ಸೇತುವೆ ಭಾಗ್ಯ

16 Jan, 2018