ರಿಲಯನ್ಸ್ ಕಮ್ಯುನಿಕೇಷನ್ಸ್‌ ಸಂಪತ್ತು ಖರೀದಿಸಿದ ರಿಲಯನ್ಸ್‌ ಜಿಯೊ

ತಮ್ಮನ ನೆರವಿಗೆ ಧಾವಿಸಿದ ಅಣ್ಣ

ಅನಿಲ್‌ ಅಂಬಾನಿ ಒಡೆತನದ ಸಾಲದ ಸುಳಿಗೆ ಸಿಲುಕಿರುವ ರಿಲಯನ್ಸ್‌ ಕಮ್ಯುನಿಕೇಷನ್ಸ್‌ (ಆರ್‌ಕಾಂ) ತರಂಗಾಂತರ, ಟವರ್‌, ಆಪ್ಟಿಕಲ್‌ ಫೈಬರ್‌ ಜಾಲ ಮತ್ತು  ಇತರ ವೈರ್‌ಲೆಸ್‌ ಸಂಪತ್ತು ಖರೀದಿಸಲು ಅಣ್ಣ ಮುಕೇಶ್‌ ಅಂಬಾನಿ ಮುಂದಾಗಿದ್ದಾರೆ.

ತಮ್ಮನ ನೆರವಿಗೆ ಧಾವಿಸಿದ ಅಣ್ಣ

ನವದೆಹಲಿ: ಅನಿಲ್‌ ಅಂಬಾನಿ ಒಡೆತನದ ಸಾಲದ ಸುಳಿಗೆ ಸಿಲುಕಿರುವ ರಿಲಯನ್ಸ್‌ ಕಮ್ಯುನಿಕೇಷನ್ಸ್‌ (ಆರ್‌ಕಾಂ) ತರಂಗಾಂತರ, ಟವರ್‌, ಆಪ್ಟಿಕಲ್‌ ಫೈಬರ್‌ ಜಾಲ ಮತ್ತು  ಇತರ ವೈರ್‌ಲೆಸ್‌ ಸಂಪತ್ತು ಖರೀದಿಸಲು ಅಣ್ಣ ಮುಕೇಶ್‌ ಅಂಬಾನಿ ಮುಂದಾಗಿದ್ದಾರೆ.

ಮುಕೇಶ್‌ ಮಾಲೀಕತ್ವದ ರಿಲಯನ್ಸ್‌  ಜಿಯೊ ಇನ್ಫೊಕಾಂ ಲಿಮಿಟೆಡ್‌ಗೆ (ಆರ್‌ಜಿಯೊ) ತನ್ನ ಆಸ್ತಿ ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ರಿಲಯನ್ಸ್‌ ಕಮ್ಯುನಿಕೇಷನ್ಸ್‌ (ಆರ್‌ಕಾಂ) ಗುರುವಾರ ಪ್ರಕಟಿಸಿದೆ. ಈ ಒಪ್ಪಂದ 2018ರ ಮಾರ್ಚ್‌ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಈ ಒಪ್ಪಂದದ ವಿವರಗಳನ್ನು ಎರಡೂ ಕಡೆಯವರು ಬಹಿರಂಗಪಡಿಸದಿದ್ದರೂ, ಬ್ಯಾಂಕಿಂಗ್‌ ಮೂಲಗಳ ಪ್ರಕಾರ, ಈ ವಹಿವಾಟು ₹ 24 ಸಾವಿರ ಕೋಟಿಗಳಿಂದ ₹ 25 ಸಾವಿರ ಕೋಟಿಗಳವರೆಗೆ ಇದೆ ಎಂದು ಅಂದಾಜಿಸಲಾಗಿದೆ.

‘ಆರ್‌ಕಾಂ’ಗೆ ಸೇರಿದ ಸಂಪತ್ತು ಮಾರಾಟ ಮಾಡಿ ಬ್ಯಾಂಕ್‌ಗಳ ₹ 40 ಸಾವಿರ ಕೋಟಿಗಳಷ್ಟು ಸಾಲ ಮರು ಪಾವತಿ ಮಾಡಲಾಗುವುದು. ಆರ್ಥಿಕ ಪುನಶ್ಚೇತನಕ್ಕೂ ಪರಿಹಾರ ಸೂತ್ರ ಕಂಡುಕೊಳ್ಳಲಾಗಿದೆ’ ಎಂದು ಅನಿಲ್‌ ಅಂಬಾನಿ ಅವರು ಮೊನ್ನೆಯಷ್ಟೇ ಹೇಳಿದ್ದರು.

ರಿಲಯನ್ಸ್‌ನ ಸ್ಥಾಪಕ ಧೀರೂಭಾಯಿ ಅಂಬಾನಿ ಅವರ  85 ಜನ್ಮ ದಿನಾಚರಣೆ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ. ‘ಆರ್‌ಕಾಂ’ ಒಟ್ಟಾರೆ ₹ 45 ಸಾವಿರ ಕೋಟಿಗಳಷ್ಟು ಸಾಲದ ಹೊರೆ ಹೊತ್ತುಕೊಂಡಿದೆ.

‘ಆರ್‌ಕಾಂ’ಗೆ ಸೇರಿದ ಸಂಪತ್ತು ಸ್ವಾಧೀನದಿಂದ, ತನ್ನ ಮನೆ – ಮನೆಗಳಿಗೆ ಫೈಬರ್‌, ವೈರ್‌ಲೆಸ್‌ ಸೇವೆ ಮತ್ತು ಉದ್ದಿಮೆ ಸೇವೆ ವಿಸ್ತರಿಸಲು ನೆರವಾಗಲಿದೆ ಎಂದು ‘ಜಿಯೊ’ ತಿಳಿಸಿದೆ. ವರ್ಷದ ಹಿಂದೆ 4ಜಿ ಸೇವೆ ಆರಂಭಿಸಿದ ನಂತರ ಜಿಯೊ ಗ್ರಾಹಕರ ಸಂಖ್ಯೆ ಅಲ್ಪಾವಧಿಯಲ್ಲಿ 16 ಕೋಟಿಗಳಿಗೆ ಏರಿಕೆಯಾಗಿದೆ.

ಕಾರ್ಯಾಚರಣೆ ವೆಚ್ಚ ಭರಿಸಲು ಸಾಧ್ಯವಾಗದ ಕಾರಣಕ್ಕೆ ‘ಆರ್‌ಕಾಂ’ ಒಂದು ತಿಂಗಳ ಹಿಂದೆ ತನ್ನ ಮೊಬೈಲ್ ಕರೆ ಸೇವೆ ಸ್ಥಗಿತಗೊಳಿಸಿತ್ತು.

Comments
ಈ ವಿಭಾಗದಿಂದ ಇನ್ನಷ್ಟು

ನವದೆಹಲಿ
ಮಾರ್ಚ್‌ 31ರ ಒಳಗೆ ಐ.ಟಿ ರಿಟರ್ನ್ಸ್‌ ಸಲ್ಲಿಸಲು ಮನವಿ

ನೋಟು ರದ್ದತಿ ಬಳಿಕ ಬ್ಯಾಂಕ್‌ ಖಾತೆಗಳಲ್ಲಿ  ಭಾರಿ ಪ್ರಮಾಣದಲ್ಲಿ ಠೇವಣಿ ಇಟ್ಟಿರುವ ಬಗ್ಗೆ ಯಾವುದೇ ಬಗೆಯಲ್ಲಿ ಆತಂಕ ಪಡದೇ ಮಾರ್ಚ್ 31ರ ಒಳಗೆ ಆದಾಯ...

24 Mar, 2018
ಮರ್ಸಿಡಿಸ್‌ ಬೆಂಜ್‌ನ ಎಸ್‌ – ಶ್ರೇಣಿಯ ಕಾರು

ಬೆಂಗಳೂರು
ಮರ್ಸಿಡಿಸ್‌ ಬೆಂಜ್‌ನ ಎಸ್‌ – ಶ್ರೇಣಿಯ ಕಾರು

24 Mar, 2018

ಬೆಂಗಳೂರು
ಮಾರತ್‌ಹಳ್ಳಿಯಲ್ಲಿ ತನಿಷ್ಕ್‌ ಹೊಸ ಷೋರೂಂ ಉದ್ಘಾಟನೆ

ಚಿನ್ನಾಭರಣಗಳ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿರುವ ತನಿಷ್ಕ್‌, ನಗರದ ಮಾರತ್‌ಹಳ್ಳಿಯಲ್ಲಿ ತನ್ನ ಹೊಸ ಷೋರೂಂ ಆರಂಭಿಸಿದೆ.

24 Mar, 2018
ಹಣಕ್ಕಾಗಿ ಆನ್‍ಲೈನ್ ರಮ್ಮಿ ಕುರಿತು ದೇಶಾದ್ಯಂತ ಕಾವು ಏರಿದೆ

ಪ್ರಾಯೋಜಿತ ಬರಹ
ಹಣಕ್ಕಾಗಿ ಆನ್‍ಲೈನ್ ರಮ್ಮಿ ಕುರಿತು ದೇಶಾದ್ಯಂತ ಕಾವು ಏರಿದೆ

23 Mar, 2018

ನವದೆಹಲಿ
ಯೂನಿಯನ್‌ ಬ್ಯಾಂಕ್‌ಗೆ ₹313 ಕೋಟಿ ವಂಚನೆ

ಯೂನಿಯನ್‌ ಬ್ಯಾಂಕ್‌ಗೆ  ₹313.84 ಕೋಟಿ ವಂಚಿಸಿದ್ದಕ್ಕಾಗಿ ಹೈದರಾಬಾದ್‌ನ ‘ತೋಟೆಮ್‌ ಇನ್ಫ್ರಾಸ್ಟ್ರಕ್ಚರ್’ ಕಂಪನಿ ಮತ್ತು ಅದರ ಪ್ರವರ್ತಕರ ವಿರುದ್ಧ ಗುರುವಾರ ಸಿಬಿಐ ಪ್ರಕರಣ ದಾಖಲಿಸಿದೆ.

23 Mar, 2018