ರಾಮನಗರ

ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟ

ಬುಧವಾರ ಸಂಜೆ ಅಚ್ಚಲು ಸಮೀಪ ಐದು ಆನೆಗಳ ಹಿಂಡು ಕಾಣಿಸಿಕೊಂಡಿದ್ದು, ಅವುಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು.

ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿಯಾದ್ಯಂತ ಕಾಡಾನೆಗಳ ದಾಳಿ ಮುಂದುವರಿದಿದ್ದು, ಬುಧವಾರ ರಾತ್ರಿ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿವೆ. ಅಂಜನಾಪುರ, ವಿಭೂತಿಕೆರೆ, ಚಿಕ್ಕೇನಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಆನೆಗಳು ದಾಳಿ ನಡೆಸಿವೆ. ಟೊಮ್ಯಾಟೊ. ಗೆಣಸು, ರಾಗಿ ಮೆದೆಗಳು ಗಜಪಡೆಗಳ ದಾಳಿಗೆ ತುತ್ತಾಗಿ ನಾಶವಾಗಿವೆ.

ಬುಧವಾರ ಸಂಜೆ ಅಚ್ಚಲು ಸಮೀಪ ಐದು ಆನೆಗಳ ಹಿಂಡು ಕಾಣಿಸಿಕೊಂಡಿದ್ದು, ಅವುಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು. ರಾತ್ರಿ ವೇಳೆಗೆ ಈ ಗಜಪಡೆ ಅಂಜನಾಪುರ, ವಿಭೂತಿಕೆರೆಯ ಅಕ್ಕಪಕ್ಕವೇ ಕಾಣಿಸಿಕೊಂಡು ಆತಂಕ ಸೃಷ್ಟಿಸಿದವು. ಜನರು ಮನೆಗಳಿಂದ ಹೊರಬರದಂತೆ ಧ್ವನಿವರ್ಧಕದ ಮೂಲಕ ಎಚ್ಚರಿಸಿದ ಸಿಬ್ಬಂದಿ ಅವುಗಳನ್ನು ತೆಂಗಿನಕಲ್ಲು ಅರಣ್ಯ ಪ್ರದೇಶದತ್ತ ಅಟ್ಟಿದರು.

ಆನೆಗಳು ಹಿಂತಿರುಗುವ ಹಾದಿಯಲ್ಲಿ ಚಿಕ್ಕೇನಹಳ್ಳಿ ಗ್ರಾಮದ ಈಶ್ವರ್‌ ಎಂಬುವರ ಬಾಳೆತೋಟ, ಅಂಜನಾಪುರ ಗ್ರಾಮದ ವೀರಭದ್ರಯ್ಯ, ರಾಜಣ್ಣ, ರೇವಣ್ಣ, ಬಸವರಾಜು, ಮಹದೇವಯ್ಯ, ಕೆಂಪಯ್ಯ, ವೀರಮಾದಯ್ಯ ಎಂಬುವರ ರಾಗಿ ಮೆದೆಗಳನ್ನು ಆನೆಗಳು ಧ್ವಂಸಗೊಳಿಸಿದವು.

ಅಂತೆಯೇ ಪುಟ್ಟಸ್ವಾಮಯ್ಯ ಎಂಬುವರಿಗೆ ಸೇರಿದ ತೆಂಗಿನ ಮರ, ಭದ್ರಯ್ಯ ಎಂಬುವರು ಬೆಳೆದ ಟೊಮ್ಯಾಟೊ, ಗೆಣಸು ತೋಟ, ತೆಂಗಿನ ಸಸಿಗಳು, ವಿಭೂತಿಕೆರೆ ಗ್ರಾಮದ ಮಾದಯ್ಯ, ನಾಗರಾಜು, ಸಿದ್ದಪ್ಪ, ಶಿವಲಿಂಗಯ್ಯ, ಶಿವಕುಮಾರ್ ಎಂಬುವರ ರಾಗಿಮೆದೆಗಳು, ಬಸವಣ್ಣ ಅವರ ಹೊಲದಲ್ಲಿನ ಜೋಳ, ಮರಿಮಾದಯ್ಯ ಎಂಬುವರ ಕೊಳವೆಬಾವಿ ಪೈಪ್‌, ನೀರಿನ ಪರಿಕರಗಳನ್ನು ಆನೆಗಳು ನಾಶ ಮಾಡಿವೆ.

ಬಳಿಕ ಆನೆಗಳ ಹಿಂಡು ಬನ್ನಿಕುಪ್ಪೆ, ಚೌಡಯ್ಯನದೊಡ್ಡಿ, ಲಕ್ಕೋಜನಹಳ್ಳಿ, ನಂಜಾಪುರ, ದೊಡ್ಡನಹಳ್ಳಿ, ಕಾಡನಕುಪ್ಪೆ ಮುಖಾಂತರ ತೆಂಗಿನಕಲ್ಲು ಅರಣ್ಯ ಸೇರಿಕೊಂಡಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಅಕ್ರಮ ಜಾಹೀರಾತು ಫಲಕಗಳಿಗೆ ಕಡಿವಾಣ

ರಾಮನಗರ
ಅಕ್ರಮ ಜಾಹೀರಾತು ಫಲಕಗಳಿಗೆ ಕಡಿವಾಣ

15 Jan, 2018
ಬಗೆ ಬಗೆಯ ಸವಿರುಚಿ ಅಡುಗೆ

ಕನಕಪುರ
ಬಗೆ ಬಗೆಯ ಸವಿರುಚಿ ಅಡುಗೆ

15 Jan, 2018
ಸುಗ್ಗಿ ಸಂಕ್ರಾಂತಿ ಖರೀದಿ ಸಂಭ್ರಮ

ರಾಮನಗರ
ಸುಗ್ಗಿ ಸಂಕ್ರಾಂತಿ ಖರೀದಿ ಸಂಭ್ರಮ

14 Jan, 2018

ರಾಮನಗರ
‘ಜನಪದ ಕಲೆ ಉಳಿವಿಗೆ ಪರಿಶ್ರಮ ಅಗತ್ಯ’

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂಸ್ಕೃತಿ ಉಳಿಸುವ ವಾತಾವರಣ ನಿರ್ಮಿಸಲು ಮುಂದಾಗಿದೆ. ದೇಸಿ ಸಂಸ್ಕೃತಿಯ ಪ್ರತೀಕವಾಗಿರುವ ಜನಪದ ವಾದ್ಯ,...

14 Jan, 2018

ಆನೇಕಲ್‌
ಆನೇಕಲ್‌ ಅಭಿವೃದ್ಧಿಗೆ ₹652 ಕೋಟಿ

ಬಳ್ಳೂರು ಗ್ರಾಮ ರಾಜ್ಯದ ಗಡಿ ಗ್ರಾಮವಾಗಿದೆ. ನೆರೆಯ ತಮಿಳುನಾಡಿನ ಕೊತ್ತಗಂಡನಹಳ್ಳಿ, ಬೊಮ್ಮಂಡಹಳ್ಳಿ ಗ್ರಾಮಗಳಲ್ಲಿ ತಮಿಳುನಾಡು ಸರ್ಕಾರ ಕಾವೇರಿ ನೀರು ಪೂರೈಕೆ ಮಾಡುತ್ತಿದೆ.

13 Jan, 2018