ಸವದತ್ತಿ

ಜೋಗುಳಬಾವಿ: ರೋಗ ಹರಡುವ ಭೀತಿ

ಐತಿಹಾಸಿಕ ಪ್ರಸಿದ್ಧ ಸತ್ಯವತಿದೇವಿಯ ಜೋಗುಳಬಾವಿಯ ಪುಣ್ಯತೀರ್ಥದ ನೀರು ಕಲುಷಿತವಾಗುತ್ತಿದ್ದು, ಸಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಭಕ್ತರಿದ್ದಾರೆ.

ಸವದತ್ತಿ: ಐತಿಹಾಸಿಕ ಪ್ರಸಿದ್ಧ ಸತ್ಯವತಿದೇವಿಯ ಜೋಗುಳಬಾವಿಯ ಪುಣ್ಯತೀರ್ಥದ ನೀರು ಕಲುಷಿತವಾಗುತ್ತಿದ್ದು, ಸಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಭಕ್ತರಿದ್ದಾರೆ. ರೇಣುಕಾದೇವಿಯ ದರ್ಶನ ಪಡೆಯುವ ಮುನ್ನ ಭಕ್ತರು ಈ ಜೋಗುಳಬಾವಿಯಲ್ಲಿ ಸ್ನಾನ ಮಾಡುತ್ತಾರೆ. ಸತ್ಯಮ್ಮನ ದರ್ಶನ ಪಡೆದು ಹರಕೆ ತೀರಿಸಿದ ನಂತರ ಯಲ್ಲಮ್ಮನಗುಡ್ಡಕ್ಕೆ ಹೋಗುವ ಪ್ರತೀತಿ ಇದೆ.

ಸತಮ್ಮನ ದೇವಸ್ಥಾನ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ. ಪಟ್ಟಣದ ಹೂಗಾರ ಮನೆತನದವರು ಗುತ್ತಿಗೆದಾರರಾಗಿದ್ದು, ಒಟ್ಟು ಐದು ಬಾರಿ ಬಾವಿಯನ್ನು ಸ್ವಚ್ಛಗೊಳಿಸಿದ್ದಾರೆ. 2016ರಲ್ಲಿ ಜಿಲ್ಲಾಡಳಿತ ಸ್ವಚ್ಛತೆಗೆ ಮುಂದಾಗಿತ್ತು. ಆದರೆ, ಗುತ್ತಿಗೆ ಪಡೆದವರು ಈ ಕಾರ್ಯ ಮಾಡಲು ಆಗಿರಲಿಲ್ಲ. ಮತ್ತೆ ದೇವಸ್ಥಾನದವರೇ ಸ್ವಚ್ಛಗೊಳಿಸಿದ್ದರು.

ಜಿಲ್ಲಾಧಿಕಾರಿ ಆದೇಶದಂತೆ ಬಾವಿಯ ದಡದಲ್ಲಿ ಶವರ್‌ಬಾತ್‌ಗೆ ವ್ಯವಸ್ಥೆ ಮಾಡಲಾಗಿದೆ. ಆದರೂ ಬಹುತೇಕರು ಬಾವಿ ನೀರಿನಲ್ಲಿಯೇ ಸ್ನಾನ ಮಾಡುತ್ತಾರೆ. ‘ಭಕ್ತರು ಶ್ರದ್ಧೆಯಿಂದ ಇಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಬಟ್ಟೆ, ಹಳೆಯ ದೇವರ ಫೋಟೊಗಳನ್ನು ಗಾಜುಸಮೇತ ಬಾವಿಗೆ ಹಾಕುತ್ತಾರೆ. ಇದರಿಂದ ಜೋಗುಳಬಾವಿ ಕೊಳಚೆ ಗುಂಡಿಯಂತಾಗಿದೆ. ನೀರು ಕಲುಷಿತವಾಗಿದೆ’ ಎಂದು ದೇವಸ್ಥಾನದ ಗುತ್ತಿಗೆದಾರ ಶಿವಾನಂದ ಹೂಗಾರ ಹೇಳಿದರು.

‘ಬಾವಿಯಲ್ಲಿ ಉತ್ತಮ ಅಂತರ್ಜಲದ ಮೂಲವಿದೆ. ಆದರೆ, ಒಳಹರಿವಿನಷ್ಟೇ ಹೊರಹರಿವು ಅಗತ್ಯವಿದೆ. ಆಗ ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳಬಹುದು ಎಂದು ಅನೇಕ ಬಾರಿ ದೇವಸ್ಥಾನದ ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಆದರೆ, ಪ್ರಯೋಜನವಾಗಿಲ್ಲ’ ಎಂದು ಮುಖಂಡ ಜಯಸಿಂಗ ರಜಪೂತ ದೂರಿದರು.

 

Comments
ಈ ವಿಭಾಗದಿಂದ ಇನ್ನಷ್ಟು

ಚಿಕ್ಕೋಡಿ
ವೇದಗಂಗೆಗೆ ಕಾಳಮ್ಮವಾಡಿ ನೀರು

ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯದಿಂದ ಚಿಕಲಿ ಬ್ಯಾರೇಜ್ ಮೂಲಕ ವೇದಗಂಗಾ ನದಿಗೆ ನೀರು ಬಿಡುಗಡೆ ಮಾಡಲಾಗಿದ್ದು, ರಾಜ್ಯದ ಯಮಗರ್ಣಿ ಮೂಲಕ ಶನಿವಾರ ಜತ್ರಾಟವರೆಗೆ ನೀರು ತಲುಪಿದೆ. ...

22 Apr, 2018
ಹೆಚ್ಚುತ್ತಿರುವ ‘ಓಪನ್‌ ಬಾರ್‌’; ಆತಂಕ

ಚಿಕ್ಕೋಡಿ
ಹೆಚ್ಚುತ್ತಿರುವ ‘ಓಪನ್‌ ಬಾರ್‌’; ಆತಂಕ

22 Apr, 2018
ಗೋಕಾಕದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಿ

ಬೆಳಗಾವಿ
ಗೋಕಾಕದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಿ

22 Apr, 2018

ಅಥಣಿ
ಕಾಂಗ್ರೆಸ್‌ ಬಂಡಾಯ ಶಮನಕ್ಕೆ ಯತ್ನ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾವುದೇ ಭಯವಿಲ್ಲ. ಸಿದ್ದರಾಮಯ್ಯ ಅವರು ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆದ್ದು ಬರುತ್ತಾರೆ ಎನ್ನುವುದನ್ನು ತೋರಿಸಲು ಬಾದಾಮಿಯಿಂದಲೂ ಕಣಕ್ಕಿಳಿಸಲಾಗುತ್ತಿದೆ ಎಂದು ಜಿಲ್ಲಾ...

22 Apr, 2018

ಬೆಳಗಾವಿ
ನೀತಿ ಸಂಹಿತೆ ಉಲ್ಲಂಘನೆ:ವಾಹನ-,ಮದ್ಯ ವಶ

ಬೆಳಗಾವಿ ಉತ್ತರ ವಿಧಾನಸಭೆ ಕ್ಷೇತ್ರದ ಕಲಕಾಂಬ ಚೆಕ್ ಪೋಸ್ಟ್‌ನಲ್ಲಿ ₹ 3,858 ಮೌಲ್ಯದ 13.590 ಲೀಟರ್‌ ಮದ್ಯ ಹಾಗೂ ₹ 3 ಲಕ್ಷ ಮೌಲ್ಯದ...

22 Apr, 2018