ವಾಷಿಂಗ್ಟನ್‌

2020ಕ್ಕೆ ನಾಸಾದಿಂದ ಹೊಸ ಅತ್ಯಾಧುನಿಕ ದೂರದರ್ಶಕ

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಅತ್ಯಾಧುನಿಕ ಬಾಹ್ಯಾಕಾಶ ದೂರದರ್ಶಕ ತಯಾರಿಸಲು ಯೋಜನೆ ರೂಪಿಸಿದೆ.

2020ಕ್ಕೆ ನಾಸಾದಿಂದ ಹೊಸ ಅತ್ಯಾಧುನಿಕ ದೂರದರ್ಶಕ

ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಅತ್ಯಾಧುನಿಕ ಬಾಹ್ಯಾಕಾಶ ದೂರದರ್ಶಕ ತಯಾರಿಸಲು ಯೋಜನೆ ರೂಪಿಸಿದೆ.

ಹಬಲ್‌ ದೂರದರ್ಶಕಕ್ಕಿಂತ ಸ್ಪಷ್ಟವಾದ ಚಿತ್ರಗಳನ್ನು ಇದು ಸೆರೆ ಹಿಡಿಯಲಿದೆ. 2020ರ ವೇಳೆಗೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

ವೈಡ್ ಫೀಲ್ಡ್ ಇನ್ಫ್ರಾರೆಡ್ ಸರ್ವೆ ಟೆಲಿಸ್ಕೋಪ್‌ (ಡಬ್ಲ್ಯೂಎಫ್‌ಐಆರ್‌ಎಸ್‌ಟಿ) ಎಂದು ಈ ದೂರದರ್ಶಕವನ್ನು ಕರೆಯಲಾಗಿದೆ. ದೂರದರ್ಶಕಕ್ಕೆ ಅಳವಡಿಸಲಾಗಿರುವ ಕ್ಯಾಮೆರಾ 300 ಮೆಗಾಪಿಕ್ಸೆಲ್‌ ಕ್ಷಮತೆ ಹೊಂದಿದೆ. 

‘ಈ ದೂರದರ್ಶಕದಲ್ಲಿ ಸೆರೆಹಿಡಿದ ಚಿತ್ರದ ಗುಣಮಟ್ಟವು ಹಬಲ್‌ ದೂರದರ್ಶಕ ಸೆರೆಹಿಡಿದ ಚಿತ್ರದ ಗುಣಮಟ್ಟಕ್ಕಿಂತ ನೂರು ಪಟ್ಟು ಉತ್ತಮವಾಗಿರುತ್ತದೆ’ ಎಂದು  ಯೋಜನೆಯ ಸಹ ಅಧ್ಯಕ್ಷರಾಗಿರುವ ಡೇವಿಡ್‌ ಸ್ಪೆರ್ಗೆಲ್ ತಿಳಿಸಿದ್ದಾರೆ.

‘ಈ ದೂರದರ್ಶಕ ತೆಗೆದ ಚಿತ್ರವು ಖಗೋಳವಿಜ್ಞಾನಿಗಳಿಗೆ ಬ್ರಹ್ಮಾಂಡದ ರಹಸ್ಯಗಳನ್ನು ಭೇದಿಸಲು ಸಹಕಾರಿಯಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

‘ನಕ್ಷತ್ರಗಳು, ಗ್ರಹಗಳ ಬಗೆಗಿನ ಅಧ್ಯಯನಕ್ಕೆ ಈ ದೂರದರ್ಶಕ ನೆರವಾಗಲಿದೆ. ಇದರಿಂದ ವಿಜ್ಞಾನಿಗಳ ಅಧ್ಯಯನಕ್ಕೆ ಹೆಚ್ಚು ಮಾಹಿತಿ ದೊರೆಯಲಿದೆ’ ಎಂದು ಅವರು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ವಾರಾಂತ್ಯದಲ್ಲಿ ಚೀನಾಗೆ ಮೋದಿ

ಬೀಜಿಂಗ್‌
ವಾರಾಂತ್ಯದಲ್ಲಿ ಚೀನಾಗೆ ಮೋದಿ

23 Apr, 2018
ಆತ್ಮಹತ್ಯಾ ಬಾಂಬ್‌ ಸ್ಫೋಟ: 48 ಮಂದಿ ಸಾವು

ಕಾಬೂಲ್‌
ಆತ್ಮಹತ್ಯಾ ಬಾಂಬ್‌ ಸ್ಫೋಟ: 48 ಮಂದಿ ಸಾವು

22 Apr, 2018
ವಿಶ್ವದ ಹಿರಿಯ ಮಹಿಳೆ ನಿಧನ

ಟೋಕಿಯೊ
ವಿಶ್ವದ ಹಿರಿಯ ಮಹಿಳೆ ನಿಧನ

22 Apr, 2018
ನಟ ವರ್ನೆ ಟ್ರೊಯರ್‌ ನಿಧನ

ಲಾಸ್‌ ಏಂಜಲೀಸ್‌
ನಟ ವರ್ನೆ ಟ್ರೊಯರ್‌ ನಿಧನ

22 Apr, 2018
‘ಸಂಬಂಧ ವೃದ್ಧಿಗೆ ಶಾಂತಿ ಅಗತ್ಯ‘

ಬೀಜಿಂಗ್‌
‘ಸಂಬಂಧ ವೃದ್ಧಿಗೆ ಶಾಂತಿ ಅಗತ್ಯ‘

22 Apr, 2018