ಬಳ್ಳಾರಿ

ಹೊಸ ವರ್ಷಕ್ಕೆ ಹಾಡು, ನೃತ್ಯ ಸಂಭ್ರಮ ಯುವಜನರಲ್ಲಿ ಮನೆ ಮಾಡಿದ ಹರ್ಷ

ಭಾನುವಾರ ರಾತ್ರಿ ಮತ್ತು ಹೊಸ ವರ್ಷದ ಮೊದಲ ದಿನವಾದ ಸೋಮವಾರ ಮುಂಜಾನೆ ನಗರದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳೂ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರಿಂದ ನೂಕುನುಗ್ಗಲು ನಿಯಂತ್ರಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಬಳ್ಳಾರಿ: 2017ರ ಕೊನೆಯ ರಾತ್ರಿ ಕಳೆದು 2018ರ ಹೊಸ ಬೆಳಗನ್ನು ಸ್ವಾಗತಿಸಲು ನಗರದ ಜನ, ಅದರಲ್ಲೂ ಯುವಜನ ಭರದ ಸಿದ್ಧತೆ ನಡೆಸಿದ್ದಾರೆ. ಅವರಿಗಾಗಿಯೇ ನಗರದ ಕೆಲವೆಡೆ 31ರ ರಾತ್ರಿ 7ರಿಂದ ಜ.1ರ ಬೆಳಗಿನ 1ರವರೆಗೂ ಕಾರ್ಯಕ್ರಮಗಳೂ ನಡೆಯಲಿವೆ. ಈ ಕಾರ್ಯಕ್ರಮಗಳ ಮಾಹಿತಿಗಳು ವಾಟ್ಸ್‌ ಆಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ. ನಗರದ ಬಹುತೇಕ ಬಾರ್‌ ಮತ್ತು ರೆಸ್ಟೋರೆಂಟ್‌ಗಳನ್ನು ಮುಂಗಡವಾಗಿಯೇ ಕಾದಿರಿಸಲಾಗಿದೆ.

ಹಲವರು ಮನೆಗಳಲ್ಲಿಯೇ ಮಧ್ಯರಾತ್ರಿ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಿದ್ಧತೆ ನಡೆಸಿದ್ದಾರೆ. ನಗರದ ಬೇಕರಿಗಳಲ್ಲಿ ಕೇಕ್‌ಗಳಿಗಾಗಿ ಬೇಡಿಕೆಯೂ ಹೆಚ್ಚಿದೆ.

ವಿಶೇಷ ಪೂಜೆ: ಭಾನುವಾರ ರಾತ್ರಿ ಮತ್ತು ಹೊಸ ವರ್ಷದ ಮೊದಲ ದಿನವಾದ ಸೋಮವಾರ ಮುಂಜಾನೆ ನಗರದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳೂ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರಿಂದ ನೂಕುನುಗ್ಗಲು ನಿಯಂತ್ರಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಹಾಡು ಕುಣಿತ:
ಹೋಟೆಲ್‌, ಸಂಸ್ಥೆಗಳು ಪ್ಯಾಕೇಜ್‌ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದು, ಸಾವಿರಾರು ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ.

ಹೋಟೆಲ್‌ ರಾಯಲ್‌ಫೋರ್ಟ್‌ನಲ್ಲಿ ‘ನ್ಯೂ ಈಯರ್ ಈವ್‌’ ಏರ್ಪಾಡಾಗಿದ್ದು, ವರ್ಷಾಚರಣೆಗೆ ಬರುವ ದಂಪತಿಗೆ ₨ 1899 ಶುಲ್ಕವನ್ನು ನಿಗದಿ ಮಾಡಲಾಗಿದೆ.

10ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಪ್ರವೇಶವನ್ನೂ ಕಲ್ಪಿಸಲಾಗಿದೆ. ಇಬ್ಬರಿಗೆ ಊಟ ಮತ್ತು 330 ಮಿ.ಲೀ ಬೀರ್‌ ಪೂರೈಸುತ್ತಿದೆ. ಮಕ್ಕಳ ಆಟದ ಅಂಕಣ, ವೃತ್ತಿಪರ ಡಿ.ಜೆ. ನೃತ್ಯ ಕಾರ್ಯಕ್ರಮ, ಇಲ್ಲಿಯೇ ತಯಾರಾದ ವಿದೇಶಿ ಮದ್ಯ ಪೂರೈಕೆಯೂ ಇದೆ.

ನಗರದ ಹೊರವಲಯದ ತಾಳೂರು ರಸ್ತೆಯ ನಾರಾಯಣಮಮ್ಮ ಕಲ್ಯಾಣ ಮಂಟಪದಲ್ಲಿಯೂ ಸಂಸ್ಥೆಯೊಂದು ‘ನ್ಯೂ 2 ಕೆ 18’ ಕಾರ್ಯಕ್ರಮವನ್ನು ಆಯೋಜಿಸಿದೆ.ಡಿ.ಜೆ, ಊಟ, ಫೈರ್‌ ಕ್ಯಾಂಪ್ ಏರ್ಪಾಡಾಗಿದೆ. ಇಲ್ಲಿ ₨ 999 ಶುಲ್ಕ ನಿಗದಿ ಮಾಡಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಫೆಬ್ರುವರಿಯಲ್ಲಿ ಇಂದಿರಾ ಕ್ಯಾಂಟೀನ್‌ ಶುರು

ಬಳ್ಳಾರಿ
ಫೆಬ್ರುವರಿಯಲ್ಲಿ ಇಂದಿರಾ ಕ್ಯಾಂಟೀನ್‌ ಶುರು

18 Jan, 2018
ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆ

ಕುರೆಕುಪ್ಪ
ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆ

17 Jan, 2018
ಜನಸ್ಪಂದನ ಸಭೆಯಲ್ಲಿ ಅಧಿಕಾರಿಗಳೇ ಹೆಚ್ಚು!

ಬಳ್ಳಾರಿ
ಜನಸ್ಪಂದನ ಸಭೆಯಲ್ಲಿ ಅಧಿಕಾರಿಗಳೇ ಹೆಚ್ಚು!

17 Jan, 2018
20ರಂದು ಉದ್ಯೋಗ ಮೇಳ

ಬಳ್ಳಾರಿ
20ರಂದು ಉದ್ಯೋಗ ಮೇಳ

17 Jan, 2018
ಎಲ್ಲೆಡೆ ಎಳ್ಳು ಬೆಲ್ಲದ ಸವಿ...

ಬಳ್ಳಾರಿ
ಎಲ್ಲೆಡೆ ಎಳ್ಳು ಬೆಲ್ಲದ ಸವಿ...

16 Jan, 2018