ಸಂಸ್ಥೆಗಳಿಗೆ ಸೂಚನೆ

ಅಟಲ್‌ ಪಿಂಚಣಿಗೆ ಆಧಾರ್‌: ಹೊಸ ಅರ್ಜಿ

ಹಣಕಾಸು ಸೇವೆಗಳ ಇಲಾಖೆ ಹಾಗೂ ಪಿಂಚಣಿ ಸೇವೆ ಒದಗಿಸುವ ಸಂಸ್ಥೆಗಳ ಸಲಹೆ ಪಡೆದು ಈ ಅರ್ಜಿ ನಮೂನೆ ಸಿದ್ಧಪಡಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಅಟಲ್‌ ಪಿಂಚಣಿಗೆ ಆಧಾರ್‌: ಹೊಸ ಅರ್ಜಿ

ನವದೆಹಲಿ: ಫಲಾನುಭವಿಗಳ ಒಪ್ಪಿಗೆ ಪಡೆದು, ಅಟಲ್ ಪಿಂಚಣಿ ಯೋಜನೆಗೆ (ಎಪಿವೈ) ಆಧಾರ್ ಸಂಪರ್ಕಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಪಿಎಫ್‌ಆರ್‌ಡಿಎ) ಮುಂದಾಗಿದೆ.

ಇದಕ್ಕಾಗಿ ಜನವರಿ 1ರಿಂದ ಪರಿಷ್ಕೃತ ಅರ್ಜಿ ನಮೂನೆಯನ್ನೇ ಬಳಸುವಂತೆ ಸೇವೆಯನ್ನು ಒದಗಿಸುವ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಹಣಕಾಸು ಸೇವೆಗಳ ಇಲಾಖೆ ಹಾಗೂ ಪಿಂಚಣಿ ಸೇವೆ ಒದಗಿಸುವ ಸಂಸ್ಥೆಗಳ ಸಲಹೆ ಪಡೆದು ಈ  ಅರ್ಜಿ ನಮೂನೆ ಸಿದ್ಧಪಡಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಆಧಾರ್‌ ಕಾಯ್ದೆಯ ಅನ್ವಯ ಎಪಿವೈ ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬರೂ ಆಧಾರ್‌ ಮಾಹಿತಿಯನ್ನು ನೀಡಬೇಕು. ಪಿಂಚಣಿದಾರರ ಆಧಾರ್‌ ಮಾಹಿತಿ ಪಡೆದ ಬಳಿಕ ಸೇವಾದಾತ ಸಂಸ್ಥೆಗಳು ಅದನ್ನು ‘ಕೇಂದ್ರೀಯ ದಾಖಲೆ ಸಂಗ್ರಹ ಸಂಸ್ಥೆಯ’ ಜಾಲತಾಣಕ್ಕೆ ಅಪ್ಲೋಡ್‌ ಮಾಡಬೇಕು.

ಬ್ಯಾಂಕ್‌ ಅಥವಾ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ಹೊಂದಿರುವವರು ಎಪಿವೈ ಖಾತೆ ತೆರೆಯಬಹುದು. 60 ವರ್ಷವಾದ ಬಳಿಕ ತಿಂಗಳಿಗೆ
ಕನಿಷ್ಠ ₹ 1,000 ದಿಂದ ಗರಿಷ್ಠ ₹5,000ದವರೆಗೆ ಪಿಂಚಣಿ ಸಿಗುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು

ನವದೆಹಲಿ
ಟಿಸಿಎಸ್‌ ಸಾಧನೆ

ಡಾಲರ್‌ ಎದುರಿನ ರೂಪಾಯಿ ವಿನಿಮಯ ದರ ಗುರುವಾರ ಮಧ್ಯಾಹ್ನ ₹ 66.77 ಇತ್ತು. ಈ ಲೆಕ್ಕದಲ್ಲಿ ಸಂಸ್ಥೆಯ ಮಾರುಕಟ್ಟೆ ಮೌಲ್ಯವು ವಹಿವಾಟಿನ ಅಂತ್ಯದ ವೇಳೆಗೆ...

27 Apr, 2018
ಟ್ರಯಂಫ್‌ ಮೋಟರ್‌ ಸೈಕಲ್ಸ್‌ ಷೋರೂಂ ಆರಂಭ

ಮಂಗಳೂರು
ಟ್ರಯಂಫ್‌ ಮೋಟರ್‌ ಸೈಕಲ್ಸ್‌ ಷೋರೂಂ ಆರಂಭ

27 Apr, 2018
ಸೂಚ್ಯಂಕ 212 ಅಂಶ ಜಿಗಿತ

ಮುಂಬೈ
ಸೂಚ್ಯಂಕ 212 ಅಂಶ ಜಿಗಿತ

27 Apr, 2018

ಮುಂಬೈ
ಟಾಟಾ ಟ್ರಸ್ಟ್‌ಗೆ ಐ.ಟಿ ನೋಟಿಸ್‌: ಹೈಕೋರ್ಟ್ ತಡೆ

ಆರು ಟಾಟಾ ಟ್ರಸ್ಟ್‌ಗಳಿಗೆ ಆದಾಯ ತೆರಿಗೆ ಇಲಾಖೆಯು ನೀಡಿದ್ದ ಷೋಕಾಸ್‌ ನೋಟಿಸ್‌ಗೆ ಬಾಂಬೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

27 Apr, 2018

ಹೈದರಾಬಾದ್‌
ಝೀ ಗ್ರೂಪ್‌ಗೆ ಇನ್ನೊಂದು ಅವಕಾಶ

ಲಕ್ಷಾಂತರ ಠೇವಣಿದಾರರಿಗೆ ವಂಚನೆ ಎಸಗಿರುವ ಆರೋಪ ಎದುರಿಸುತ್ತಿರುವ ಅಗ್ರಿಗೋಲ್ಡ್‌ ಸಂಸ್ಥೆಯ ಸ್ವಾಧೀನಕ್ಕೆ, ಝೀ ಎಸ್ಸೆಲ್‌ ಗ್ರೂಪ್‌ಗೆ ಹೈಕೋರ್ಟ್‌ ಇನ್ನೊಂದು ಅವಕಾಶ ನೀಡಿದೆ.

26 Apr, 2018