ಬದಿಯಡ್ಕ

ವಿದ್ಯುತ್ ಕೊರತೆಯಿಂದ ಯೋಜನೆ ಮೊಟಕು

ಕುಂಬ್ಡಾಜೆ ಗ್ರಾಮ ಪಂಚಾಯಿತಿನ 1 ಹಾಗೂ 2ನೇ ವಾರ್ಡ್‌ಗೆ ನೀರು ಸರಬರಾಜು ಮಾಡಲು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಇದಕ್ಕಾಗಿ ₹ 42 ಲಕ್ಷ ವೆಚ್ಚವಾಗಿತ್ತು. ನಬಾರ್ಡ್‌ ಯೋಜನೆಯಂತೆ ನಿರ್ಮಾಣವಾದ ಈ ಯೋಜನೆಯಿಂದ ನೇರಪ್ಪಾಡಿ, ಮುನಿಯೂರು, ಪೊಡಿಪಳ್ಳದ ಜನತೆಗೆ ಜಲ ಸೌಲಭ್ಯ ನೀಡಲು ಯೋಜಿಸಲಾಗಿತ್ತು.

ಬದಿಯಡ್ಕ: ಎಂಡೋಸಲ್ಫಾನ್ ಪೀಡಿತರಾದ ಅನೇಕ ರೋಗಿಗಳು ಇರುವ ಕುಂಬ್ಡಾಜೆ ಗ್ರಾಮ ಪಂಚಾಯಿತಿಯ ವಿವಿಧ ಪ್ರದೇಶದಲ್ಲಿ ಅನೇಕ ವರ್ಷಗಳ ಹಿಂದೆ ನೀರಾವರಿ ವ್ಯವಸ್ಥೆಗೆ ರೂಪು ನೀಡಿದ್ದರು. ಆದರೆ ವಿದ್ಯುತ್ ಸಂಪರ್ಕ ದೊರೆಯದ ಕಾರಣ ಯೋಜನೆಯು ಬಹುತೇಕ ಮೊಟಕುಗೊಂಡಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯಿಸಿದ್ದಾರೆ’ ಎಂಬ ಆರೋಪ ಇದೆ.

ಕುಂಬ್ಡಾಜೆ ಗ್ರಾಮ ಪಂಚಾಯಿತಿನ 1 ಹಾಗೂ 2ನೇ ವಾರ್ಡ್‌ಗೆ ನೀರು ಸರಬರಾಜು ಮಾಡಲು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಇದಕ್ಕಾಗಿ ₹ 42 ಲಕ್ಷ ವೆಚ್ಚವಾಗಿತ್ತು. ನಬಾರ್ಡ್‌ ಯೋಜನೆಯಂತೆ ನಿರ್ಮಾಣವಾದ ಈ ಯೋಜನೆಯಿಂದ ನೇರಪ್ಪಾಡಿ, ಮುನಿಯೂರು, ಪೊಡಿಪಳ್ಳದ ಜನತೆಗೆ ಜಲ ಸೌಲಭ್ಯ ನೀಡಲು ಯೋಜಿಸಲಾಗಿತ್ತು. ಏತಡ್ಕ ಹೊಳೆಯಲ್ಲಿ ಕೊಳವೆ ಬಾವಿ ಹಾಗೂ ನೇರಪ್ಪಾಡಿಯಲ್ಲಿ ಮೋಟರ್ ಶೆಡ್‌ ಕೂಡಾ ನಿರ್ಮಾಣವಾಗಿತ್ತು.

ಪೊಡಿಪಳ್ಳದಲ್ಲಿ ಬೃಹತ್ ಟ್ಯಾಂಕ್ ನಿರ್ಮಿಸಿದ ನೀರಾವರಿ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆ ತಕರಾರು ಒಂದು ವರ್ಷ ತಡಮಾಡಿತು. ಶೀಘ್ರದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ. ಯೋಜನೆ ಶೀಘ್ರ ಆರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಪುಷ್ಪ ಹೂರಣ: ಚಂದಗೊಂಡ ಸಭಾಂಗಣ

ಉಡುಪಿ
ಪುಷ್ಪ ಹೂರಣ: ಚಂದಗೊಂಡ ಸಭಾಂಗಣ

18 Jan, 2018
ಪಲಿಮಾರು ಮಠದಲ್ಲಿದೆ  800 ವರ್ಷಗಳ ಹಿಂದಿನ ಗ್ರಂಥ

ಉಡುಪಿ
ಪಲಿಮಾರು ಮಠದಲ್ಲಿದೆ 800 ವರ್ಷಗಳ ಹಿಂದಿನ ಗ್ರಂಥ

18 Jan, 2018
ಧರ್ಮ ಸಂಸತ್‌ ನಡೆಸಿ ದೇಶವನ್ನೇ ಸೆಳೆದ ಸಂತ

ಉಡುಪಿ
ಧರ್ಮ ಸಂಸತ್‌ ನಡೆಸಿ ದೇಶವನ್ನೇ ಸೆಳೆದ ಸಂತ

18 Jan, 2018
ಎಲ್ಲೆಲ್ಲೂ ಸಂಭ್ರಮದ ವಾತಾವರಣ

ಉಡುಪಿ
ಎಲ್ಲೆಲ್ಲೂ ಸಂಭ್ರಮದ ವಾತಾವರಣ

17 Jan, 2018

ಉಡುಪಿ
ಮನಸ್ಸಿನ ವಿಕಾಸಕ್ಕೆ ಸಾಹಿತ್ಯ ಅಗತ್ಯ: ವೈದೇಹಿ

‘ಸಮಗ್ರ ವಿಶ್ವ ಸಾಹಿತ್ಯದ ಪರಿಚಯವೇ ‘ಕೃತಿ ಜಗತ್ತು’ ಪುಸ್ತಕದಲ್ಲಿದೆ. ದುರಂತ, ದುಃಖ, ಸಂತೋಷವೆಲ್ಲವನ್ನೂ ವಿಶ್ಲೇಷಿಸಿ, ವಿಮರ್ಶಿಸಿ, ಅರ್ಥೈಸಿರುವ ಒಟ್ಟು 26 ಲೇಖನಗಳನ್ನು ಒಳಗೊಂಡಿದೆ.

17 Jan, 2018