ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ

ಅನುದಾನ ಕಡಿತಗೊಳಿಸುವ ಬೆದರಿಕೆಯೊಡ್ಡಿದ ಟ್ರಂಪ್‌

'ಕಳೆದ 15 ವರ್ಷಗಳಿಂದ ಅಮೆರಿಕವು ಮೂರ್ಖತನದಿಂದ ಪಾಕಿಸ್ತಾನಕ್ಕೆ ₹ 2.10 ಲಕ್ಷ ಕೋಟಿ (33ಬಿಲಿಯನ್‌ ಡಾಲರ್‌) ನೆರವು ನೀಡುತ್ತಾ ಬಂದಿದೆ. ಅದಕ್ಕೆ ಪ್ರತಿಯಾಗಿ ಸುಳ್ಳು, ವಂಚನೆ ಬಿಟ್ಟು ಏನನ್ನೂ ನೀಡಿಲ್ಲ. ನಮ್ಮ ನಾಯಕರನ್ನೂ ಮೂರ್ಖರು ಎಂದು ಭಾವಿಸಿದ್ದಾರೆ’.–ಡೊನಾಲ್ಡ್‌ ಟ್ರಂಪ್‌ 

ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್‌: ಕಳೆದ ಒಂದೂವರೆ ದಶಕದಿಂದ ಪಾಕಿಸ್ತಾನಕ್ಕೆ ನೆರವು ನೀಡುತ್ತಾ ಬಂದಿರುವ ಅಮೆರಿಕವು ಅನುದಾನ ಕಡಿತಗೊಳಿಸುವ ಬೆದರಿಕೆಯೊಡ್ಡಿದೆ. ‘ಅಫ್ಗಾನಿಸ್ತಾನದಲ್ಲಿ ನಾವು ಹುಡುಕುತ್ತಿರುವ ಉಗ್ರರಿಗೆ ಪಾಕಿಸ್ತಾನ ಸ್ವರ್ಗವಾಗಿದೆ. ಇದಕ್ಕಿಂತ ಏನೂ ಹೇಳಲ್ಲ’ ಎಂದು ಅವರು ವಿವರಿಸಿದ್ದಾರೆ.

'ಕಳೆದ 15 ವರ್ಷಗಳಿಂದ ಅಮೆರಿಕವು ಮೂರ್ಖತನದಿಂದ ಪಾಕಿಸ್ತಾನಕ್ಕೆ ₹ 2.10 ಲಕ್ಷ ಕೋಟಿ (33ಬಿಲಿಯನ್‌ ಡಾಲರ್‌) ನೆರವು ನೀಡುತ್ತಾ ಬಂದಿದೆ. ಅದಕ್ಕೆ ಪ್ರತಿಯಾಗಿ ಸುಳ್ಳು, ವಂಚನೆ ಬಿಟ್ಟು ಏನನ್ನೂ ನೀಡಿಲ್ಲ. ನಮ್ಮ ನಾಯಕರನ್ನೂ ಮೂರ್ಖರು ಎಂದು ಭಾವಿಸಿದ್ದಾರೆ’ ಎಂದು ಹೊಸ ವರ್ಷದ ಮೊದಲ ಟ್ವೀಟ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.‌

‘ದೇಶದಲ್ಲಿರುವ ಭಯೋತ್ಪಾದಕ ಸಂಘಟನೆಗಳನ್ನು ನಿಯಂತ್ರಿಸುವಲ್ಲಿ ಪಾಕಿಸ್ತಾನ ವಿಫಲಗೊಂಡಿದ್ದರಿಂದ ಅಲ್ಲಿಗೆ ನೀಡಬೇಕಿದ್ದ ₹16 ಸಾವಿರ ಕೋಟಿ ಅನುದಾನ ತಡೆಹಿಡಿಯುವ ಬಗ್ಗೆ ಟ್ರಂಪ್‌ ಆಡಳಿತವು ಗಂಭೀರ ಚಿಂತನೆ ನಡೆಸಿದೆ’ ಎಂದು ನ್ಯೂಯಾರ್ಕ್‌ ಟೈಮ್ಸ್‌ ಕಳೆದ ವಾರವೇ ವರದಿ ಮಾಡಿತ್ತು.

ಸದುದ್ದೇಶಕ್ಕಾಗಿ ಪಾಕಿಸ್ತಾನಕ್ಕೆ ನೀಡುವ ಅನುದಾನವನ್ನು ಕಡಿತಗೊಳಿಸುವ ಸುಳಿವನ್ನು ಡೊನಾಲ್ಡ್‌ ಟ್ರಂಪ್‌ ಹಿಂದಿನ ತಿಂಗಳೇ ನೀಡಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ವಾರಾಂತ್ಯದಲ್ಲಿ ಚೀನಾಗೆ ಮೋದಿ

ಬೀಜಿಂಗ್‌
ವಾರಾಂತ್ಯದಲ್ಲಿ ಚೀನಾಗೆ ಮೋದಿ

23 Apr, 2018
ಆತ್ಮಹತ್ಯಾ ಬಾಂಬ್‌ ಸ್ಫೋಟ: 48 ಮಂದಿ ಸಾವು

ಕಾಬೂಲ್‌
ಆತ್ಮಹತ್ಯಾ ಬಾಂಬ್‌ ಸ್ಫೋಟ: 48 ಮಂದಿ ಸಾವು

22 Apr, 2018
ವಿಶ್ವದ ಹಿರಿಯ ಮಹಿಳೆ ನಿಧನ

ಟೋಕಿಯೊ
ವಿಶ್ವದ ಹಿರಿಯ ಮಹಿಳೆ ನಿಧನ

22 Apr, 2018
ನಟ ವರ್ನೆ ಟ್ರೊಯರ್‌ ನಿಧನ

ಲಾಸ್‌ ಏಂಜಲೀಸ್‌
ನಟ ವರ್ನೆ ಟ್ರೊಯರ್‌ ನಿಧನ

22 Apr, 2018
‘ಸಂಬಂಧ ವೃದ್ಧಿಗೆ ಶಾಂತಿ ಅಗತ್ಯ‘

ಬೀಜಿಂಗ್‌
‘ಸಂಬಂಧ ವೃದ್ಧಿಗೆ ಶಾಂತಿ ಅಗತ್ಯ‘

22 Apr, 2018