ಅದ್ಧೂರಿ ಮೆರವಣಿಗೆಗೆ ಸಿದ್ಧತೆ ಪೂರ್ಣ

ಪಲಿಮಾರು ಶ್ರೀ ಪುರ ಪ್ರವೇಶ ಇಂದು

ಪರ್ಯಾಯ ಪೂರ್ವಭಾವಿ ತೀರ್ಥಕ್ಷೇತ್ರಯಾತ್ರೆಯಲ್ಲಿರುವ ಸ್ವಾಮೀಜಿ ಅವರು ಸರ್ವಾಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ಅದಮಾರಿನಿಂದ ಉಡುಪಿಗೆ ಬರುವರು. ಸುಮಾರು 200 ಬೈಕ್, ಇತರ ವಾಹನಗಳಲ್ಲಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು.

ಪಲಿಮಾರು ಶ್ರೀ ಪುರ ಪ್ರವೇಶ ಇಂದು

ಉಡುಪಿ: ಇದೇ 18ರಂದು ಪರ್ಯಾಯ ಪೀಠ ಏರಲಿರುವ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಅವರು ಬುಧವಾರ ಸಂಜೆ ಉಡುಪಿ ಪುರ ಪ್ರವೇಶ ಮಾಡಲಿದ್ದಾರೆ.

ಪರ್ಯಾಯ ಪೂರ್ವಭಾವಿ ತೀರ್ಥಕ್ಷೇತ್ರಯಾತ್ರೆಯಲ್ಲಿರುವ ಸ್ವಾಮೀಜಿ ಅವರು ಸರ್ವಾಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ಅದಮಾರಿನಿಂದ ಉಡುಪಿಗೆ ಬರುವರು. ಸುಮಾರು 200 ಬೈಕ್, ಇತರ ವಾಹನಗಳಲ್ಲಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು.

ಮಧ್ಯಾಹ್ನ 3.30ರ ಸುಮಾರಿಗೆ ಅವರು ನಗರದ ಜೋಡುಗಟ್ಟೆ ತಲುಪುವರು. ಸ್ವಾಮೀಜಿ ಅವರಿಗೆ ಸ್ವಾಗತ ಕೋರಿ ಅಲ್ಲಿಂದ ಮೆರವಣಿಗೆ ಮೂಲಕ ಕರೆದೊಯ್ಯಲಾಗುತ್ತದೆ.

ಮಾಲಾರ್ಪಣೆ ಮಾಡಲು ಅವಕಾಶ

ಅದಮಾರಿನಿಂದ ಮೆರವಣಿಗೆ ಮೂಲಕ ಆಗಮಿಸುವ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಅವರಿಗೆ ಮಾಲಾರ್ಪಣೆ ಮಾಡಲು ಹಾಗೂ ಗೌರವಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಎರ್ಮಾಳು, ಉಚ್ಚಿಲ, ಪಾಂಗಳ, ಕಾಪು, ಕಟಪಾಡಿ, ಉದ್ಯಾವರದಲ್ಲಿ ಭಕ್ತರು ಸ್ವಾಮೀಜಿ ಅವರನ್ನು ಗೌರವಿಸಬಹುದು. ಮಧ್ಯಾಹ್ನ 2 ಗಂಟೆಗೆ ಸ್ವಾಮೀಜಿ ಅವರು ಅದಮಾರಿನಿಂದ ಹೊರಡಲಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಪ್ರಧಾನಿ ಭೇಟಿಗೆ ಸಮಯ ಕೇಳಿದ ಸಿ.ಎಂ

ಕಾವೇರಿ ನಿರ್ವಹಣಾ ಮಂಡಳಿ ರಚನೆ ಜಟಾಪಟಿ
ಪ್ರಧಾನಿ ಭೇಟಿಗೆ ಸಮಯ ಕೇಳಿದ ಸಿ.ಎಂ

22 Apr, 2018
ವಿದ್ಯಾರ್ಥಿಗಳು ತಾವೂ ಕಲಿತರು, ನನ್ನನ್ನೂ ಬೆಳೆಸಿದರು

ಮನೆಯಂಗಳದಲ್ಲಿ ಮಾತುಕತೆ
ವಿದ್ಯಾರ್ಥಿಗಳು ತಾವೂ ಕಲಿತರು, ನನ್ನನ್ನೂ ಬೆಳೆಸಿದರು

22 Apr, 2018
ಸಾಕ್ಷ್ಯ ಇಂಗ್ಲಿಷ್‌ನಲ್ಲೇ ದಾಖಲಿಸಲು ‌ಆದೇಶ

ಸುತ್ತೋಲೆ
ಸಾಕ್ಷ್ಯ ಇಂಗ್ಲಿಷ್‌ನಲ್ಲೇ ದಾಖಲಿಸಲು ‌ಆದೇಶ

22 Apr, 2018
ಹೆಡ್‌ಕಾನ್‌ಸ್ಟೆಬಲ್‌ ಬಂಧನ

ಕರ್ತವ್ಯಲೋಪ
ಹೆಡ್‌ಕಾನ್‌ಸ್ಟೆಬಲ್‌ ಬಂಧನ

22 Apr, 2018
‘ಬಿಜೆಪಿ ಅರಿಯಲು ಕಾಮನ್‌ಸೆನ್ಸ್‌ ಸಾಕು’: ಪ್ರಕಾಶ್ ರೈ

ಖಾಸಗಿ ಭದ್ರತೆ
‘ಬಿಜೆಪಿ ಅರಿಯಲು ಕಾಮನ್‌ಸೆನ್ಸ್‌ ಸಾಕು’: ಪ್ರಕಾಶ್ ರೈ

22 Apr, 2018