ಆಹಾರ ತ್ಯಾಜ್ಯ ಕ್ರಷರ್‌ ಯಂತ್ರ ಅಳವಡಿಸುವ ಬಿಬಿಎಂಪಿ ಕ್ರಮಕ್ಕೆ ತಜ್ಞರ ವಿರೋಧ

‘#ಕಿಚನ್‌ಪಲ್ವರೈಸರ್‌ ಬೇಡ’ ಅಭಿಯಾನ

ಕ್ರಷರ್‌ನಲ್ಲಿ ಆಹಾರವನ್ನು ಪುಡಿಪುಡಿ ಮಾಡಲು ಹಾಗೂ ಅದನ್ನು ಒಳಚರಂಡಿಗೆ ಹೋಗುವಂತೆ ಮಾಡಲು ಹೆಚ್ಚಿನ ನೀರು ಬೇಕಾಗುತ್ತದೆ. ಕನಿಷ್ಠ 10–12 ಲೀಟರ್‌ ನೀರಿನ ಅಗತ್ಯವಿದೆ. ಇಲ್ಲದಿದ್ದರೆ ಆಹಾರ ಪದಾರ್ಥಗಳು ಕ್ರಷರ್‌ನಲ್ಲೇ ಅಂಟಿಕೊಳ್ಳುವ ಸಾಧ್ಯತೆ ಇದೆ ಎಂದು ಆನ್‌ಲೈನ್‌ ಅಭಿಯಾನ ಆರಂಭಿಸಿರುವ ಕಸ ನಿರ್ವಹಣಾ ತಜ್ಞ ನಾಗೇಶ್ ಅರಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರು: ನಗರದಲ್ಲಿ ಕಸದ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ‘ಆಹಾರ ತ್ಯಾಜ್ಯ ಕ್ರಷರ್‌ ಯಂತ್ರ’ ಅಳವಡಿಕೆ ಕಡ್ಡಾಯ ಮಾಡಲು ಮುಂದಾಗಿರುವ ಬಿಬಿಎಂಪಿಯ ಕ್ರಮವನ್ನು ವಿರೋಧಿಸಿ ‘#ಕಿಚನ್‌ಪಲ್ವರೈಸರ್‌ಬೇಡ’ ಎಂಬ ಆನ್‌ಲೈನ್‌ ಅಭಿಯಾನ ಆರಂಭಿಸಲಾಗಿದೆ.

ಹೊಸ ಬಡಾವಣೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸುವುದಾಗಿ ಮೇಯರ್‌ ಆರ್‌.ಸಂಪತ್‌ ರಾಜ್‌ ಇತ್ತೀಚೆಗೆ ತಿಳಿಸಿದರು.

ಕ್ರಷರ್‌ನಲ್ಲಿ ಆಹಾರವನ್ನು ಪುಡಿಪುಡಿ ಮಾಡಲು ಹಾಗೂ ಅದನ್ನು ಒಳಚರಂಡಿಗೆ ಹೋಗುವಂತೆ ಮಾಡಲು ಹೆಚ್ಚಿನ ನೀರು ಬೇಕಾಗುತ್ತದೆ. ಕನಿಷ್ಠ 10–12 ಲೀಟರ್‌ ನೀರಿನ ಅಗತ್ಯವಿದೆ. ಇಲ್ಲದಿದ್ದರೆ ಆಹಾರ ಪದಾರ್ಥಗಳು ಕ್ರಷರ್‌ನಲ್ಲೇ ಅಂಟಿಕೊಳ್ಳುವ ಸಾಧ್ಯತೆ ಇದೆ ಎಂದು ಆನ್‌ಲೈನ್‌ ಅಭಿಯಾನ ಆರಂಭಿಸಿರುವ ಕಸ ನಿರ್ವಹಣಾ ತಜ್ಞ ನಾಗೇಶ್ ಅರಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಸದ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ಇದು ಉತ್ತಮಕ್ರಮ ಎಂದು ಪಾಲಿಕೆಯು ಭಾವಿಸಿದಂತಿದೆ. ಆದರೆ, ಈ ವಿಧದ ತ್ಯಾಜ್ಯ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯ ಕೊಳಚೆ ನೀರು ಶುದ್ಧೀಕರಣ ಘಟಕಗಳಿಗೆ (ಎಸ್‌ಟಿಪಿ) ಇಲ್ಲ ಹಾಗೂ ಅದು ಕಾರ್ಯಸಾಧುವೂ ಅಲ್ಲ. ಕೊಬ್ಬಿನಾಂಶ ಹೊಂದಿದ ಪದಾರ್ಥಗಳಲ್ಲಿ ಎಣ್ಣೆಯ ಅಂಶ ಹೆಚ್ಚಾಗಿರುತ್ತದೆ. ಅದು ನೊರೆಯನ್ನು ಸೃಷ್ಟಿ ಮಾಡುತ್ತದೆ. ಅದು ಜಿರಳೆಗಳನ್ನು ಆಕರ್ಷಿಸುತ್ತದೆ. ಇವುಗಳಿಂದ ಕಾಲರಾ ಹರಡುವ ಸಾಧ್ಯತೆ ಇದೆ ಎಂದು ಹೇಳಿದರು.

ಆಹಾರ ತ್ಯಾಜ್ಯವನ್ನು ನೇರವಾಗಿ ಗೊಬ್ಬರವನ್ನಾಗಿ ಪರಿವರ್ತಿಸುವುದು ಒಳ್ಳೆಯ ಕ್ರಮ. ಸಂಸ್ಕರಣೆಯೂ ಸುಲಭ ಹಾಗೂ ಮಿತವ್ಯಯ ಎಂದರು.

500ಕ್ಕೂ ಹೆಚ್ಚಿನ ಜನರು ಸಹಿ ಮಾಡಿದ ಬಳಿಕ ಅದನ್ನು ಮೇಯರ್‌ಗೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಗೌರಿ ಹತ್ಯೆ; ಚಾರ್ಜ್‌ಶೀಟ್ ಸಿದ್ಧ

ಬೆಂಗಳೂರು
ಗೌರಿ ಹತ್ಯೆ; ಚಾರ್ಜ್‌ಶೀಟ್ ಸಿದ್ಧ

26 Apr, 2018

ಪೊಲೀಸರಿಂದ ಭದ್ರತೆ
ವಿಮಾನನಿಲ್ದಾಣ ರಸ್ತೆ ಎರಡೂ ಕಡೆ ಶುಲ್ಕ ಸಂಗ್ರಹ

‘ಪೊಲೀಸ್‌ ಭದ್ರತೆಯಲ್ಲಿ ಶುಲ್ಕ ಸಂಗ್ರಹ ಆರಂಭಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ 15 ಶುಲ್ಕ ವಸೂಲಾತಿ ಕೇಂದ್ರಗಳಿವೆ. ಹೆಚ್ಚುವರಿಯಾಗಿ ನಾಲ್ಕು ಮೊಬೈಲ್‌ ಕೇಂದ್ರಗಳನ್ನು ಆರಂಭಿಸಲಾಗಿದೆ’...

26 Apr, 2018
ಅಭ್ಯರ್ಥಿ ಶ್ರೀನಿವಾಸ್ ರಾಜೀನಾಮೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ

ಬೆಂಗಳೂರು/ಶಿವಮೊಗ್ಗ
ಅಭ್ಯರ್ಥಿ ಶ್ರೀನಿವಾಸ್ ರಾಜೀನಾಮೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ

26 Apr, 2018

ಬೆಂಗಳೂರು
ಒಳಚರಂಡಿ ಪೈಪ್‌ಲೈನ್‌ ಸಮರ್ಪಕ ಅಳವಡಿಕೆಗೆ ಆದೇಶ

‘ಮಂಜುನಾಥ ನಗರ ವ್ಯಾಪ್ತಿಯ ಒಳಚರಂಡಿ ಪೈಪ್‌ಲೈನುಗಳನ್ನು ಬೆಂಗಳೂರು ಜಲಮಂಡಳಿಯು ಆರು ವಾರಗಳಲ್ಲಿ ಸಮಪರ್ಕವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯಗಳ...

26 Apr, 2018

ಕಬ್ಬನ್‌ ಪಾರ್ಕ್‌ ಕೆನೈನ್ಸ್‌, ಬಿಬಿಎಂಪಿ ವತಿಯಿಂದ ಅಭಿಯಾನ
472 ಸಾಕುನಾಯಿಗಳಿಗೆ ಪರವಾನಗಿ

ಕಬ್ಬನ್‌ ಪಾರ್ಕ್‌ ಕೆನೈನ್ಸ್‌ (ಸಿಪಿಸಿ) ಹಾಗೂ ಬಿಬಿಎಂಪಿ ಆಶ್ರಯದಲ್ಲಿ ಕಬ್ಬನ್‌ ಉದ್ಯಾನದಲ್ಲಿರುವ ನಾಯಿ ಉದ್ಯಾನದಲ್ಲಿ (ಡಾಗ್‌ ಪಾರ್ಕ್‌) ಹಮ್ಮಿಕೊಂಡಿದ್ದ ‘3ನೇ ಸಾಕುನಾಯಿ ಪರವಾನಗಿ ಅಭಿಯಾನ’ದಲ್ಲಿ...

26 Apr, 2018