ಬಾದಾಮಿ

ಮಹದಾಯಿ ವಿವಾದ ಶೀಘ್ರ ಇತ್ಯರ್ಥಪಡಿಸಿ: ಸುಮತಿಶ್ರೀ

ಕುಡಿಯುವ ನೀರಿಗಾಗಿ ಮಹಾದಾಯಿ ಹಾಗೂ ಕಳಸಾ ಬಂಡೂರಿ ವಿವಾದವನ್ನು ಸರ್ಕಾರ ಇತ್ಯರ್ಥ ಮಾಡದಿದ್ದರೆ ಉತ್ತರ ಕರ್ನಾಟಕ ರೈತ ಸಂಘದಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು

ಬಾದಾಮಿ: ಉತ್ತರ ಕರ್ನಾಟಕ ಜನತೆ ಕುಡಿಯುವ ನೀರಿಗಾಗಿ ನಡೆಸುತ್ತಿರುವ ಹೋರಾಟವನ್ನು ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಮಹದಾಯಿ ವ್ಯಾಜ್ಯ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಉತ್ತರ ಕರ್ನಾಟಕದ ರೈತ ಸಂಘದ ಮಹಿಳಾ ಅಧ್ಯಕ್ಷೆ ಸುಮತಿಶ್ರೀ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾದಾಯಿ ಸಮಸ್ಯೆ ಬಗ್ಗೆ ರಾಜಕೀಯ ಪಕ್ಷಗಳು ಸುಳ್ಳು ಹೇಳಿಕೆಗಳನ್ನು ಕೊಡುತ್ತ ರೈತರನ್ನು ಸಾಯಿಸುತ್ತಿವೆ’ ಎಂದು ಅವರು ಆರೋಪಿಸಿದರು.

‘ರೈತರಲ್ಲಿ ಒಗ್ಗಟ್ಟಿಲ್ಲ ಎಲ್ಲ ರೈತ ಸಂಘಗಳು ಒಗ್ಗಟ್ಟಾಗಿ ಹೋರಾಟಕ್ಕೆ ಇಳಿದರೆ ಮಾತ್ರ ರಾಜಕೀಯ ಪಕ್ಷಗಳು ನಮ್ಮ ಬಗ್ಗೆ ಕಣ್ಣು ತೆರೆಯುತ್ತವೆ. ಚುನಾವಣೆ ಬಂದಾಗ ರಾಜಕೀಯ ಪಕ್ಷಗಳಿಗೆ ಪಾಠವನ್ನು ಕಲಿಸಬೇಕು. ಮಹದಾಯಿ ನೀರಿನ ಬಗ್ಗೆ ಒಬ್ಬರ ಮೇಲೊಬ್ಬರು ಕೆಸರೆರಚಾಟ ನಡೆಸಿ ರೈತರನ್ನು ಬಲಿಪಶು ಮಾಡಿದ್ದಾರೆ’ ಎಂದು ತಿಳಿಸಿದರು.

ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದ ಮುಖಂಡರನ್ನು ಕರೆಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ವಹಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪಗೌಡ ದೇಸಾಯಿ ಒತ್ತಾಯಿಸಿದರು.

ಕುಡಿಯುವ ನೀರಿಗಾಗಿ ಮಹಾದಾಯಿ ಹಾಗೂ ಕಳಸಾ ಬಂಡೂರಿ ವಿವಾದವನ್ನು ಸರ್ಕಾರ ಇತ್ಯರ್ಥ ಮಾಡದಿದ್ದರೆ ಉತ್ತರ ಕರ್ನಾಟಕ ರೈತ ಸಂಘದಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎಸ್‌. ಸರಗಣಾಚಾರಿ, ಉಪಾಧ್ಯಕ್ಷ ಸೋಮಶೇಖರ್‌ ಬರಗುಂಡಿ, ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಸೊನ್ನದ ಮಾತನಾಡಿದರು. ಜಯದೇವ ಹಿರೇಮಠ ಮತ್ತು ರೈತ ಸಂಘದ ಪದಾಧಿಕಾರಿಗಳು ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಅಂಬಿಗರು ನಂಬಿಗಸ್ಥ ಜನ: ಶಾಸಕ ಮೇಟಿ

ಬಾಗಲಕೋಟೆ
ಅಂಬಿಗರು ನಂಬಿಗಸ್ಥ ಜನ: ಶಾಸಕ ಮೇಟಿ

22 Jan, 2018
‘ಕಾಂಗ್ರೆಸ್ ಎಲ್ಲರೊಂದಿಗೆ ಮುನ್ನಡೆಯಲಿದೆ’

ಬಾಗಲಕೋಟೆ
‘ಕಾಂಗ್ರೆಸ್ ಎಲ್ಲರೊಂದಿಗೆ ಮುನ್ನಡೆಯಲಿದೆ’

22 Jan, 2018
ಫೆಬ್ರುವರಿಯೊಳಗೆ ಕಬ್ಬು ಬಾಕಿ ಪಾವತಿ

ಬಾಗಲಕೋಟೆ
ಫೆಬ್ರುವರಿಯೊಳಗೆ ಕಬ್ಬು ಬಾಕಿ ಪಾವತಿ

21 Jan, 2018

ರಬಕವಿ–ಬನಹಟ್ಟಿ
‘ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ’

‘ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇದರಿಂದ ಅಪಘಾತಗಳಿಂದಾಗುವ ಅನಾಹುತ ತಪ್ಪಿಸಬಹುದು. ಹೆಲ್ಮೆಟ್ ಧರಿಸುವುದರಿಂದ ಪ್ರಾಣ ರಕ್ಷಣೆ ಮಾಡಿಕೊಳ್ಳಬಹುದು’

21 Jan, 2018
33 ಸಾವಿರ ಅಭ್ಯರ್ಥಿಗಳಿಂದ ನೋಂದಣಿ!

ಬಾಗಲಕೋಟೆ
33 ಸಾವಿರ ಅಭ್ಯರ್ಥಿಗಳಿಂದ ನೋಂದಣಿ!

20 Jan, 2018