ಮಲೇಬೆನ್ನೂರು

18 ಅಕ್ರಮ ಪಂಪ್‌ಸೆಟ್‌ ತೆರವು

ಭದ್ರಾನಾಲೆ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ, ಬೆಸ್ಕಾಂ, ನೀರಾವರಿ ನಿಗಮದ ಅಧಿಕಾರಿಗಳನ್ನು ಒಳಗೊಂಡ ತಂಡವು ಗುರುವಾರವೂ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಅಕ್ರಮವಾಗಿ ನಾಲೆಗೆ ಅಳವಡಿಸಿದ್ದ 18 ಪಂಫ್‌ಸೆಟ್‌ಗಳನ್ನು ತೆರವುಗೊಳಿಸಿದೆ.

ಮಲೇಬೆನ್ನೂರು ಶಾಖಾ ನಾಲೆಯ ಮೂರನೇ ಉಪವಿಭಾಗದ ವ್ಯಾಪ್ತಿಯಲ್ಲಿ ಭದ್ರಾನಾಲೆಗೆ ಅಕ್ರಮವಾಗಿ ಅಳವಡಿಸಿದ್ದ ಪಂಪ್‌ಸೆಟ್‌ಗಳನ್ನು ಕಂದಾಯ ಇಲಾಖೆ, ಬೆಸ್ಕಾಂ ಹಾಗೂ ನೀರಾವರಿ ನಿಗಮದ ಸಿಬ್ಬಂದಿ ಒಳಗೊಂಡ ತಂಡವು ಗುರುವಾರ ತೆರವುಗೊಳಿಸಿತು.

ಮಲೇಬೆನ್ನೂರು: ಭದ್ರಾನಾಲೆ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ, ಬೆಸ್ಕಾಂ, ನೀರಾವರಿ ನಿಗಮದ ಅಧಿಕಾರಿಗಳನ್ನು ಒಳಗೊಂಡ ತಂಡವು ಗುರುವಾರವೂ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಅಕ್ರಮವಾಗಿ ನಾಲೆಗೆ ಅಳವಡಿಸಿದ್ದ 18 ಪಂಫ್‌ಸೆಟ್‌ಗಳನ್ನು ತೆರವುಗೊಳಿಸಿದೆ.

ಕೊಪ್ಪ, ಕೊಮಾರನಹಳ್ಳಿ, ಹಾಲಿವಾಣ ಹಾಗೂ ಮಲೇಬೆನ್ನೂರು ವ್ಯಾಪ್ತಿಯ 35ನೇ ಕಿ.ಮೀನಿಂದ 38 ಕಿ.ಮೀ.ವರೆಗೆ ಪೊಲೀಸ್‌ ರಕ್ಷಣೆಯಲ್ಲಿ ಕಾರ್ಯಾಚರಣೆ ನಡೆಯಿತು. ಕೊಮಾರನಹಳ್ಳಿ ಬಳಿ ಅಧಿಕ ಶಕ್ತಿಯ ಒಂದು ಸಬ್‌ಮರ್ಸಿಬಲ್‌ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದ್ದು, ಮಾಲೀಕರು ಯಾರು ಎಂಬುದು ಗೊತ್ತಾಗಿಲ್ಲ.

ಮಲೇಬೆನ್ನೂರು ಶಾಖಾ ನಾಲೆ 48 ಕಿ.ಮೀ. ಉದ್ದ ಇದೆ. 38ನೇ ಕಿ.ಮೀವರೆಗೆ ಕಡಿಮೆ ಪ್ರಮಾಣದಲ್ಲಿ ಹರಿಯುತ್ತಿದೆ. ಪಂಪ್‌ ತೆರವು ಕಾರ್ಯಾಚರಣೆಗೆ ರೈತರು ಅಡ್ಡಿಪಡಿಸಿಲ್ಲ ಎಂದು ಎಇಇ ಗವಿಸಿದ್ದೇಶ್ವರ, ಉಪ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾಹಿತಿ ನೀಡಿದರು.

ಅಕ್ರಮ ಪಂಪ್ ತೆರವು ಮಾಡಿ: ಲಕ್ಕವಳ್ಳಿಯಿಂದ ನಿಯಂತ್ರಣ ಎರಡರ ತನಕ ಭದ್ರಾ ಮುಖ್ಯನಾಲೆಗೆ ಅಳವಡಿಸಿರುವ ಅಕ್ರಮ ಪಂಪ್‌ಸೆಟ್‌ಗಳನ್ನು ಪೊಲೀಸರ ಅಥವಾ ಮಿಲಿಟರಿ ರಕ್ಷಣೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳದ ಹೊರತು, ನಾಲೆಯ ಕೊನೆಭಾಗಕ್ಕೆ ನೀರು ತಲುಪಲು ಅಸಾಧ್ಯ ಎಂದು ಮುಸ್ಲಿಂ ಮುಖಂಡ ಗಫಾರ್ ಖಾನ್ ಅಭಿಪ್ರಾಯಪಟ್ಟರು. ಮಲೇಬೆನ್ನೂರು ಶಾಖಾ ನಾಲೆಯಲ್ಲಿ ಕಾರ್ಯಾಚರಣೆ ಮಾಡುವ ಬದಲು ಮೇಲ್ಭಾಗದಲ್ಲಿ ಪಂಪ್ ತೆರವು ಮಾಡುವುದು ಒಳಿತು ಎಂದು ಅವರು ಹೇಳಿದರು.

ಶನಿವಾರದಿಂದ ಮೂರು ದಿನ ಸರ್ಕಾರಿ ರಜೆ ಇದೆ. ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾಡಳಿತ ಕೊನೆಭಾಗಕ್ಕೆ ನೀರು ತಲುಪಿಸಲು ವಿಶೇಷ ಯೋಜನೆ ರೂಪಿಸದಿದ್ದರೆ ಅಚ್ಚುಕಟ್ಟು ವ್ಯಾಪ್ತಿಯ ಕೊನೆಭಾಗದ ತೆಂಗು, ಅಡಿಕೆ ತೋಟ, ಭತ್ತದ ಗದ್ದೆಗಳು ನೀರಿಲ್ಲದೆ ಒಣಗುತ್ತವೆ. ಕೃಷಿ ಚಟುವಟಿಕೆ ಅಸಾಧ್ಯ, ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಬೀದಿ ಪಾಲಾಗುತ್ತಾರೆ ಎಂದು ರೈತರು ಆತಂಕ ಪಡುತ್ತಾರೆ.

ಈಗಾಗಲೇ ಮೂರು ಬೆಳೆ ಕಳೆದುಕೊಂಡ ರೈತರು ಮುಂಬರುವ ದಿನಗಳಲ್ಲಿ ನಾಲೆ ನೀರಿಗೆ ಒತ್ತಾಯಿಸಿ ಹೋರಾಟಕ್ಕೆ ಇಳಿಯುವುದು ನಿಶ್ಚಿತ. ಪರಿಸ್ಥಿತಿ ಕೈ ಮೀರುವ ಮುನ್ನ ಕೊನೆಭಾಗದ ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಮಠಾಧೀಶರು, ಭದ್ರಾ ನಾಲೆ ನೀರು ಬಳಕೆದಾರರ ಸಂಘದವರು ರೈತರ ನಡುವೆ ಕಲಹ ತಪ್ಪಿಸಿ, ಕೊನೆ ಭಾಗಕ್ಕೂ ನೀರು ಹರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
‘ಹಾದಿ ದೊಡ್ಡದಿದೆ; ಮೋದಿಗೆ ಅಹವಾಲು ಸಲ್ಲಿಸೋಣ’

ದಾವಣಗೆರೆ
‘ಹಾದಿ ದೊಡ್ಡದಿದೆ; ಮೋದಿಗೆ ಅಹವಾಲು ಸಲ್ಲಿಸೋಣ’

21 Mar, 2018

ದಾವಣಗೆರೆ
‘ದೂಡಾ’ ಜಂಟಿ ನಿರ್ದೇಶಕರ ನಿವಾಸದ ಮೇಲೆ ಎಸಿಬಿ ದಾಳಿ

ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ದೂಡಾ)ದ ಜಂಟಿ ನಿರ್ದೇಶಕ ಗೋಪಾಲಕೃಷ್ಣ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಮಂಗಳವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ...

21 Mar, 2018

ಉಚ್ಚಂಗಿದುರ್ಗ
ಭಕ್ತಿ ಭಾವದಲ್ಲಿ ಮಿಂದೆದ್ದ ಭಕ್ತರು

ಶಕ್ತಿ ದೇವತೆಯ ನೆಲೆಬೀಡಾದ ಉಚ್ಚಂಗಿದುರ್ಗದಲ್ಲಿ ಉತ್ಸವಾಂಬ ದೇವಿಯ ಐದು ದಿನಗಳ ಜಾತ್ರಾ ಮಹೋತ್ಸವವು ವಿವಿಧ ಪೂಜೆ–ಪುನಸ್ಕಾರ ಹಾಗೂ ಸಹಸ್ರಾರು ಭಕ್ತರಿಂದ ಮೊಳಗಿದ ‘ಉಧೋ.. ಉಧೋ...’...

21 Mar, 2018

ಹೊನ್ನಾಳಿ
‘ಧರ್ಮಸ್ಥಳ ಯೋಜನೆಯಿಂದ ಹೊನ್ನಾಳಿಗೆ ₹ 37 ಕೋಟಿ ಆರ್ಥಿಕ ಸಹಾಯಧನ’

2018ನೇ ಸಾಲಿನಲ್ಲಿ ಒಟ್ಟು 9,655 ಕುಟುಂಬಗಳಿಗೆ ₹ 37.39 ಕೋಟಿ ಆರ್ಥಿಕ ಸಹಾಯಧನವನ್ನು ನಮ್ಮ ಸಂಸ್ಥೆ ಹಾಗೂ ಯೂನಿಯನ್ ಬ್ಯಾಂಕ್ ಮೂಲಕ ನೀಡಲಾಗಿದೆ’ ಎಂದು...

21 Mar, 2018

ಕುಳಗಟ್ಟೆ
ತುಂಬಿದ ಕೊಡ ಮೂರು ಚೂರಾದೀತು

ಯುಗಾದಿ ಹಬ್ಬದಂದು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವರ ಕಾರ್ಣೀಕ (ವಾರ್ಷಿಕ ಭವಿಷ್ಯ ವಾಣಿ) ನುಡಿಯುವ ಕಾರ್ಯಕ್ರಮ ಸೋಮವಾರ ರಾತ್ರಿ ಸಂಭ್ರಮದಿಂದ ನಡೆಯಿತು.

21 Mar, 2018