, ಗುಜರಾತ್: ಪ್ರಮಾಣ ವಚನ ಸ್ವೀಕರಿಸಲು 'ಶುಭ ಘಳಿಗೆ'ಗಾಗಿ ಕಾಯುತ್ತಿದ್ದಾರೆ ಶಾಸಕರು! | ಪ್ರಜಾವಾಣಿ
ಜ.20ರ ನಂತರ ಅಧಿವೇಶನ

ಗುಜರಾತ್: ಪ್ರಮಾಣ ವಚನ ಸ್ವೀಕರಿಸಲು 'ಶುಭ ಘಳಿಗೆ'ಗಾಗಿ ಕಾಯುತ್ತಿದ್ದಾರೆ ಶಾಸಕರು!

ಶಾಸಕರು ಪ್ರಮಾಣ ವಚನ ಸ್ವೀಕರಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಶಾಸಕರು ಒಂದು ತಿಂಗಳ ಅಶುಭ ಕಾಲ ಮುಗಿಯುವುದಕ್ಕಾಗಿ ಕಾಯುತ್ತಿದ್ದಾರೆ. ಜನವರಿ 20ರ ನಂತರವೇ ವಿಧಾನಸಭೆ ಕಲಾಪ ಆರಂಭವಾಗಲಿದೆ

ಕೃಪೆ: ಟ್ವಿಟರ್ /@BJP4Gujarat

ನವದೆಹಲಿ:  ಡಿಸೆಂಬರ್ 18 ರಂದು ಗುಜರಾತ್ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರದಲ್ಲಿ ಇನ್ನೂ ಕೆಲವು ಶಾಸಕರು ಇದುವರೆಗೆ ಪ್ರಮಾಣ ವಚನ ಸ್ವೀಕರಿಸಿ ಕಾರ್ಯ ಆರಂಭಿಸಿಲ್ಲ. ಸರ್ಕಾರ ರಚನೆಯಾಗಿ 3 ವಾರಗಳು ಕಳೆದರೂ ಪ್ರಮಾಣ ವಚನ ಸ್ವೀಕಾರ ಮಾಡಲು ಇಲ್ಲಿನ ಶಾಸಕರು ಶುಭ ಘಳಿಗೆಗಾಗಿ ಕಾಯುತ್ತಿದ್ದಾರೆ.

ಈ ರೀತಿ ವಿಳಂಬವಾಗಿರುವ ಬಗ್ಗೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಗುಜರಾತ್ ರಾಜ್ಯಪಾಲ ಒ.ಪಿ.ಕೊಹ್ಲಿ ಅವರಿಗೆ ಪತ್ರ ಬರೆದು ಸ್ಪೀಕರ್ ಅವರನ್ನು ನೇಮಕ ಮಾಡಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯ ನೆರವೇರಿಸುವಂತೆ ಒತ್ತಾಯಿಸಿದ್ದರು.

ಶಾಸಕರು ಪ್ರಮಾಣ ವಚನ ಸ್ವೀಕರಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಶಾಸಕರು ಒಂದು ತಿಂಗಳ ಅಶುಭ ಕಾಲ ಮುಗಿಯುವುದಕ್ಕಾಗಿ ಕಾಯುತ್ತಿದ್ದಾರೆ. ಜನವರಿ 20ರ ನಂತರವೇ ವಿಧಾನಸಭೆ ಕಲಾಪ ಆರಂಭವಾಗಲಿದೆ. ಎರಡು ದಿನಗಳ ಕಾಲ ನಡೆಯುವ ಈ ಅಧಿವೇಶನದಲ್ಲಿ ಸ್ಪೀಕರ್ ಚುನಾವಣೆ ಮತ್ತು ಶಾಸಕರ ಪ್ರಮಾಣ ವಚನ ಸ್ವೀಕಾರ  ನಡೆಯಲಿದೆ. ಇದಾದ ನಂತರ ಪೂರ್ವ ನಿಗದಿಯಂತೆ ಬಜೆಟ್ ಅಧಿವೇಶನ ಆರಂಭವಾಗಲಿದೆ ಎಂದು ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ. ಇಲ್ಲಿನ ವಿಧಾನ ಸೌಧದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ತಾತ್ಕಾಲಿಕವಾಗಿ ನಿರ್ಮಿಸಿದ ಕಟ್ಟಡವೊಂದರಲ್ಲಿ  ಕಲಾಪ ನಡೆಯಲಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಹಾದಿಯಾ-ಶಫಿನ್ ಜಹಾನ್ ವಿವಾಹ ರದ್ದು ಮಾಡಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ವಿವಾಹ ಎಂಬುದು ಕಾನೂನು ವಿರುದ್ಧವಾದದು ಅಲ್ಲ
ಹಾದಿಯಾ-ಶಫಿನ್ ಜಹಾನ್ ವಿವಾಹ ರದ್ದು ಮಾಡಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

23 Jan, 2018
’ಪದ್ಮಾವತ್‌’ ಚಿತ್ರ ತಡೆ ಅರ್ಜಿ ವಜಾ; ಸಿನಿಮಾ ಬಿಡುಗಡೆ ಆದೇಶ ಪಾಲನೆಗೆ ಸುಪ್ರೀಂ ತಾಕೀತು

ಕಾನೂನು, ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರಗಳಿಗೆ ಸೂಚನೆ
’ಪದ್ಮಾವತ್‌’ ಚಿತ್ರ ತಡೆ ಅರ್ಜಿ ವಜಾ; ಸಿನಿಮಾ ಬಿಡುಗಡೆ ಆದೇಶ ಪಾಲನೆಗೆ ಸುಪ್ರೀಂ ತಾಕೀತು

23 Jan, 2018
ಯೋಗಿಗೆ ಸವಾಲು ಹಾಕುತ್ತಿದ್ದೀಯ? ಪೊಲೀಸ್ ಅಧಿಕಾರಿಗೆ ಬೆದರಿಕೆಯೊಡ್ಡಿದ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ

ಆಡಿಯೊ ವೈರಲ್
ಯೋಗಿಗೆ ಸವಾಲು ಹಾಕುತ್ತಿದ್ದೀಯ? ಪೊಲೀಸ್ ಅಧಿಕಾರಿಗೆ ಬೆದರಿಕೆಯೊಡ್ಡಿದ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ

23 Jan, 2018

'ಸುಪ್ರೀಂ' ನ್ಯಾಯಮೂರ್ತಿಗಳ ಹುದ್ದೆ
ಮಲ್ಹೋತ್ರ, ಜೋಸೆಫ್‌ ಹೆಸರು ಶಿಫಾರಸು

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಕೊಲಿಜಿಯಂ ಇದೇ 11ರಂದು ಈ ಇಬ್ಬರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.

23 Jan, 2018

ನವದೆಹಲಿ
ಎಂಜಿನಿಯರಿಂಗ್‌ ‘ಸುಪ್ರೀಂ’ ಸ್ಪಷ್ಟನೆ

ಪದವಿ ಉಳಿಸಿಕೊಳ್ಳಬೇಕಾದರೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮೇ–ಜೂನ್‌ನಲ್ಲಿ ನಡೆಸಲಿರುವ ಪರೀಕ್ಷೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಅದು ಹೇಳಿದೆ.

23 Jan, 2018