ಜನಾಂ ಗೀಯ ನಿಂದನೆ

ಸಿಖ್‌ ಸಮುದಾಯದ ವ್ಯಕ್ತಿಗೆ ಪೇಟ ಕಳಚುವಂತೆ ಒತ್ತಾಯ

ಕೆನಡಾದಕ್ಲಬ್‌ವೊಂದರಲ್ಲಿ ಸಿಖ್‌ ಸಮುದಾಯದ ವ್ಯಕ್ತಿಯನ್ನು ಮಹಿಳೆಯೊಬ್ಬರು ಜನಾಂಗೀಯ ನಿಂದನೆಗೀಡು ಮಾಡಿದ್ದಾರೆ ಎಂದು ಸಿಬಿಸಿ ವರದಿ ಮಾಡಿದೆ.

ಜಸ್ವಿಂದರ್‌ ಸಿಂಗ್‌

ಒಟ್ಟಾವ: ಕೆನಡಾದಕ್ಲಬ್‌ವೊಂದರಲ್ಲಿ ಸಿಖ್‌ ಸಮುದಾಯದ ವ್ಯಕ್ತಿಯನ್ನು ಮಹಿಳೆಯೊಬ್ಬರು ಜನಾಂಗೀಯ ನಿಂದನೆಗೀಡು ಮಾಡಿದ್ದಾರೆ ಎಂದು ಸಿಬಿಸಿ ವರದಿ ಮಾಡಿದೆ.

ಜಸ್ವಿಂದರ್‌ ಸಿಂಗ್‌ ಧಾಲಿವಾಲ್‌ ಜನಾಂಗೀಯ ನಿಂದನೆಗೆ ಒಳಗಾದ ವ್ಯಕ್ತಿ. ಪೇಟ ತೆಗೆಯಬೇಕು, ಇಲ್ಲದಿದ್ದರೆ ನಾನೇ ಕಿತ್ತು ಹಾಕುವುದಾಗಿ ಆ ಮಹಿಳೆ ಹೇಳಿದ್ದಾರೆ.

ಜಸ್ವಿಂದರ್‌ ತನ್ನ ಸ್ನೇಹಿತರೊಂದಿಗೆ ರಾಯಲ್‌ ಕೆನಡಿಯನ್‌ ಲೀಜನ್‌ ಕ್ಲಬ್‌ಗೆ ಬಂದಿದ್ದರು. ಇದು ಮಾಜಿ ಯೋಧರು ಸೇರಿ ನಡೆಸುತ್ತಿರುವ ಕ್ಲಬ್‌. ಇದರ ನಿಯಮಾವಳಿಗಳ ಪ್ರಕಾರ ತಲೆ ಮೇಲೆ ಯಾವುದೇ ದಿರಿಸು ಧರಿಸುವುದು ಯೋಧರಿಗೆ ತೋರುವ ಅಗೌರವ. ಆದ್ದರಿಂದ ಅಲ್ಲಿನ ಆಡಳಿತ ಜಸ್ವಿಂದರ್‌ ಅವರಿಗೆ ತಮ್ಮ ಪೇಟ ತೆಗೆಯುವಂತೆ ಸೂಚಿಸಿತು ಎಂದು ಸಿಬಿಸಿ ವರದಿ ಮಾಡಿದೆ.

ಈ ಘಟನೆಗೆ ಸಂಬಧಿಸಿದ ವಿಡಿಯೊದಲ್ಲಿ ಮಹಿಳೆ ಜಸ್ವಿಂದರ್‌ ಅವರಿಗೆ ಸಿಖ್‌ ಪೇಟ ತೆಗೆಯುವಂತೆ ಅಶ್ಲೀಲ ಆಂಗಿಕ ಸೂಚನೆ ನೀಡಿರುವುದು ಹಾಗೂ ಇಲ್ಲಿ ‘ಇದೇ ಕಾನೂನು’ ಎಂದು ಹೇಳಿರುವ ದೃಶ್ಯ ಸೆರೆಯಾಗಿದೆ.

ಕ್ಲಬ್‌ನ ಅಧ್ಯಕ್ಷ ಸ್ಟೀಫನ್‌ ಅವರು ‘ಈ ಘಟನೆಯಿಂದ ನೋವಾದವರಲ್ಲಿ ಕ್ಷಮೆ ಕೇಳಲಾಗುವುದು ಮತ್ತು ಧಾರ್ಮಿಕ ಉಡುಪು ಧರಿಸುವುದಕ್ಕೆ ಸೈನ್ಯದ ನಿಯಮಾವಳಿಗಳಲ್ಲಿ ವಿನಾಯಿತಿ ಇದೆ’ ಎಂದು ಅವರು ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ನಿರ್ಲಕ್ಷ್ಯ: ಎಫ್‌ಬಿಐ ತಪ್ಪೊಪ್ಪಿಗೆ

ಫ್ಲಾರಿಡಾ ಗುಂಡಿನ ದಾಳಿ ಪ್ರಕರಣ
ನಿರ್ಲಕ್ಷ್ಯ: ಎಫ್‌ಬಿಐ ತಪ್ಪೊಪ್ಪಿಗೆ

18 Feb, 2018
ಪಾಕ್‌:  ಅತ್ಯಾಚಾರಿಗೆ ಮರಣದಂಡನೆ

ಬಾಲಕಿಯ ಕೊಲೆ ಮಾಡಿ ಕಸದ ಬುಟ್ಟಿಗೆ ಎಸೆದಿದ್ದ!
ಪಾಕ್‌: ಅತ್ಯಾಚಾರಿಗೆ ಮರಣದಂಡನೆ

18 Feb, 2018
ಅತಿ ಸಂಸ್ಕರಿತ ಆಹಾರಕ್ಕೂ, ಕ್ಯಾನ್ಸರ್‌ಗೂ ಇದೆ ನಂಟು

ಅಧ್ಯಯನ
ಅತಿ ಸಂಸ್ಕರಿತ ಆಹಾರಕ್ಕೂ, ಕ್ಯಾನ್ಸರ್‌ಗೂ ಇದೆ ನಂಟು

18 Feb, 2018
ಆರು ಭಾರತೀಯ ಅಮೆರಿಕನ್ನರಿಗೆ ಗೇಟ್ಸ್‌ ಕೇಂಬ್ರಿಡ್ಜ್‌ ವಿದ್ಯಾರ್ಥಿ ವೇತನ

ವಾಷಿಂಗ್ಟನ್‌
ಆರು ಭಾರತೀಯ ಅಮೆರಿಕನ್ನರಿಗೆ ಗೇಟ್ಸ್‌ ಕೇಂಬ್ರಿಡ್ಜ್‌ ವಿದ್ಯಾರ್ಥಿ ವೇತನ

18 Feb, 2018
ಟ್ರಂಪ್ ಜೊತೆ ಸಂಬಂಧ: ಮತ್ತೊಬ್ಬ ಮಹಿಳೆಯ ಹೇಳಿಕೆ

‘ನ್ಯೂ ಯಾರ್ಕರ್’ ಪತ್ರಿಕೆ ವರದಿ
ಟ್ರಂಪ್ ಜೊತೆ ಸಂಬಂಧ: ಮತ್ತೊಬ್ಬ ಮಹಿಳೆಯ ಹೇಳಿಕೆ

18 Feb, 2018