ಅಮರಾವತಿ: ಆಂಧ್ರ ಪ್ರದೇಶದ ಆಡಳಿತಾರೂಢ ಪಕ್ಷ ತೆಲುಗುದೇಶಂ (ಟಿಡಿಪಿ) ಮತ್ತು ಮಿತ್ರಪಕ್ಷ ಬಿಜೆಪಿಯ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಬಗ್ಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನಿರಾಕರಿಸಿದ್ದಾರೆ.

‘ಒಂದು ವೇಳೆ ಬಿಜೆಪಿಯು ತೆಲುಗುದೇಶಂ ಸಖ್ಯ ತೊರೆಯುವುದಾದರೆ ತೊರೆಯಲಿ. ಅವರಿಗೊಂದು ನಮಸ್ಕಾರ ಹಾಕಿ ಮಾತನಾಡುತ್ತೇನೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಸರ್ಕಾರದ ವಿರುದ್ಧ ಬಿಜೆಪಿ ನಿರಂತರವಾಗಿ ಮಾಡುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

‘ಮಿತ್ರಪಕ್ಷ ಧರ್ಮ’ ಪಾಲನೆ ಬಗ್ಗೆ ಬಿಜೆಪಿ ವರಿಷ್ಠರೇ ತೀರ್ಮಾನಿಸಬೇಕು ಎಂದು ನಾಯ್ಡು ಸೂಚ್ಯವಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.