ವಿಳಾಸ ಮುದ್ರಿಸದಿರುವ ನಿರ್ಧಾರವೂ ರದ್ದು

‘ಕಿತ್ತಳೆ’ ಪಾಸ್‌ಪೋರ್ಟ್‌ ಕೈಬಿಟ್ಟ ಕೇಂದ್ರ

ಹತ್ತನೇ ತರಗತಿ ಉತ್ತೀರ್ಣರಾಗದವರಿಗೆ ಕಿತ್ತಳೆ ಬಣ್ಣದ ಪ್ರತ್ಯೇಕ ಪಾಸ್‌ಪೋರ್ಟ್‌ ವಿತರಿಸುವ ಯೋಚನೆಯನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.

‘ಕಿತ್ತಳೆ’ ಪಾಸ್‌ಪೋರ್ಟ್‌ ಕೈಬಿಟ್ಟ ಕೇಂದ್ರ

ನವದೆಹಲಿ (ಪಿಟಿಐ): ಹತ್ತನೇ ತರಗತಿ ಉತ್ತೀರ್ಣರಾಗದವರಿಗೆ ಕಿತ್ತಳೆ ಬಣ್ಣದ ಪ್ರತ್ಯೇಕ ಪಾಸ್‌ಪೋರ್ಟ್‌ ವಿತರಿಸುವ ಯೋಚನೆಯನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.

ಪಾಸ್‌ಪೋರ್ಟ್‌ನ ಕೊನೆಯ ಪುಟದಲ್ಲಿ ವಿಳಾಸ ಹಾಗೂ ಇನ್ನಿತರ ಮಾಹಿತಿ ಮುದ್ರಿಸದಿರುವ ನಿರ್ಧಾರದಿಂದಲೂ ಹಿಂದೆ ಸರಿದಿದೆ.

ಸದ್ಯ ಚಾಲ್ತಿಯಲ್ಲಿರುವಂತೆ ಕೊನೆಯ ಪುಟದಲ್ಲಿ ವಿಳಾಸ ಹಾಗೂ ಇನ್ನಿತರ ಮಾಹಿತಿ ಮುದ್ರಿಸುವ ಪದ್ಧತಿ ಮುಂದುವರಿಸುವುದಾಗಿ ವಿದೇಶಾಂಗ ಸಚಿವಾಲಯ ಮಂಗಳವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಸ್‌ಪೋರ್ಟ್‌ನ ಕೊನೆಯ ಪುಟದಲ್ಲಿ ತಂದೆ, ತಾಯಿ, ಸಂಗಾತಿಯ ಹೆಸರು ಹಾಗೂ ವಿಳಾಸ ಮುದ್ರಿಸಲಾಗುತ್ತಿದ್ದು, ಇದನ್ನು ವಿಳಾಸ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತಿದೆ.

10ನೇ ತರಗತಿ ಉತ್ತೀರ್ಣರಾಗದವರಿಗೆ ಕಿತ್ತಳೆ ಬಣ್ಣದ ಪಾಸ್‌ಪೋರ್ಟ್ ನೀಡಲು ಕೇಂದ್ರ ಚಿಂತನೆ ನಡೆಸಿತ್ತು. ವಿದೇಶಗಳಲ್ಲಿ ಭಾರತೀಯ ಕಾರ್ಮಿಕರ ಶೋಷಣೆ ತಪ್ಪಿಸುವುದು ಇದರ ಉದ್ದೇಶವಾಗಿತ್ತು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಹಲವರು ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪ ಎತ್ತಿದ್ದರು. ಪ್ರತ್ಯೇಕ ಕಿತ್ತಳೆ ಬಣ್ಣದ ಪಾಸ್‌ಪೋರ್ಟ್ ಬಡವರು ಮತ್ತು ಅನಕ್ಷರಸ್ಥ ಕಾರ್ಮಿಕರ ತಾರತಮ್ಯಕ್ಕೆ ದಾರಿ ಮಾಡಿಕೊಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ವಿದೇಶಾಂಗ ಸಚಿವಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡ ಮೂವರು ಸದಸ್ಯರ ಸಮಿತಿ, ಪಾಸ್‌ಪೋರ್ಟ್‌ ಕೊನೆಯ ಪುಟದಲ್ಲಿ ತಂದೆಯ ಹೆಸರು ನಮೂದಿಸುವ ಅಗತ್ಯವಿಲ್ಲ ಎಂದು ವರದಿ ನೀಡಿತ್ತು.

ಈ ವರದಿ ಆಧರಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್‌ಪೋರ್ಟ್ ಕೊನೆಯ ಪುಟದಲ್ಲಿ ವಿಳಾಸ ಮುದ್ರಿಸುವ ಪರಿಪಾಠ ಕೈಬಿಡಲು ಮುಂದಾಗಿತ್ತು. ಆದರೆ, ಹೆಚ್ಚುತ್ತಿರುವ ವಿರೋಧಕ್ಕೆ ಮಣಿದ ಸರ್ಕಾರ ತನ್ನ ಈ ಎರಡೂ ನಿರ್ಧಾರಗಳನ್ನು ಕೈಬಿಟ್ಟಿದೆ.

ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸದ್ಯ ಮೂರು ಬಣ್ಣಗಳಲ್ಲಿ ಪಾಸ್‌ಪೋರ್ಟ್ ವಿತರಿಸುತ್ತಿದೆ. ಅಧಿಕಾರಿಗಳಿಗೆ ಬಿಳಿ, ರಾಜತಾಂತ್ರಿಕರಿಗೆ ಕೆಂಪು ಮತ್ತು ಇತರರಿಗೆ ನೀಲಿ ಬಣ್ಣದ ಪಾಸ್‌ಪೋರ್ಟ್ ವಿತರಿಸುತ್ತಿದೆ.

Comments
ಈ ವಿಭಾಗದಿಂದ ಇನ್ನಷ್ಟು
‘ಸುಪ್ರೀಂ’ ತೀರ್ಪು ನಿರಾಸೆ ತಂದಿದೆ: ಪಳನಿಸ್ವಾಮಿ

ಕಾವೇರಿ ನೀರು ಹಂಚಿಕೆ
‘ಸುಪ್ರೀಂ’ ತೀರ್ಪು ನಿರಾಸೆ ತಂದಿದೆ: ಪಳನಿಸ್ವಾಮಿ

18 Feb, 2018
₹10 ಮುಖಬೆಲೆಯ ಪ್ಲಾಸ್ಟಿಕ್‌ ನೋಟು ಶೀಘ್ರ ಚಲಾವಣೆಗೆ

ಸಿದ್ಧತೆಗೆ ಆರ್‌ಬಿಐ ಸೂಚನೆ
₹10 ಮುಖಬೆಲೆಯ ಪ್ಲಾಸ್ಟಿಕ್‌ ನೋಟು ಶೀಘ್ರ ಚಲಾವಣೆಗೆ

18 Feb, 2018
ಚಾಬಹಾರ್ ಬಂದರು ಭಾರತಕ್ಕೆ ಹಸ್ತಾಂತರ

9 ಒಪ್ಪಂದಗಳಿಗೆ ಭಾರತ–ಇರಾನ್ ಸಹಿ
ಚಾಬಹಾರ್ ಬಂದರು ಭಾರತಕ್ಕೆ ಹಸ್ತಾಂತರ

18 Feb, 2018
ಮೂವರು ಸಿಬಿಐ ಬಲೆಗೆ

ಪಿಎನ್‌ಬಿ ವಂಚನೆ ಪ್ರಕರಣ
ಮೂವರು ಸಿಬಿಐ ಬಲೆಗೆ

18 Feb, 2018
ಲಿಂಗಾನುಪಾತ ಕುಸಿತ: ಕರ್ನಾಟಕದಲ್ಲೂ ಹೆಣ್ಣುಮಕ್ಕಳ ಸಂಖ್ಯೆ ಇಳಿಮುಖ

ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆ
ಲಿಂಗಾನುಪಾತ ಕುಸಿತ: ಕರ್ನಾಟಕದಲ್ಲೂ ಹೆಣ್ಣುಮಕ್ಕಳ ಸಂಖ್ಯೆ ಇಳಿಮುಖ

18 Feb, 2018