ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಸ್‌ ಠೇವಣಿ: ಭಾರತ 73ನೇ ಸ್ಥಾನಕ್ಕೆ ಏರಿಕೆ

Last Updated 3 ಜುಲೈ 2018, 19:47 IST
ಅಕ್ಷರ ಗಾತ್ರ

ಜ್ಯೂರಿಚ್‌/ನವದೆಹಲಿ: ಸ್ವಿಟ್ಜರ್‌ಲೆಂಡ್‌ನ ಬ್ಯಾಂಕುಗಳಲ್ಲಿ (ಸ್ವಿಸ್‌ ಬ್ಯಾಂಕ್‌) ಠೇವಣಿ ಇರಿಸಿರುವ ದೇಶಗಳ ಪಟ್ಟಿಯಲ್ಲಿ ಭಾರತ 73ನೇ ಸ್ಥಾನದಲ್ಲಿದೆ. ಬ್ರಿಟನ್‌ ಮೊದಲನೇ ಸ್ಥಾನದಲ್ಲಿಯೇ ಮುಂದುವರಿದಿದೆ.

88:2016ರಲ್ಲಿ ಭಾರತ ಹೊಂದಿದ್ದ ಸ್ಥಾನ

₹7,000 ಕೋಟಿ:ಭಾರತದ ಜನರು ಇರಿಸಿರುವ ಮೊತ್ತ

50%:2017ರಲ್ಲಿ ಭಾರತೀಯರ ಠೇವಣಿಯಲ್ಲಿ ಆಗಿರುವ ಏರಿಕೆ ಪ್ರಮಾಣ

0.07%:ಸ್ವಿಸ್‌ ಬ್ಯಾಂಕುಗಳಲ್ಲಿನ ಠೇವಣಿಯಲ್ಲಿ ಭಾರತೀಯರು ಇರಿಸಿರುವ ಹಣದ ಪ್ರಮಾಣ (2017)

0.04:2016ರಲ್ಲಿ ಇದ್ದ ಪ್ರಮಾಣ

75:2015ರಲ್ಲಿದ್ದ ಸ್ಥಾನ

61:2014ರಲ್ಲಿದ್ದ ಸ್ಥಾನ

2007ರವರೆಗೆ ಮೊದಲ 50 ದೇಶಗಳಲ್ಲಿ ಭಾರತವೂ ಇತ್ತು

37:2004ರಲ್ಲಿ ಭಾರತ ಹೊಂದಿದ್ದ ಸ್ಥಾನ

ಮೊದಲ ಹತ್ತು ಸ್ಥಾನದಲ್ಲಿರುವ ರಾಷ್ಟ್ರಗಳು

ಬ್ರಿಟನ್‌,ಅಮೆರಿಕ,ವೆಸ್ಟ್‌ ಇಂಡೀಸ್‌, ಫ್ರಾನ್ಸ್‌, ಹಾಂಕಾಂಗ್‌, ಬಹಮಾಸ್‌, ಜರ್ಮನಿ, ಗುರೆಂಜಿ, ಲಕ್ಸೆಂಬರ್ಗ್‌, ಕೇಮನ್‌ ಐಲೆಂಡ್ಸ್‌

72ನೇ ಸ್ಥಾನ: ಪಾಕಿಸ್ತಾನ

20ನೇ ಸ್ಥಾನ: ಚೀನಾ

**

ಕಪ್ಪುಹಣದ ಮಾಹಿತಿ ಇಲ್ಲ

ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌ (ಎಸ್‌ಎನ್‌ಬಿ) ಪ್ರತಿ ವರ್ಷ ಠೇವಣಿಯ ಮಾಹಿತಿ ಬಹಿರಂಗಪಡಿಸುತ್ತದೆ

ಎಸ್‌ಎನ್‌ಬಿ ನೀಡಿರುವ ಮಾಹಿತಿಯು ಅಲ್ಲಿನ ಬ್ಯಾಂಕುಗಳಲ್ಲಿ ಇರುವ ಠೇವಣಿಯ ಮೊತ್ತ

ಇದರಲ್ಲಿ ಕಪ್ಪುಹಣದ ಪ್ರಮಾಣ ಎಷ್ಟು ಎಂಬ ಮಾಹಿತಿ ಇಲ್ಲ

ಅನಿವಾಸಿ ಭಾರತೀಯರು, ಬೇರೆ ದೇಶಗಳ ಮೂಲಕ ಭಾರತೀಯರು ಇರಿಸಿರುವ ಠೇವಣಿಯ ಮೊತ್ತ ಇದರಲ್ಲಿ ಸೇರಿಲ್ಲ

ಗುಟ್ಟು ರಟ್ಟಾಗಲಿದೆ

ಸ್ವಿಸ್‌ ಬ್ಯಾಂಕುಗಳಲ್ಲಿನ ಠೇವಣಿಯ ಮಾಹಿತಿಯನ್ನು ಬಹಿರಂಗಪಡಿಸುವ ಪದ್ಧತಿ ಇರಲಿಲ್ಲ. ಆದರೆ, ಇತ್ತೀಚೆಗೆ ಸ್ವಿಟ್ಜರ್‌ಲೆಂಡ್‌ ಸರ್ಕಾರವು ಭಾರತ ಸೇರಿ ವಿವಿಧ ದೇಶಗಳ ಜತೆಗೆ ಮಾಹಿತಿ ವಿನಿಮಯ ಒಪ್ಪಂದ ಮಾಡಿಕೊಂಡಿದೆ. ಹಾಗಾಗಿ ಇನ್ನು ಮುಂದೆ ಸ್ವಿಸ್‌ ಬ್ಯಾಂಕುಗಳಲ್ಲಿನ ಠೇವಣಿಯ ಗುಟ್ಟು ರಟ್ಟಾಗಲಿದೆ. ಒಪ್ಪಂದ ಪ್ರಕಾರ, ಮುಂದಿನ ವರ್ಷದಿಂದ ಠೇವಣಿಗಳ ಮಾಹಿತಿ ಭಾರತ ಸರ್ಕಾರಕ್ಕೆ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT