ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಹೆಯೊಳಗೆ ಸಿಲುಕಿದ ಹುಬ್ಬಳ್ಳಿಯ 53 ಯಾತ್ರಿಗಳು

Last Updated 5 ಜುಲೈ 2018, 20:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಮರನಾಥ ಯಾತ್ರೆಗಾಗಿ ಹುಬ್ಬಳ್ಳಿಯಿಂದ ತೆರಳಿದ್ದ 53 ಮಂದಿ, ಮೂರು ದಿನಗಳಿಂದ ಅಲ್ಲಿನ ಗುಹೆ ಒಂದರಲ್ಲಿ ಸಿಲುಕಿದ್ದಾರೆ. ಈ ಕುರಿತು, ಅಲ್ಲಿನ ಬೇಸ್‌ ಕ್ಯಾಂಪಿನಲ್ಲಿ ಆಶ್ರಯ ಪಡೆದಿರುವ ಹುಬ್ಬಳ್ಳಿಯ ನವನಗರದ ರಾಘವೇಂದ್ರ ಶಿರಹಟ್ಟಿ ಎಂಬುವವರು ‘ಪ್ರಜಾವಾಣಿ’ ತಿಳಿಸಿದರು.

‘ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ದಾವಣಗೆರೆ, ಲಕ್ಷ್ಮೇಶ್ವರ, ಗದಗ, ಸೇರಿ ಈ ಭಾಗದ ಒಟ್ಟು 115 ಮಂದಿ ಹುಬ್ಬಳ್ಳಿಯ ಸುರಕ್ಷಾ ಟ್ರಾವೆಲ್ಸ್‌ನ ಮೂರು ಬಸ್ಸುಗಳಲ್ಲಿ ಬಂದಿದ್ದೆವು. ಈ ಪೈಕಿ ದರ್ಶನಕ್ಕೆ ತೆರಳಿದ್ದ ಮೊದಲು ಗುಂಪಿನ 56 ಮಂದಿ ಅಮರನಾಥನ ದರ್ಶನ ಮುಗಿಸಿ, ಸುರಕ್ಷಿತವಾಗಿ ಹೊರ ಬಂದಿದ್ದೇವೆ.

ಇನ್ನುಳಿದ 59 ಮಂದಿ ಹೋಗಿದ್ದಾಗ ಭಾರಿ ಮಳೆ ಸುರಿದಿದ್ದರಿಂದ ಗುಡ್ಡ ಕುಸಿದು ಗುಹೆಯೊಳಗೆ ಸಿಲುಕಿದ್ದಾರೆ. ಈ ಪೈಕಿ 20 ಮಹಿಳಾ ಯಾತ್ರಿಕರೂ ಇದ್ದಾರೆ’ ಎಂದಿದ್ದಾರೆ.

**

ಕೇಂದ್ರ ಎಚ್ಚರಿಕೆ

ನವದೆಹಲಿ(ಪಿಟಿಐ): ನೇಪಾಳದ ಮೂಲಕ ಮಾನಸ ಸರೋವರ ಯಾತ್ರೆಗೆ ಹೋಗಲು ಯೋಚಿಸುತ್ತಿರುವವರಿಗೆ ವಿದೇಶಾಂಗ ಸಚಿವಾಲಯವು ಮುನ್ನೆಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT