ಮೈಸೂರು

ಮಹಿಳಾ ಚಿಂತಕಿ ವಿಜಯಾ ದಬ್ಬೆ ಹೃದಯಾಘಾತದಿಂದ ನಿಧನ

ಮಹಿಳಾ ಚಿಂತಕಿ, ಲೇಖಕಿ ವಿಜಯಾ ದಬ್ಬೆ (66) ಹೃದಯಾಘಾತದಿಂದ ಶುಕ್ರವಾರ ಸಂಜೆ ವಿಜಯನಗರದ ಮೊದಲನೇ ಹಂತದ ಮನೆಯಲ್ಲಿ ನಿಧನರಾದರು.

ವಿಜಯಾ ದಬ್ಬೆ

ಮೈಸೂರು: ಮಹಿಳಾ ಚಿಂತಕಿ, ಲೇಖಕಿ ವಿಜಯಾ ದಬ್ಬೆ (66) ಹೃದಯಾಘಾತದಿಂದ ಶುಕ್ರವಾರ ಸಂಜೆ ವಿಜಯನಗರದ ಮನೆಯಲ್ಲಿ ನಿಧನರಾದರು.

ಹಾಸನ ಜಿಲ್ಲೆಯ ಬೇಲೂರು ಸಮೀಪದ ದಬ್ಬೆ ಗ್ರಾಮದ ಡಿ.ವಿಜಯಾ ಅವರು ವಿಜಯಾ ದಬ್ಬೆ ಎಂದೇ ಖ್ಯಾತರಾಗಿದ್ದರು. ಮೈಸೂರು ವಿ.ವಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕಿಯಾಗಿದ್ದರು.

ಕವನ ಸಂಕಲನ, ಪ್ರವಾಸ ಕಥನ, ವಿಮರ್ಶೆ ಹಾಗೂ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ‘ಇರುತ್ತವೆ’ ‘ನೀರು ಲೋಹದ ಚಿಂತೆ’ ಪ್ರಮುಖ ಕವನ ಸಂಕಲನಗಳು. ‘ನಾರಿ ದಾರಿ ದಿಗಂತ’ ‘ಮಹಿಳಾ ಸಾಹಿತ್ಯ ಸಮಾಜ’ ಪ್ರಮುಖ ವಿಮರ್ಶಾ ಕೃತಿಗಳು. ‘ಅತ್ತಿಮಬ್ಬೆ ಪ್ರಶಸ್ತಿ’, ‘ಅನುಪಮಾ ಪ್ರಶಸ್ತಿ’ ಹಾಗೂ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಪುರಸ್ಕೃತರು.ಮಹಿಳಾ ಚಳವಳಿ ಕಟ್ಟಲು ಅವಿರತವಾಗಿ ಶ್ರಮಿಸಿದ್ದರು.

ಎರಡು ದಶಕಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಲೆಗೆ ಬಿದ್ದ ಬಲವಾದ ಪೆಟ್ಟಿನಿಂದ ನೆನಪಿನ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. 6 ಸಹೋದರಿಯರು, ಇಬ್ಬರು ಸಹೋದರರು ಇದ್ದಾರೆ. ಶನಿವಾರ ಅಂತ್ಯಕ್ರಿಯೆ ನೆರವೇರಲಿದೆ. ಆದರೆ ಸ್ಥಳ ನಿಗದಿಯಾಗಿಲ್ಲ.
ಕುಟುಂಬದವರ ಸಂಪರ್ಕ ಸಂಖ್ಯೆ 9964719722.

Comments
ಈ ವಿಭಾಗದಿಂದ ಇನ್ನಷ್ಟು
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವೀರಶೈವ ಮಹಾಸಭಾ ವಿರೋಧ

ಬೆಂಗಳೂರು
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವೀರಶೈವ ಮಹಾಸಭಾ ವಿರೋಧ

23 Mar, 2018
ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ: ಸರ್ಕಾರದಿಂದ ಅಧಿಸೂಚನೆ

ಬಸವತತ್ವ ಒಪ್ಪುವ ವೀರಶೈವರಿಗೂ ಅನ್ವಯ
ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ: ಸರ್ಕಾರದಿಂದ ಅಧಿಸೂಚನೆ

23 Mar, 2018
ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಬಂಧಿತರ ಸಂಖ್ಯೆ 12ಕ್ಕೆ ಏರಿಕೆ

ಕಲಬುರ್ಗಿ
ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಬಂಧಿತರ ಸಂಖ್ಯೆ 12ಕ್ಕೆ ಏರಿಕೆ

23 Mar, 2018
ಮೈಸೂರು: ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ

ಮೈಸೂರು
ಮೈಸೂರು: ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ

23 Mar, 2018
‘ಪ್ರಧಾನಿ ಮೋದಿಯವರ ಕಳೆದುಹೋದ ಅಂಕಪಟ್ಟಿ ಸಿಕ್ಕಿತು!’ ರಮ್ಯಾ ಟ್ವೀಟ್

ಪ್ರಧಾನಿಗೆ ‘ಡಿ’ ಶ್ರೇಣಿ
‘ಪ್ರಧಾನಿ ಮೋದಿಯವರ ಕಳೆದುಹೋದ ಅಂಕಪಟ್ಟಿ ಸಿಕ್ಕಿತು!’ ರಮ್ಯಾ ಟ್ವೀಟ್

23 Mar, 2018