ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕುವ ಛಲದಲಿ

Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಇಲಿಗಳು ಇದ್ದವು ಹಡಗಿನ ಒಳಗಡೆ,

ಹಡಗು ಮುಳುಗುತಿತ್ತು;

ಇಲಿಗಳ ಸಂಕಟ, ತಳಮಳ, ಕಂಟಕ

ಕಡಲಿಗೇನು ಗೊತ್ತು!

'ಕಡಲಿಗೆ ಹಾರಿ ಈಜುವುದೊಳಿತು'

ಹೇಳಿತು ಇಲಿಯೊಂದು;

'ಈಜಲು ತಿಳಿಯದು, ಮಾಡುವುದೇನು?'

ಕೇಳಿತು ಮತ್ತೊಂದು.

'ಬದುಕುವ ಯತ್ನವ ಮಾಡಿಯೆ ಸಿದ್ಧ'

ದೊಡ್ಡಿಲಿ ಕಡಲಿಗೆ ಧುಮುಕಿತ್ತು;

ಅಪ್ಪಿಲಿ ಅಮ್ಮಿಲಿ ಅಣ್ಣಿಲಿ ಸಣ್ಣಿಲಿ-

ಅರಿತವು ಒದಗಿದ ಆಪತ್ತು.

ಅಣ್ಣಿಲಿ ಬಾಲವ ಸಣ್ಣಿಲಿ ಹಿಡಿಯಿತು;

ಅಕ್ಕಿಲಿ ಬಾಲವ ತಮ್ಮಿಲಿ ಹಿಡಿಯಿತು;

ಅಪ್ಪಿಲಿ ಬಾಲವ ಅಮ್ಮಿಲಿ ಹಿಡಿಯಿತು;

ಬಾಲವೆ ಬಳ್ಳಿಯ ಹಾಗಿತ್ತು;

ಈಜುವ ಸಾಹಸ ನಡೆದಿತ್ತು.

ಉಕ್ಕುವ ಕಡಲಿನ ತೆರೆಗಳ ಮೇಲೆ

ಸವಾರಿ ಮಾಡಿತು ಇಲಿಸಾಲು;

ಬದುಕುವ ಛಲದಲಿ ಬಾಲವು ಸೇರಿ

ಜಯದಲಿ ಪಡೆಯಿತು ಸಮಪಾಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT