ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿನಾಡಿನಲ್ಲಿ ಮಳೆ: ಮನೆ ಗೋಡೆಕುಸಿತ, ಧರೆಗುರುಳಿದ ವಿದ್ಯುತ್‌ ಕಂಬ

ಕೋಡಿ ಬಿದ್ದ ಹಿರೇಕೊಳಲೆ ಕೆರೆ
Last Updated 12 ಜುಲೈ 2018, 14:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಗುರುವಾರ ವಿವಿಧೆಡೆ ಹದ ಮಳೆಯಾಗಿದೆ. ತಾಲ್ಲೂಕಿನ ಹಿರೇಕೊಳಲೆ ಕೆರೆ ಮತ್ತು ಹಿರೇಮಗಳೂರು ಕೆರೆ ಕೊಡಿ ಬಿದ್ದಿವೆ.

ನಾಲ್ಕೈದು ದಿನಗಳಿಂದ ಎಡಬಿಡದೆ ಮಳೆಯಾಗುತ್ತಿದೆ. ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ತುಂತುರು ಮಳೆಯಾಯಿತು, ಸಂಜೆ ಕೊಂಚ ಬಿರುಸಾಯಿತು. ರಾತ್ರಿಯೂ ಮಳೆ ಮುಂದುವರಿದಿತ್ತು.

ತರೀಕೆರೆ ತಾಲ್ಲೂಕಿನ ಮಾಚೇನಹಳ್ಳಿಯಲ್ಲಿ ಪರಮೇಶ್ವರಪ್ಪ ಅವರ ಮನೆ ಗೋಡೆ ಕುಸಿದಿದೆ.

ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಕೆಲವು ವಿದ್ಯುತ್‌ ಕಂಬಗಳು ಧರೆಗುರುಗಳಿವೆ. ಮಳೆಯಿಂದಾಗಿ ಗಿರಿಶ್ರೇಣಿ ಮಾರ್ಗದ ಕೆಲವು ಕಡೆಗಳಲ್ಲಿ ಗುಡ್ಡದ ಮಣ್ಣು ರಸ್ತೆ ಬದಿಗೆ ಕುಸಿದಿದೆ.

ಗಿರಿಶ್ರೇಣಿಯ ತಪ್ಪಲಿನಲ್ಲಿರುವ ನಗರದ ಕೆಲಭಾಗಗಳಿಗೆ ನೀರು ಪೂರೈಸುವ ಹಿರೇಕೊಳಲೆ ಕೆರೆಯು ಕೋಡಿ ಬಿದ್ದಿದೆ. ಕೆರೆ ತುಂಬಿ ಕೋಡಿಯಲ್ಲಿ ನೀರು ಹರಿಯುತ್ತಿರುವುದನ್ನು ನೋಡಲು ಕೆಲವರು ಕೆರೆ ಪ್ರದೇಶಕ್ಕೆ ಬಂದಿದ್ದರು.

ತಾಲ್ಲೂಕಿನಲ್ಲಿ ಎರಡು ಕೆರೆಗಳು ತುಂಬಿ, ಕೋಡಿಯಲ್ಲಿ ನೀರು ಹರಿಯುತ್ತಿದೆ. ಮಳೆಯಿಂದಾಗಿ ಕೆರೆಕಟ್ಟೆಗಳಲ್ಲಿ ಸ್ವಲ್ಪ ನೀರಾಗಿದೆ ಎಂದು ಸಣ್ಣನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ. ಇಂದಾವರದ ಫ್ಯಾಕ್ಟರಿ ಬಡಾವಣೆಯಲ್ಲಿ ಫಕೀರ್‌ ಎಂಬುವರ ಮನೆ ಗೋಡೆ ಕುಸಿದಿದೆ ಎಂದು ಕಸಬಾ ರಾಜಸ್ವ ನಿರೀಕ್ಷಕ ತಿಳಿಸಿದ್ದಾರೆ

‘ಗಿರಿಶ್ರೇಣಿಯಲ್ಲಿ 12 ವಿದ್ಯುತ್‌ ಕಂಬಗಳು, ಮಲ್ಲಂದೂರು ಭಾಗದಲ್ಲಿ 10 ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಯಾವುದೇ ಹಾನಿ ಸಂಭವಿಸಿಲ್ಲ’ ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಕುಮಾರ್‌ ತಿಳಿಸಿದ್ದಾರೆ.

ಕಿಗ್ಗಾದಲ್ಲಿ 190 ಮಿ.ಮೀ, ಕೆರೆಕಟ್ಟೆ– 150, ಶೃಂಗೇರಿ– 146, ಕೊಪ್ಪ–107, ಹರಿಹರಪುರ– 110, ಕಮ್ಮರಡಿ–130, ಜಯಪುರ–101, ಎನ್.ಆರ್‌.ಪುರ– 45, ಬಾಳೆಹೊನ್ನೂರು– 59, ಮೇಗರಮಕ್ಕಿ– 70, ಕಳಸ–104, ಕೊಟ್ಟಿಗೆಹಾರ– 118, ಗೋಣಿಬೀಡು– 85, ಮೂಡಿಗೆರೆ– 84, ತರೀಕೆರೆ– 30, ಲಕ್ಕವಳ್ಳಿ–36, ರಂಗೇನಹಳ್ಳಿ– 40, ಶಿವನಿ–18, ಚಿಕ್ಕಮಗಳೂರು– 13, ವಸ್ತಾರೆ– 21, ಅತ್ತಿಗುಂಡಿ– 69, ಬ್ಯಾರವಳ್ಳಿ–64, ಸಂಗಮೇಶ್ವರ ಪೇಟೆ– 45, ಪಂಚನಹಳ್ಳಿ–23, ಬೀರೂರು–15, ಕಡೂರು– 6.5 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT