ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವೈಕಲ್ಯಕ್ಕೆ ತುತ್ತಾದ ಚಿಲ್ಲಾಳ

Last Updated 12 ಜುಲೈ 2018, 16:58 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: 66 ವರ್ಷಗಳ ತನಕ ಉಗುರು ಕತ್ತರಿಸದೇ ಉಳಿಸಿಕೊಂಡು ಗಿನ್ನೆಸ್‌ ದಾಖಲೆ ಬರೆದಿದ್ದ ಪುಣೆ ಮೂಲದ ಶ್ರೀಧರ್‌ ಚಿಲ್ಲಾಳ ಅವರ ಎಡಗೈ ಶಾಶ್ವತವಾಗಿ ಬಲ ಕಳೆದುಕೊಂಡಿದೆ. ಬುಧವಾರ ಅವರ ಎಡಗೈ ಉಗುರುಗಳನ್ನು ಕತ್ತರಿಸಲಾಗಿತ್ತು.

ಅವರ ಬಯಕೆಯಂತೆ ಅಮೆರಿಕದ ‘ದಿ ರಿಪ್ಲೇಸ್‌ ಬಿಲೀವ್‌ ಇಟ್‌ ಆರ್‌ ನಾಟ್‌’ ವಸ್ತುಸಂಗ್ರಹಾಲಯದಲ್ಲಿ ಕತ್ತರಿಸಿದ ಉಗುರುಗಳನ್ನು ಇಡಲಾಗಿದೆ. ಅತಿ ಉದ್ದದ ಉಗುರು 31 ಅಡಿ ಇದೆ. ಮೂರು ಮಹಡಿಯ ಕಟ್ಟಡದಲ್ಲಿ ಇದನ್ನು ಇರಿಸಲಾಗಿದೆ.

ಎಡಗೈನ ಉಗುರಿನ ಭಾರಕ್ಕೆ ಕೈ ಸಂಪೂರ್ಣವಾಗಿ ಬಾಗಿದ ಸ್ಥಿತಿಯಲ್ಲಿದೆ. ಕೈ ಪೂರ್ತಿಯಾಗಿ ಬಿಡಿಸಲು ಸಾಧ್ಯವಾಗುತ್ತಿಲ್ಲ ಎಂದು ರಿಪ್ಲೇ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT