ಕಲಬುರ್ಗಿ

ಪ್ರತ್ಯೇಕ ಅಪಘಾತ ಆರು ಸಾವು

ಜೇವರ್ಗಿ ಪಟ್ಟಣದಲ್ಲಿ ಹಾಗೂ ನಗರ ಹೊರವಲಯದ ನಂದೂರ– ಶಹಾಬಾದ ರಸ್ತೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಆರು ಜನರು ಮೃತಪಟ್ಟಿದ್ದಾರೆ.

ಕಲಬುರ್ಗಿ: ಜೇವರ್ಗಿ ಪಟ್ಟಣದಲ್ಲಿ ಹಾಗೂ ನಗರ ಹೊರವಲಯದ ನಂದೂರ– ಶಹಾಬಾದ ರಸ್ತೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಆರು ಜನರು ಮೃತಪಟ್ಟಿದ್ದಾರೆ.

ಜೇವರ್ಗಿ ಪಟ್ಟಣದ ಎನ್‌ಇಕೆಆರ್‌ಟಿಸಿ ಡಿಪೊ ಬಳಿ ನಿಂತಿದ್ದವರಿಗೆ ಟಿಪ್ಪರ್ ಡಿಕ್ಕಿ ಹೊಡೆದು ನಾಲ್ಕು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಕ್ಷ್ಮಿ ಮೇತ್ರಿ (50), ದಶವ್ವ (45), ಇವರ ಮಗಳು ಸುನಿತಾ (2) ಮತ್ತು ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದು, ಆತನ ವಿವರ ತಿಳಿದು ಬಂದಿಲ್ಲ. ದುಗ್ಗವ್ವ (45) ಗಂಭೀರವಾಗಿ ಗಾಯಗೊಂಡಿದ್ದು ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ತೆಲಂಗಾದವರು.

ಶಹಾಬಾದ ಬಳಿ ಕ್ಯಾಂಟರ್ ಡಿಕ್ಕಿ ಹೊಡೆದು ಬೈಕ್ ಮೇಲೆ ತೆರಳುತ್ತಿದ್ದ ಸಿದ್ಧಪ್ಪ ತಾಯಪ್ಪ (26), ಅಂಬ್ರೀಶ ಮಲ್ಲಪ್ಪ (27) ಸ್ಥಳದಲ್ಲೇ ಮೃತಪಟ್ಟಿ
ದ್ದಾರೆ. ಇವರಿಬ್ಬರೂ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ನಗರದಲ್ಲಿ ಗಾಳಿ–ಮಳೆ, ನೆಲಕ್ಕುರುಳಿದ ಮರಗಳು

ಸಂಚಾರ ವ್ಯತ್ಯಯ ಇಲ್ಲ
ನಗರದಲ್ಲಿ ಗಾಳಿ–ಮಳೆ, ನೆಲಕ್ಕುರುಳಿದ ಮರಗಳು

27 Apr, 2018

ಬೆಂಗಳೂರು
ಆರ್‌ಟಿಇ ಪ್ರವೇಶಾತಿ ಗೊಂದಲ ದಾಖಲಾತಿ ಪರಿಶೀಲಿಸುವಂತೆ ಆದೇಶ

ಆರ್‌ಟಿಇ ಅಡಿ ತಕ್ಷಣ ದಾಖಲಾತಿ ಮಾಡಿಕೊಂಡು ಶಾಲೆಗಳು ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಅಪ್‌ಡೇಟ್‌ ಮಾಡಬೇಕು. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನ ಹರಿಸಿ ಯಾವುದೇ ಗೊಂದಲಗಳಾಗದಂತೆ...

27 Apr, 2018
ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ: ಭರವಸೆ

ಬೆಂಗಳೂರು
ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ: ಭರವಸೆ

27 Apr, 2018
‘ಹೆಣ್ಣುಮಕ್ಕಳಿಗೆ ಸುರಕ್ಷಿತ ಜಾಗ ಎಲ್ಲಿದೆ’

ಬೆಂಗಳೂರು
‘ಹೆಣ್ಣುಮಕ್ಕಳಿಗೆ ಸುರಕ್ಷಿತ ಜಾಗ ಎಲ್ಲಿದೆ’

27 Apr, 2018
ಮಾನಸಿಕ ಅಸ್ವಸ್ಥರ ಕೇಂದ್ರಕ್ಕೆ ‘ಅನಾರೋಗ್ಯ’

ಸೌಲಭ್ಯಗಳಿಂದ ವಂಚಿತ ಸಿಬ್ಬಂದಿ
ಮಾನಸಿಕ ಅಸ್ವಸ್ಥರ ಕೇಂದ್ರಕ್ಕೆ ‘ಅನಾರೋಗ್ಯ’

27 Apr, 2018