, ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಧಾನಿಗೆ ತಿಳಿಸಿದ್ದರೂ ಕ್ರಮ ತೆಗೆದುಕೊಂಡಿಲ್ಲ: ಸಿಬಿಎಸ್‍ಇ ವಿದ್ಯಾರ್ಥಿನಿ | ಪ್ರಜಾವಾಣಿ
ಜಾಹ್ನವಿ ಬೆಹಲ್ ದೂರು

ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಧಾನಿಗೆ ತಿಳಿಸಿದ್ದರೂ ಕ್ರಮ ತೆಗೆದುಕೊಂಡಿಲ್ಲ: ಸಿಬಿಎಸ್‍ಇ ವಿದ್ಯಾರ್ಥಿನಿ

ಸಿಬಿಎಸ್ಇ 12ನೇ ತರಗತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾರ್ಚ್ 17ರಂದು ಪತ್ರ ಬರೆದು ತಿಳಿಸಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಂಜಾಬ್‍ನ ವಿದ್ಯಾರ್ಥಿನಿ ಜಾಹ್ನವಿ ಬೆಹಲ್ ದೂರಿದ್ದಾರೆ.

ಜಾಹ್ನವಿ ಬೆಹಲ್

ಲುಧಿಯಾನ: ಸಿಬಿಎಸ್ಇ 12ನೇ ತರಗತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾರ್ಚ್ 17ರಂದು ಪತ್ರ ಬರೆದು ತಿಳಿಸಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಂಜಾಬ್‍ನ ವಿದ್ಯಾರ್ಥಿನಿ ಜಾಹ್ನವಿ ಬೆಹಲ್ ದೂರಿದ್ದಾರೆ.
 
ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ನಾನು ಪ್ರಧಾನಿಯವರಿಗೆ ಪತ್ರ ಬರೆದಿದ್ದೆ. ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರನ್ನು ಬಂಧಿಸಬೇಕು ಎಂದು ಜಾಹ್ನವಿ ಹೇಳಿರುವುದಾಗಿ ಎಎನ್‍ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ವಾಟ್ಸ್ ಆ್ಯಪ್ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಜನರ ಬಗ್ಗೆ ನಾವು ಪೊಲೀಸರಿಗೆ ದೂರು ನೀಡಿದರೂ ಅವರು ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಜಾಹ್ನವಿ ಹೇಳಿದ್ದಾರೆ.

12ನೇ ತರಗತಿಯ ಅರ್ಥಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ  ಸೋರಿಕೆ ಆಗಿದ್ದು, ಈ ವಿಷಯದ ಮರು ಪರೀಕ್ಷೆ ಏಪ್ರಿಲ್ 25ರಂದು ನಡೆಯಲಿದೆ.

ಯಾರು ಈ ಜಾಹ್ನವಿ ಬೆಹಲ್?
2016ರಲ್ಲಿ ಜಾಹ್ನವಿ ಬೆಹಲ್ ಎಂಬ 15ರ ಬಾಲಕಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಅವರಿಗೆ ಸವಾಲು ಎಸೆದು ಸುದ್ದಿಯಾಗಿದ್ದರು.

ಕನಯ್ಯಾ ಕುಮಾರ್ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಕ್ಕೆ  ಕನಯ್ಯಾ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹೇಳಿದ್ದು ತಪ್ಪು, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮೋದಿ ಬಗ್ಗೆ ಟೀಕಿಸುವುದಕ್ಕಿಂತ ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ಮಾತನಾಡಬಹುದಿತ್ತು. 
ಪ್ರಧಾನಿಯವರನ್ನು ಹೊಗಳಿದ್ದ ಜಾಹ್ನವಿ, ಕನಯ್ಯಾ ಕುಮಾರ್ ಮೋದಿಯವರನ್ನು ಟೀಕಿಸುವುದಕ್ಕಿಂತ ಅವರಂತೆಯೇ ಕೆಲಸ ಮಾಡಲಿ ಎಂದಿದ್ದರು ಜಾಹ್ನವಿ. 

Comments
ಈ ವಿಭಾಗದಿಂದ ಇನ್ನಷ್ಟು
ಚೀನಾದ ವುಹಾನ್‌ಗೆ ಬಂದಿಳಿದ ಪ್ರಧಾನಿ ಮೋದಿ

ಅನೌಪಚಾರಿಕ ಶೃಂಗಸಭೆ
ಚೀನಾದ ವುಹಾನ್‌ಗೆ ಬಂದಿಳಿದ ಪ್ರಧಾನಿ ಮೋದಿ

27 Apr, 2018
ಸುಪ್ರೀಂ ಶಿಫಾರಸು ವಾಪಸ್‌ ಕಳುಹಿಸಿದ ಕೇಂದ್ರ:  ಜೋಸೆಫ್‌ ಬಡ್ತಿಗೆ ಸರ್ಕಾರದ ಅಡ್ಡಿ

ಕೊಲಿಜಿಯಂ
ಸುಪ್ರೀಂ ಶಿಫಾರಸು ವಾಪಸ್‌ ಕಳುಹಿಸಿದ ಕೇಂದ್ರ: ಜೋಸೆಫ್‌ ಬಡ್ತಿಗೆ ಸರ್ಕಾರದ ಅಡ್ಡಿ

27 Apr, 2018
ಐಡಿಬಿಐಗೆ ₹600 ಕೋಟಿ ಸಾಲ ವಂಚನೆ

38 ಮಂದಿಯ ವಿರುದ್ಧ ಪ್ರಕರಣ
ಐಡಿಬಿಐಗೆ ₹600 ಕೋಟಿ ಸಾಲ ವಂಚನೆ

27 Apr, 2018

ಚೆನ್ನೈ
ಜಯಾ ಜೈವಿಕ ಮಾದರಿ ಇಲ್ಲ: ಅಪೋಲೋ ಆಸ್ಪತ್ರೆ ಹೇಳಿಕೆ

‘ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಯಾವುದೇ ಜೈವಿಕ ಮಾದರಿಗಳು ನಮ್ಮ ಬಳಿ ಇಲ್ಲ’ ಎಂದು ಮದ್ರಾಸ್ ಹೈಕೋರ್ಟ್‌ಗೆ ಅಪೋಲೋ ಆಸ್ಪತ್ರೆ ಗುರುವಾರ...

27 Apr, 2018

ನವದೆಹಲಿ
ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ವಚ್ಛ ಭಾರತ ಅಭಿಯಾನ ಸಹಕಾರಿ

ಆರೋಗ್ಯ ಸಂಬಂಧಿ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ದೇಶದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ‘ಸ್ವಚ್ಛ ಭಾರತ ಅಭಿಯಾನ’ ಸಹಕಾರಿಯಾಗಿದೆ ಎಂದು ಸಚಿವ ಸುರೇಶ್‌ ಪ್ರಭು...

27 Apr, 2018