ಗೋಲ್ಡ್ಕೋಸ್ಟ್: ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಸಂಜಿತಾ ಚಾನು ಅವರು 53 ಕೆ.ಜಿ ಮಹಿಳಾ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ಭಾರತ ಕ್ರೀಡಾಪಟುಗಳು ಗೆದ್ದ ಎರಡನೇ ಚಿನ್ನದ ಪದಕ ಇದಾಗಿದ್ದು, ಮಹಿಳೆಯರ ವಿಭಾಗದ 53 ಕೆ.ಜಿ. ವೇಟ್ಲಿಫ್ಟಿಂಗ್ನಲ್ಲಿ ಸಂಜಿತಾ ಚಾನು ಒಟ್ಟು 192 ಕೆ.ಜಿ. ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದರು.

ಇದೇ ವಿಭಾಗದಲ್ಲಿ 182 ಕೆ.ಜಿ ತೂಕ ಎತ್ತಿದ ಪಪುವಾ ನ್ಯೂಗಿನಿಯಾದ ಲೋಡಿಕಾ ಅವರು ಎರಡನೇ ಸ್ಥಾನ ಪಡೆದರು. ನ್ಯೂಜಿಲೆಂಡ್ನ ರಾಚೆಲ್ ಲೆಬ್ಲಾಂಕ್- ಬಾಝಿನೆಟ್ ಅವರು ಒಟ್ಟು 181 ಕೆ.ಜಿ ತೂಕ ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು.

ಸಂಜಿತಾ ಚಾನು 2014ರಲ್ಲಿ ನಡೆದ ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲೂ 48 ಕೆ. ಜಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದರು.

ಗುರುವಾರ ನಡೆದ ಮಹಿಳೆಯರ ವೇಟ್ಲಿಫ್ಟಿಂಗ್ನ 48 ಕೆ.ಜಿ ವಿಭಾಗದಲ್ಲಿ ಭಾರತದ ಸಾಯಿಕೋಮ್ ಮೀರಾಬಾಯಿ ಚಾನು ಚಿನ್ನ ಪದಕ ಗೆದ್ದಿದ್ದರು. ಜತೆಗೆ ಪುರುಷರ ವೇಟ್ಲಿಫ್ಟಿಂಗ್ನ 56 ಕೆ.ಜಿ ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕುಂದಾಪುರ ಸಮೀಪದ ಜೆಡ್ಡು ಚಿತ್ತೂರಿನ ಗುರುರಾಜ್ ಪೂಜಾರಿ ಬೆಳ್ಳಿ ಪದಕ ಜಯಿಸಿದರು.

ಇದನ್ನೂ ಓದಿ...

* ಕಾಮನ್ವೆಲ್ತ್ ಕ್ರೀಡಾಕೂಟ: ಭಾರತದ ಪರ ಮೊದಲ ಚಿನ್ನ ಗೆದ್ದ ಮೀರಾಬಾಯಿ ಚಾನು

* ಕಾಮನ್ವೆಲ್ತ್ ಕ್ರೀಡಾಕೂಟ: ಭಾರತದ ಪರ ಮೊದಲ ಪದಕ ಗೆದ್ದ ಕನ್ನಡಿಗ ಗುರುರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.