ಪದಕ ತಪ್ಪಿಸಿಕೊಂಡ ಭಾರತದ ಅಥ್ಲೀಟ್‌; ಮಹಿಳೆಯರ ವಿಭಾಗದಲ್ಲಿ ಹಿಮಾ ದಾಸ್ ಫೈನಲ್‌ಗೆ

ದಾಖಲೆ ಉತ್ತಮಪಡಿಸಿಕೊಂಡ ಅನಾಸ್‌

ಭಾರತದ ಮಹಮ್ಮದ್ ಅನಾಸ್‌ ಯಾಹಿಯಾ ಸ್ವಲ್ಪದರಲ್ಲೇ ಕಾಮನ್‌ವೆಲ್ತ್‌ ಕ್ರೀಡಾಕೂಟದ ಪದಕದಿಂದ ವಂಚಿತರಾದರು. ಮಂಗಳವಾರ ನಡೆದ ಪುರುಷರ 400 ಮೀಟರ್ಸ್ ಓಟದಲ್ಲಿ ಅವರು ನಾಲ್ಕನೇ ಸ್ಥಾನ ಗಳಿಸಿದರು.

ಮಹಮ್ಮದ್ ಅನಾಸ್‌ ಫೈನಲ್‌ನಲ್ಲಿ ಗುರಿಯತ್ತ ಓಡಿದ ರೀತಿ ಪಿಟಿಐ ಚಿತ್ರ

ಗೋಲ್ಡ್ ಕೋಸ್ಟ್‌: ಭಾರತದ ಮಹಮ್ಮದ್ ಅನಾಸ್‌ ಯಾಹಿಯಾ ಸ್ವಲ್ಪದರಲ್ಲೇ ಕಾಮನ್‌ವೆಲ್ತ್‌ ಕ್ರೀಡಾಕೂಟದ ಪದಕದಿಂದ ವಂಚಿತರಾದರು. ಮಂಗಳವಾರ ನಡೆದ ಪುರುಷರ 400 ಮೀಟರ್ಸ್ ಓಟದಲ್ಲಿ ಅವರು ನಾಲ್ಕನೇ ಸ್ಥಾನ ಗಳಿಸಿದರು.

ಆದರೆ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಅವರು ಉತ್ತಮಪಡಿಸಿಕೊಂಡರು. ಒಂದು ಸೆಕೆಂಡು ಅಂತರದಲ್ಲಿ ಈ ಸಾಧನೆ ಮಾಡಿದರು.

1958ರಲ್ಲಿ ಮಿಲ್ಕಾ ಸಿಂಗ್ ಚಿನ್ನ ಗೆದ್ದಿದ್ದರು. ಅದರ ನಂತರ ಇದೇ ಮೊದಲ ಬಾರಿ ಭಾರತದ ಅಥ್ಲೀಟ್ ಒಬ್ಬರು ಕಾಮನ್‌ವೆಲ್ತ್ ಕೂಟದ 400 ಮೀಟರ್ಸ್ ಓಟದ ಫೈನಲ್‌ ಪ್ರವೇಶಿಸಿದ್ದರು. ಸೆಮಿಫೈನಲ್‌ನಲ್ಲಿ 45.44 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದ ಅನಾಸ್‌ ಮಂಗಳವಾರ 45.31 ಸೆಕೆಂಡುಗಳಲ್ಲಿ ಓಟ ಪೂರ್ತಿಗೊಳಿಸಿದರು.

ಕಂಚು ಗೆದ್ದ ಜಮೈಕಾದ ಜವೋನ್ ಫ್ರಾನ್ಸಿಸ್ ಅವರಿಗಿಂತ 0.2 ಸೆಕೆಂಡುಗಳಿಂದ ಹಿಂದುಳಿದ ಅವರಿಗೆ ಪದಕ ಒಲಿಯಲಿಲ್ಲ.   ಬೋಟ್ಸ್ವಾನಾದ ಐಸಾಕ್ ಮಕ್ವಾಲ (44.35 ಸೆಕೆಂಡು) ಚಿನ್ನ ಗೆದ್ದರೆ ಅದೇ ದೇಶದ ಬಬಲೋಕಿ ತೆಬೆ ಬೆಳ್ಳಿ ಗೆದ್ದರು.

ಕಳೆದ ಬಾರಿ ದೆಹಲಿಯಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾಂಡ್ ಪ್ರೀ  ಕೂಟದಲ್ಲಿ 45.32 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದ ಅನಾಸ್‌ ದಾಖಲೆ ನಿರ್ಮಿಸಿದ್ದರು.

ಹಿಮಾ ದಾಸ್ ಫೈನಲ್‌ಗೆ‌: ಮಹಿಳೆಯರ 400 ಮೀಟರ್ಸ್ ಓಟದಲ್ಲಿ ಭಾರತದ ಹಿಮಾ ದಾಸ್ ಫೈನಲ್ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ 51.53 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ವೈಯಕ್ತಿಕ ಸಾಧನೆಯನ್ನು ಉತ್ತಮಪಡಿಸಿಕೊಂಡರು.

ಸೆಮಿಫೈನಲ್‌ನಲ್ಲಿ ಜಮೈಕಾದ ಅನಸ್ತೇಸ್ಯಾ ಲಿ ರಾಯ್‌ ಮತ್ತು ಬೊಟ್ಸ್ವಾನದ ಅಮಂಟಲ್ ಮಾಂಟೊ ಮೊದಲ ಎರಡು ಸ್ಥಾನ ಗಳಿಸಿದರು. ಹಿಮಾ ಮೂರನೇಯವರಾಗಿ ಹೊರಹೊಮ್ಮಿದರು. ಫೈನಲ್‌ ಬುಧವಾರ ನಡೆಯಲಿದೆ.

Comments
ಈ ವಿಭಾಗದಿಂದ ಇನ್ನಷ್ಟು
ದೋನಿ ಆಟಕ್ಕೆ ಒಲಿದ ಜಯ: ಎಬಿಡಿ, ಕ್ವಿಂಟನ್ ಆಟ ವ್ಯರ್ಥ

ಬೆಂಗಳೂರು
ದೋನಿ ಆಟಕ್ಕೆ ಒಲಿದ ಜಯ: ಎಬಿಡಿ, ಕ್ವಿಂಟನ್ ಆಟ ವ್ಯರ್ಥ

26 Apr, 2018

ಹರಿಯಾಣ: ಕಡಿಮೆ ಬಹುಮಾನ ಮೊತ್ತಕ್ಕೆ ಆಕ್ಷೇಪ
ಕ್ರೀಡಾಪಟುಗಳ ಸನ್ಮಾನ ಕಾರ್ಯಕ್ರಮ ರದ್ದು

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳ ಸನ್ಮಾನ ಕಾರ್ಯಕ್ರಮವನ್ನು ಹರಿಯಾಣ ಸರ್ಕಾರ ದಿಢೀರ್ ರದ್ದುಗೊಳಿಸಿದೆ. ಬಹುಮಾನ ಮೊತ್ತಕ್ಕೆ ಸಂಬಂಧಿಸಿ ಕೆಲ ಕ್ರೀಡಾಪಟುಗಳು ಕಾರ್ಯಕ್ರಮ...

26 Apr, 2018

ಕ್ರೀಡೆ
ಸ್ಕ್ವಾಷ್‌: ಜೋಷ್ನಾಗೆ ಸೋಲು

ಈಜಿಪ್ತ್‌ನಲ್ಲಿ ನಡೆಯುತ್ತಿರುವ ಎಲ್‌ ಗೌನಾ ಅಂತರರಾಷ್ಟ್ರೀಯ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಭಾರತದ ಜೋಷ್ನಾ ಚಿಣ್ಣಪ್ಪ ಅವರು ಇಂಗ್ಲೆಂಡ್‌ನ ಲೌರಾ ಮಸ್ಸಾರೊ ವಿರುದ್ಧ ಸೋಲು...

26 Apr, 2018

ಮುಂಬೈ
ಏಷ್ಯನ್‌ ಗೇಮ್ಸ್‌ ನನ್ನ ಗುರಿ: ಸತ್ನಾಮ್‌ ಸಿಂಗ್‌

ಜಕಾರ್ತಾದಲ್ಲಿ ನಡೆಯುವ ಏಷ್ಯನ್‌ ಗೇಮ್ಸ್‌ನಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಹೊಂದಿದ್ದೇನೆ ಎಂದು ಇತ್ತಿಚೇಗೆ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಬ್ಯಾಸ್ಕೆಟ್‌ಬಾಲ್‌ ತಂಡವನ್ನು ಪ್ರತಿನಿಧಿಸಿದ್ದ...

26 Apr, 2018

ಕ್ರೀಡೆ
ಬ್ಯಾಡ್ಮಿಂಟನ್‌: ಸೈನಾ, ಶ್ರೀಕಾಂತ್‌ ಮುನ್ನಡೆ

ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸೈನಾ ನೆಹ್ವಾಲ್‌, ಪಿ. ವಿ. ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌ ಶುಭಾರಂಭ ಮಾಡಿದ್ದಾರೆ.

26 Apr, 2018