ಬೆಂಗಳೂರು: ಎಟಿಎಂಗಳಲ್ಲಿ ನಗದು ಕೊರತೆಯಿಂದ ತತ್ತರಿಸಿರುವ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಪರಿಸ್ಥಿತಿ ಸುಧಾರಣೆ ಕಂಡಿಲ್ಲ. ಕೊರತೆ ನಿಭಾಯಿಸುವುದಕ್ಕಾಗಿ ಕಡಿಮೆ ಮುಖಬೆಲೆಯ ನೋಟುಗಳ ಮುದ್ರಣವನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಂದಾಗಿದೆ. ಆದರೆ ಹೊಸದಾಗಿ ಮುದ್ರಣವಾದ ನೋಟು ಗಳು ಎಟಿಎಂ ತಲುಪಲು ಅಂದಾಜು ಒಂದು ತಿಂಗಳು ಬೇಕು ಎಂದು ಮೂಲಗಳು ತಿಳಿಸಿವೆ.

ವಿಧಾನಸಭೆ ಚುನಾವಣೆ ಹೊಸ್ತಿ ಲಲ್ಲೇ ಕರ್ನಾಟಕದಲ್ಲಿ ಸುಮಾರು ಶೇ 40ರಷ್ಟು ಎಟಿಎಂಗಳಲ್ಲಿ ಬುಧ ವಾರವೂ ನೋಟುಗಳು ಇರಲಿಲ್ಲ. ರಾಜ್ಯದಲ್ಲಿ 17,683 ಎಟಿಎಂಗಳಿವೆ. ಆರ್‌ಬಿಐನಿಂದ ಇನ್ನಷ್ಟೇ ನಗದು ಬರ ಬೇಕಿದೆ ಎಂದು ರಾಜ್ಯದ ಹಲವು ಬ್ಯಾಂಕುಗಳ ಮೂಲಗಳು ತಿಳಿಸಿವೆ.

₹70 ಸಾವಿರ ಕೋಟಿ ಕೊರತೆ: ತಿಂಗಳಿಗೆ ಸುಮಾರು ₹70 ಸಾವಿರ ಕೋಟಿಯಷ್ಟು ನಗದು ಕೊರತೆ ಇದೆ ಎಂದು ಎಸ್‌ಬಿಐಯ ಸಂಶೋಧನಾ ವರದಿ ಹೇಳಿದೆ. ಇದು ಎಟಿಎಂಗಳ ಮೂಲಕ ವಿತರಣೆಯಾಗುವ ಮೊತ್ತದ ಮೂರನೇ ಒಂದರಷ್ಟಾಗುತ್ತದೆ.

ಒಟ್ಟು ದೇಶಿ ಉತ್ಪನ್ನದಲ್ಲಿ (ಜಿಡಿಪಿ) ಏರಿಕೆ ಆಗಿರುವುದರಿಂದ 2018ರ ಮಾರ್ಚ್ ಹೊತ್ತಿಗೆ ಜನರು ನಡೆಸಿದ ವಹಿವಾಟಿನ ಮೊತ್ತ ₹19.4 ಲಕ್ಷ ಕೋಟಿಗೆ ಏರಿದೆ. ಆದರೆ, ಲಭ್ಯ ಇರುವ ನೋಟುಗಳ ಮೌಲ್ಯ ₹17.5 ಲಕ್ಷ ಕೋಟಿ ಮಾತ್ರ. ಆದ್ದರಿಂದ ₹1.9 ಲಕ್ಷ ಕೋಟಿಯಷ್ಟು ನೋಟು ಕೊರತೆ ಕಾಣಿಸಿದೆ. ಇದರಲ್ಲಿ ₹1.2 ಲಕ್ಷ ಕೋಟಿ ವಹಿವಾಟು ಡಿಜಿಟಲ್ ರೂಪದಲ್ಲಿ ನಡೆದಿದೆ. ಹಾಗಾಗಿ ವಾಸ್ತವದಲ್ಲಿ, ನೋಟುಗಳ ಕೊರತೆ ಇರುವುದು
₹70 ಸಾವಿರ ಕೋಟಿ ಮಾತ್ರ ಎಂದು ಹೇಳಿದೆ.

ನೋಟು ರದ್ದತಿಯ ಭೂತ ಸರ್ಕಾರವನ್ನು ಮತ್ತೆ ಕಾಡ ತೊಡಗಿದೆ. ದಾಸ್ತಾನು ಇರಿಸುವ ವರಿಗಾಗಿಯೇ ₹2000 ನೋಟು ಮುದ್ರಿಸಲಾಗುತ್ತಿದೆ.
– ಪಿ. ಚಿದಂಬರಂ, ಮಾಜಿ ಹಣಕಾಸು ಸಚಿವ

ಹೊಸ ನೋಟುಗಳು ಯಾವಾಗ ಮುದ್ರಣವಾಗಬಹುದು ಎಂಬು ದನ್ನು ಹೇಳಲಾಗದು. ಅದು ಮುದ್ರಣ ಯಂತ್ರ ಮತ್ತು ಹಾಳೆಯ ಲಭ್ಯತೆ ಮೇಲೆ ಆಧರಿತವಾಗಿದೆ.
– ಆರ್‌ಬಿಐ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.